ETV Bharat / state

ಇಬ್ಬರು ನೌಕರರು ವಜಾ, ಮೂವರ ಅಮಾನತು: ಸಾರಿಗೆ ಅಧಿಕಾರಿ - ಹೊಸಪೇಟೆ ಬಸ್​ ನಿಲ್ದಾಣ

ಕರ್ತವ್ಯಲೋಪ ಹಿನ್ನೆಲೆ ಎನ್ಇಕೆಎಸ್​ಆರ್​ಟಿಸಿಯ ಹೊಸಪೇಟೆ ವಿಭಾಗದ ಇಬ್ಬರನ್ನು ವಜಾ ಮಾಡಿ, ಮೂವರನ್ನು ಅಮಾನತು ಮಾಡಲಾಗಿದೆ.

Transport Officer G. Shinayya
ಸಾರಿಗೆ ಅಧಿಕಾರಿ ಜಿ.ಶೀನಯ್ಯ
author img

By

Published : Apr 10, 2021, 5:27 PM IST

ಹೊಸಪೇಟೆ: ಗಂಭೀರ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರ ವಜಾ ಹಾಗೂ ಮೂವರು ನೌಕರರನ್ನು ಸೇವೆಯಿಂದ‌ ಅಮಾನತು ಮಾಡಲಾಗಿದೆ ಎಂದು ಎನ್ಇಕೆಎಸ್​ಆರ್​ಟಿಸಿಯ ಹೊಸಪೇಟೆ ವಿಭಾಗದ ನಿಯಂತ್ರಣಾಧಿಕಾರಿ ಜಿ.ಶೀನಯ್ಯ ಹೇಳಿದ್ದಾರೆ.

ಸಾರಿಗೆ ಅಧಿಕಾರಿ ಜಿ.ಶೀನಯ್ಯ

ಕಚೇರಿಯಲ್ಲಿ ಮಾತನಾಡಿದ ಅವರು, ಇಬ್ಬರು ನೌಕರರು ಕರ್ತವ್ಯಲೋಪ‌ ಎಸಗಿದ್ದರು. ಹಾಗಾಗಿ ಕೆಲಸದಿಂದ ವಜಾ ಮಾಡಲಾಗಿದೆ. ಅಲ್ಲದೇ ಸಂಡೂರಿನಲ್ಲಿ ಇಬ್ಬರು ನೌಕರರು ಬಸ್​ಗೆ ಕಲ್ಲು ತೂರಿದ್ದರು ಹಾಗೂ ಹರಪನಹಳ್ಳಿ ತಾಂತ್ರಿಕ ನೌಕರ ಕರ್ತವ್ಯಲೋಪ ಎಸಗಿದ್ದರು. ಹಾಗಾಗಿ ಮೂವರನ್ನು ಅಮಾನತು‌ ಮಾಡಲಾಗಿದೆ.

ಸಂಸ್ಥೆಯ ಸಿಬ್ಬಂದಿಗೆ ಎಲ್ಲರಿಗೂ ನೋಟಿಸ್ ನೀಡಲಾಗಿದೆ. ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಬೇಕು.ಇಲ್ಲದಿದ್ದರೆ ಕಠಿಣ ಕ್ರಮ ತಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.