ವಿಜಯನಗರ: ಅಭಿಮಾನಿಗಳ ಎದೆಯಲ್ಲಿ ಅಪ್ಪು ನೆನಪು ಅಮರ. ಅಪ್ಪು ಮಾಡಿದ ಸಾಮಾಜಿಕ ಕೆಲಸಗಳು ಎಲ್ಲರಿಗೂ ಮಾದರಿ ಆಗುವಂಥದ್ದು. ಸಚಿವರೊಬ್ಬರು ಅಪ್ಪು ಅವರ ಜಾಕೆಟ್‌ನ್ನು ತಮ್ಮ ಕಚೇರಿಯಲ್ಲಿ ಫ್ರೇಮ್ ಹಾಕಿಸಿ ಇಟ್ಟುಕೊಂಡಿದ್ದಾರೆ.
ಈ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಹೊಸಪೇಟೆಗೆ ಪುನೀತ್ ರಾಜ್‌ಕುಮಾರ್ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಭಿಮಾನಿ ಕಿಚಡಿ ವಿಶ್ವನಿಗೆ ಅರಸು ಸಿನಿಮಾದಲ್ಲಿ ಧರಿಸಿದ್ದ ಜಾಕೆಟ್‌ನ್ನು ನೀಡಿದ್ದರು. ಕಿಚಡಿ ವಿಶ್ವ ಆ ಜಾಕೆಟ್ ಅನ್ನು ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದರು.
ಅಪ್ಪು ಕೊಟ್ಟಿದ್ದ ಜಾಕೆಟ್‌ನ್ನು ಸಚಿವರ ಪುತ್ರ ಸಿದ್ಧಾರ್ಥ್ ಸಿಂಗ್ ಅವರಿಗೆ ಕಿಚಡಿ ವಿಶ್ವ ನೀಡಿದ್ದಾರೆ. ಸಿದ್ಧಾರ್ಥ್ ಸಿಂಗ್ ತಮ್ಮ ತಂದೆ ಆನಂದ್ ಸಿಂಗ್ ಕಚೇರಿಯಲ್ಲಿ ಈ ಜಾಕೆಟ್‌ನ್ನು ಫ್ರೇಮ್ ಹಾಕಿಸಿ ಇಟ್ಟಿದ್ದಾರೆ. ಆನಂದ್ ಸಿಂಗ್ ಅವರ ಈ ಅಭಿಮಾನ ಕಂಡು ಅಪ್ಪು ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.
ಇದನ್ನೂ ಓದಿ: ಸಿಎಂಗೆ ಸಾಹಿತಿಗಳಿಂದ ಬಹಿರಂಗ ಪತ್ರ : ಬಸವ ಜಯಂತಿಯಂತೆ ಈದ್ ಆಚರಿಸಿ ಶಾಂತಿ ಮರು ಸ್ಥಾಪನೆಗೆ ಒತ್ತಾಯ