ಹೊಸಪೇಟೆ: ಅನಧಿಕೃತವಾಗಿ ಕಟ್ಟಿದ ಕಟ್ಟಡಗಳನ್ನು ತೆರವುಗೊಳಿಸಲು ನಗರಸಭೆಯು ನೋಟಿಸ್ ಜಾರಿ ಮಾಡಿತ್ತು. ಅಂಗಡಿಯ ಮಾಲೀಕರು ತೆರವು ಕಾರ್ಯವನ್ನು ಮಾಡುತ್ತಿದ್ದಾರಾ ಅಥವಾ ಇಲ್ಲವಾ ಎಂಬುದನ್ನು ತಿಳಿಯಲು ಉಪ ವಿಭಾಗ ದಂಡಾಧಿಕಾರಿ ಶೇಖ್ ತನ್ವೀರ್ ಅಸೀಫ್, ತಹಶೀಲ್ದಾರ್ ಹಾಗೂ ನಗರಸಭೆಯ ಆಯುಕ್ತೆ ಜಯಲಕ್ಷ್ಮಿ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.
ನಗರದ ಗಾಂಧಿ ವೃತ್ತದಲ್ಲಿ ಇಂದು ದರ್ಗಾ ಮಸೀದಿಯ 21 ಮಳಿಗೆಗಳ ತೆರವು ಕಾರ್ಯವನ್ನು ವೀಕ್ಷಿಸಿ ಅಂಗಡಿಯ ಮಾಲೀಕರೊಂದಿಗೆ ಮಾತನಾಡಿದರು. ಸುಪ್ರೀಂ ಕೋಟ್೯ ಆದೇಶವನ್ನು ಪಾಲಿಸಬೇಕು. ಆದೇಶದ ಪ್ರಕಾರ ಮಸೀದಿಗೆ ಹೊಂದಿಕೊಂಡಿರುವ ವ್ಯಾಪಾರಿ ಮಳಿಗೆಗಳು ಅಕ್ರಮವಾಗಿ ಒತ್ತುವರಿ ಮಾಡಿಕೊಂಡ ಜಾಗದಲ್ಲಿವೆ. ನಿಮಗೆ ಕೊಟ್ಟಿರುವ ಸಮಯದಲ್ಲಿ ಅಂಗಡಿಗಳನ್ನು ತೆರವುಗೊಳಿಸಬೇಕು. ಒಂದು ವೇಳೆ ತೆರವುಗೊಳಿಸದಿದ್ದರೆ ತೆರವು ಮಾಡಲಾಗುತ್ತದೆ ಎಂದು ತಿಳಿಸಿದರು.
ಮಸೀದಿಗೆ ಅಂಟಿಕೊಂಡಿರುವ ಚರ್ಚ್ ಜಾಗವನ್ನು ಅತಿಕ್ರಮಿಸಿದ್ದಾರೆ. ಅವರಿಗೆ ಸಹ ನೋಟಿಸ್ ಜಾರಿ ಮಾಡಲಾಗಿದೆ. ಅದನ್ನೂ ಶೀಘ್ರವಾಗಿ ತೆರವುಗೊಳಿಸುವ ಕಾರ್ಯ ಪ್ರಾರಂಭ ಮಾಡಲಾಗುತ್ತದೆ. ನಗರದಲ್ಲಿ ಎಲ್ಲೆಲ್ಲಿ ಸರ್ಕಾರಿ ಜಾಗದಲ್ಲಿ ಅಕ್ರಮ ಕಟ್ಟಗಳು ನಿರ್ಮಾಣವಾಗಿವೆಯೋ ಅವುಗಳನ್ನೂ ತೆರವುಗೊಳಿಸಲಾಗುತ್ತದೆ. ಇದಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು. ಎಲ್ಲರೂ ಸುಪ್ರೀಂ ಕೋರ್ಟ್ ಆದೇಶಕ್ಕೆ ತಲೆ ಬಾಗಬೇಕು ಎಂದರು.