ETV Bharat / state

ಸಿರುಗುಪ್ಪ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಅವಿರೋಧ ಆಯ್ಕೆ - ಬಳ್ಳಾರಿ ಲೇಟೆಸ್ಟ್​ ನ್ಯೂಸ್​

ಸಿರುಗುಪ್ಪ ನಗರಸಭೆ ಅಧ್ಯಕ್ಷರಾಗಿ ದೇಶನೂರು ನಾಗರಾಜ ಹಾಗೂ ಉಪಾಧ್ಯಕ್ಷೆಯಾಗಿ ಗುಲ್ಜಾರ್ ಬೇಗಂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Siruguppa Municipal Council President-Vice-President unanimous selection
ಸಿರುಗುಪ್ಪ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಅವಿರೋಧ ಆಯ್ಕೆ
author img

By

Published : Nov 3, 2020, 8:07 AM IST

ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಸಿರುಗುಪ್ಪ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಅವಿರೋಧ ಆಯ್ಕೆ

ಆರನೇ ವಾರ್ಡ್​ನ ಸದಸ್ಯ ದೇಶನೂರು ನಾಗರಾಜ ಅಧ್ಯಕ್ಷರಾಗಿ ಹಾಗೂ 1ನೇ ವಾರ್ಡ್​ನ ಸದಸ್ಯೆ ಗುಲ್ಜಾರ್ ಬೇಗಂ ಉಪಾಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಈ ಹಿಂದೆಯೂ ಕೂಡ ಕಾಂಗ್ರೆಸ್ ಪಕ್ಷವು ಆಡಳಿತ ನಡೆಸಿತ್ತು.

ಸಿರುಗುಪ್ಪ ನಗರಸಭೆಯು ಒಟ್ಟಾರೆಯಾಗಿ 31 ಸದಸ್ಯರನ್ನ ಒಳಗೊಂಡಿದ್ದು, ಆ ಪೈಕಿ 19 ಕಾಂಗ್ರೆಸ್, 11 ಬಿಜೆಪಿ ಹಾಗೂ ಓರ್ವ ಪಕ್ಷೇತರ ಸದಸ್ಯರಿದ್ದಾರೆ. ಸಿರುಗುಪ್ಪ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯ ಸಂದರ್ಭ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ 20 ಮಂದಿ ಸದಸ್ಯರ ಬೆಂಬಲ ಸೂಚಿಸಿದ್ದರಿಂದ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಬಳ್ಳಾರಿ ಉಪ ವಿಭಾಗಾಧಿಕಾರಿ ರಮೇಶ ಕೋನರೆಡ್ಡಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.