ETV Bharat / state

ಯುಪಿಎ ಮೈತ್ರಿಕೂಟ ಬಲವಾಗಿದೆ : ಸೈಯದ್ ನಾಸೀರ್ ಹುಸೇನ್ ಅಭಿಪ್ರಾಯ

ಈ ದೇಶದಲ್ಲಿ ಎನ್​ಡಿಎ ಮೈತ್ರಿಕೂಟದಲ್ಲೊಂದಾದ ಬಿಜೆಪಿ ಪಕ್ಷವು ಅಹಂಕಾರದಿಂದ ಮೆರೆಯುತ್ತಿದೆ. ರೈತ ವಿರೋಧಿ ಕಾಯಿದೆ ವಿರೋಧಿಸಿದ್ದು ಯುಪಿಎ ಕೂಟ. ಈಗಲೂ ಮೈತ್ರಿಕೂಟ ಬಲವಾಗಿದೆ..

author img

By

Published : Jan 4, 2021, 5:17 PM IST

ರಾಜ್ಯಸಭಾ ಸದಸ್ಯ ಸೈಯದ್ ನಾಸೀರ್ ಹುಸೇನ್
ರಾಜ್ಯಸಭಾ ಸದಸ್ಯ ಸೈಯದ್ ನಾಸೀರ್ ಹುಸೇನ್

ಬಳ್ಳಾರಿ : ಎನ್​ಡಿಎ ಮೈತ್ರಿಕೂಟವನ್ನು ಅನೇಕ ಪಕ್ಷಗಳು ತೊರೆದಿವೆ. ಆದರೆ, ಯುಪಿಎ ಮೈತ್ರಿಕೂಟವನ್ನು ದೂರ ಮಾಡಿರುವ ಉದಾಹರಣೆ ಇಲ್ಲ ಎಂದು ರಾಜ್ಯಸಭಾ ಸದಸ್ಯ ಸೈಯದ್ ನಾಸೀರ್ ಹುಸೇನ್ ಹೇಳಿದ್ದಾರೆ.

ಬಳ್ಳಾರಿಯ ಬುಡಾ ಕಚೇರಿಯ ಆವರಣದಲ್ಲಿ ನಿರ್ಮಾಣಗೊಂಡ ನೂತನ ಕಚೇರಿಯಲ್ಲಿ ಮಾತನಾಡಿದ ಅವರು, ಎನ್​ಡಿಎ ಮೈತ್ರಿಕೂಟದಿಂದ ಈ ದೇಶದ ಪ್ರಾದೇಶಿಕ ಪಕ್ಷಗಳು ದೂರ ಸರಿದಿವೆ. ಆದರೆ, ಯುಪಿಎ ಮೈತ್ರಿಕೂಟದಿಂದ ಯಾವ ಪಕ್ಷವೂ ತೊರೆದಿಲ್ಲ.

ರಾಜ್ಯಸಭಾ ಸದಸ್ಯ ಸೈಯದ್ ನಾಸೀರ್ ಹುಸೇನ್

ಅಂಥಹ ಉದಾಹರಣೆಗಳು ನಮ್ಮ ಮುಂದೆ ಇಲ್ಲ. ಈ ದೇಶದಲ್ಲಿ ಎನ್​ಡಿಎ ಮೈತ್ರಿಕೂಟದಲ್ಲೊಂದಾದ ಬಿಜೆಪಿ ಪಕ್ಷವು ಅಹಂಕಾರದಿಂದ ಮೆರೆಯುತ್ತಿದೆ. ರೈತ ವಿರೋಧಿ ಕಾಯಿದೆ ವಿರೋಧಿಸಿದ್ದು ಯುಪಿಎ ಕೂಟ. ಈಗಲೂ ಮೈತ್ರಿಕೂಟ ಬಲವಾಗಿದೆ ಎಂದರು.

ಆಮ್​ ಆದ್ಮಿ ಪಕ್ಷದ ಕಾರ್ಯಕರ್ತರು ಸೇರಿ ಒಟ್ಟು 8 ಮಂದಿ ರಾಜ್ಯಸಭಾ ಸದಸ್ಯರು ಅಹೋರಾತ್ರಿ ಧರಣಿ ಕುಳಿತು ಎರಡು ಲಕ್ಷ ರೈತರಿಂದ ಸಹಿ ಸಂಗ್ರಹಿಸಿ ರೈತವಿರೋಧಿ ಕಾಯಿದೆಗಳನ್ನ ಪ್ರಬಲವಾಗಿ ವಿರೋಧಿಸಿದ್ದೆವು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.