ಹೊಸಪೇಟೆ: ಹಂಪಿ ಉತ್ಸವದ ಪ್ರಯುಕ್ತ ಎದುರು ಮಂಟಪ, ಸಾಸಿವೆ ಕಾಳು ಗಣೇಶ, ಶ್ರೀಕೃಷ್ಣ ದೇವರಾಯ ವೇದಿಕೆಗಳಲ್ಲಿ ಕಲಾವಿದರು ತಮ್ಮ ನಾನಾ ಕಲೆಗಳನ್ನು ಪ್ರದರ್ಶಿಸಿದ್ದು, ನೆರೆದ ಸಾವಿರಾರು ಪ್ರೇಕ್ಷಕರು ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು.
ಹಂಪಿಯ ಎದರು ಬಸವಣ್ಣ ಮಂಟಪ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆದವು. ಕಾರ್ಯಕ್ರಮದಲ್ಲಿ ಹಳ್ಳಿಯ ಕಲಾವಿದರಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿತ್ತು. ವೇದಿಕೆಯಲ್ಲಿ ಸುಗಮ ಸಂಗೀತ, ಹಿಂದೂಸ್ತಾನಿ ಸಂಗೀತ ಹಾಗೂ ಶಾಸ್ತ್ರೀಯ ಸಂಗೀತವನ್ನು ಗಾಯಕರು ಹಾಡುತ್ತಿದ್ದರೇ ನೆರೆದ ಪ್ರೇಕ್ಷಕರ ತಲೆದೂಗಿದರು.
ಜಾನಪದ ಶೈಲಿಯ ಲಮಾಣಿ ಹಾಡುಗಳು ಪ್ರೇಕ್ಷಕರನ್ನು ರಂಜಿಸಿದವು. ಕಲಾವಿದರು ಉತ್ಸುಕರಾಗಿ ಪ್ರದರ್ಶನವ ನೀಡುತ್ತಿದ್ದರೇ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಸಂಭ್ರಮಿಸಿ ಪ್ರೋತ್ಸಾಹ ನೀಡಿದರು.