ETV Bharat / state

ಕೆಂಎಫ್​​ನಲ್ಲಿ ರೇವಣ್ಣ ಹಾಲು ಕರೆದಿಲ್ಲ, ಕುಡಿದಿದ್ದಾರೆ: ಶಾಸಕ ಭೀಮಾನಾಯ್ಕ ಗರಂ

ಬಳ್ಳಾರಿಯಲ್ಲಿ ಮಾಜಿ ಸಚಿವ ರೇವಣ್ಣ ವಿರುದ್ಧ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ ಗರಂ ಆಗಿದ್ದಾರೆ.

ಭೀಮಾನಾಯ್ಕ
author img

By

Published : Aug 7, 2019, 12:22 PM IST

ಬಳ್ಳಾರಿ: ಮಾಜಿ ಸಚಿವ ರೇವಣ್ಣ ವಿರುದ್ಧ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ ಗರಂ ಆಗಿದ್ದಾರೆ.

ಮಾಜಿ ಸಚಿವ ರೇವಣ್ಣ ವಿರುದ್ಧ ಶಾಸಕ ಭೀಮಾನಾಯ್ಕ ಗರಂ

ಜಿಲ್ಲೆಯ ವಿದ್ಯಾನಗರ ಮುಖ್ಯ ರಸ್ತೆಯಲ್ಲಿರೋ ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಹಾಲು ಒಕ್ಕೂಟ ಮಹಾಮಂಡಳಿಯ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ವಿಶ್ವಾಸ ಮತಯಾಚನೆ ವೇಳೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರು ಕೆಎಂಎಫ್ ಅಧ್ಯಕ್ಷ ಸ್ಥಾನದಿಂದ ತಾವು ಹಿಂದೆ ಸರಿಯೋದು ಬೇಡ ಎಂದರು.

ತಮ್ಮನ್ನು ಅಧ್ಯಕ್ಷರನ್ನಾಗಿಸುವ ಭರವಸೆಯನ್ನೂ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಾಜಿ ಸಚಿವ ಹೆಚ್.ಡಿ.ರೇವಣ್ಣನವರ ಸಮ್ಮುಖದಲ್ಲೇ ನೀಡಿದ್ದಾರೆ. ಆದರೀಗ ರೇವಣ್ಣ ಅವರು ತಮ್ಮ ಮಾತಿನ ವರಸೆ ಬದಲಿಸಿದ್ದು, ಮೊನ್ನೆ ತಾನೇ ಪತ್ರಿಕೆಯಲ್ಲಿ ಅವರ ಹೇಳಿಕೆಯನ್ನು ಗಮನಿಸಿದೆ. ಭೀಮಾನಾಯ್ಕ ಇನ್ನೂ ಹುಡುಗ,‌ ಅವರಿಗೆಲ್ಲಾ ಕೆಎಂಎಫ್ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಡಲಿಕ್ಕೆ ಆಗುತ್ತಾ ಎಂಬಿತ್ಯಾದಿ ಮಾತುಗಳನ್ನಾಡಿದ್ದಾರೆ.

ರೇವಣ್ಣ ಒಂಭತ್ತು ವರ್ಷ ಕೆಎಂಎಫ್​ನಲ್ಲಿ ಏನು ಮಾಡಿದ್ದಾರೆ ಅನ್ನೋದು ಗೊತ್ತಿದೆ. ಅವರು ಕೆಎಂಎಫ್ ದಿವಾಳಿ ಮಾಡಿದ್ದಾರೆ ಎಂದು ಅವರ ವಿರುದ್ಧ ಸಿಡಿದೆದ್ದರು.

Intro:ಮಾಜಿ ಸಚಿವ ರೇವಣ್ಣ ವಿರುದ್ಧ ಶಾಸಕ ಭೀಮಾನಾಯ್ಕ ಗರಂ
ನಾನು ಸಗಣಿ ಹೊತ್ತು ಬಂದ್ಹಂವ; ಅವರಂತೆ ನಾನು ಎಲ್ಲ ತಿಂದು ತೇಗಿಲ್ಲ!
ಬಳ್ಳಾರಿ: ನಾನು ಚಿಕ್ಕವನಿದ್ದಾಗ. ಎಮ್ಮೆ ಸಾಕೀನಿ. ನಾನು ಸಗಣಿ ಹೊತ್ತು ಬಂದ್ಹಂವ. ಹಸಿ ತಪ್ಪಲು ಕಡ್ಕೊಂಡು ಬಂದು ರಾತ್ರಿ ಎಮ್ಮೆ ಮಲಗೋ ಜಾಗದಲ್ಲಿ ಹಾಕಿ ಆ ತಪ್ಪಲಿಂದಲೇ ಸಗಣಿ ಎತ್ತಿಹಾಕಿದ ಅನುಭವಯಿದೆ. ಅವರಂತೆ ನಾನು ಎಲ್ಲ ತಿಂದು ತೇಗಿಲ್ಲ ಎಂದು ಮಾಜಿ ಸಚಿವ ರೇವಣ್ಣ ವಿರುದ್ಧ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ ಗರಂ ಆಗಿದ್ದಾರೆ.
ಬಳ್ಳಾರಿಯ ವಿದ್ಯಾನಗರ ಮುಖ್ಯರಸ್ತೆಯಲ್ಲಿರೋ ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಹಾಲು ಒಕ್ಕೂಟ ಮಹಾಮಂಡಳಿಯ ಕಚೇರಿಯಲ್ಲಿಂದು ಸಂಜೆ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ವಿಶ್ವಾಸ ಮತಯಾಚನೆ ವೇಳೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರು ಕೆಎಂಎಫ್ ಅಧ್ಯಕ್ಷ ಸ್ಥಾನ
ದಿಂದ ತಾವು ಹಿಂದೆ ಸರಿಯೋದು ಬ್ಯಾಡ. ತಮ್ಮನ್ನು ಅಧ್ಯಕ್ಷರನ್ನಾಗಿಸುವ ಭರವಸೆಯನ್ನೂ ಮಾಜಿ ಸಿಎಂ ಸಿದ್ಧರಾಮಯ್ಯ, ಮಾಜಿ ಸಚಿವ ಹೆಚ್.ಡಿ.ರೇವಣ್ಣನವರ ಸಮಕ್ಷಮದಲ್ಲೇ ಹೇಳಿದ್ದಾರೆ. ಆದರೀಗ ರೇವಣ್ಣ ಅವರು ತಮ್ಮ ಮಾತಿನ ವರಸೆ ಬದಲಿಸಿದ್ದಾರೆ. ಮೊನ್ನೆ ತಾನೇ ಪತ್ರಿಕೆಯಲಿ ಅವರ ಹೇಳಿಕೆಯನ್ನು ಗಮನಿಸಿದೆ. ಭೀಮಾನಾಯ್ಕ ಇನ್ನೂ ಹುಡುಗ.‌ ಅವರಿಗೆಲ್ಲಾ ಕೆಎಂಎಫ್ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಡಲಿಕ್ಕೆ ಆಗುತ್ತಾ ಎಂಬಿತ್ಯಾದಿ ಉದ್ಘಾರದ ಮಾತುಗಳನ್ನಾಡಿದ್ದಾರೆ.
Body:ಮಾಜಿ ಸಚಿವ ರೇವಣ್ಣನಂತೆ ನಾನು ಕೆಎಂಎಫ್ ಹಾಲು, ಬೆಣ್ಣೆ, ತುಪ್ಪ ತಿಂದಿಲ್ಲ. ಅವರು ಇವೆಲ್ಲವನ್ನು ತಿಂದು ತೇಗಿದ್ದಾರೆ ಎಂದು ವ್ಯಂಗ್ಯವಾಡಿದ ಶಾಸಕರು, ಭೀಮಾನಾಯ್ಕ ಯಾರೆಂದು ರೇವಣ್ಣ ಪ್ರಶ್ನಿಸಿದ್ದಾರೆ. ಆದರೆ, ನಾನೀಗ ಕೇಳುವೆ ಈ ಹೆಚ್.ಡಿ.ರೇವಣ್ಣ ಯಾರು? ಅಂತ. ನಾನು ಒಂದು ಲೀಟರ್ ಹಾಕಿಲ್ಲ ಅಂತಾರೆ. ನಾನು ಎಮ್ಮೆ ಕಾದಿದ್ದೇನೆ, ಸೆಗಣಿ ಎತ್ತಿದ್ದೇನೆ. ಆದರೆ, ಆ ರೇವಣ್ಣನಂತೆ ಕೆಎಂಎಫ್ ಹಾಲು ಕುಡಿದಿಲ್ಲ, ಬೆಣ್ಣೆ ತುಪ್ಪ ತಿಂದಿಲ್ಲ ಎಂದು ವ್ಯಂಗ್ಯ ವಾಡಿದ್ದಾರೆ.
ರೇವಣ್ಣ ಒಂಬತ್ತು ವರ್ಷ ಕೆಎಂಎಫ್ ನಲ್ಲಿ ಏನು ಮಾಡಿದ್ದಾರೆ ಅನ್ನೋದು ಗೊತ್ತಿದೆ. ಅವರಂತೆ ನಾನು ಹಾಲು ಕರೆದಿಲ್ಲ, ಹಾಲು‌ ಕುಡುದಿಲ್ಲ, ರೇವಣ್ಣನವ್ರು ಈ ಕೆಎಂಎಫ್ ಅನ್ನು ತಮ್ಮ ಸ್ವಂತ ಮನೆ ಎನ್ನುವಂತೆ ಮಾತಾಡ್ತಾರೆ. ಕೆಎಂಎಫ್ ಗೆ ಅವರೊಬ್ಬರೇ ಅಧ್ಯಕ್ಷರಾಗಿಲ್ಲ. ನನ್ನ ಗೆಸ್ಟ್ ಹೌಸ್ ನಲ್ಲಿ ಆಕಳು, ಹಸು, ಗೀರ್ ಇವೆ‌. ಅವುಗಳ ಫೋಟೋ ತೆಗೆದು ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಮಾಡುವೆ. ರೇವಣ್ಣ ಅವರಿಗೂ ಕಳಿಸಿಕೊಡುವೆ. ಅವರಿಗೂ ಸ್ವಲ್ಪ ಗೊತ್ತಾಗಲಿ. ಅಲ್ಲಿ ಕರೆದ ನಮ್ಮ ಮನೆ ಹಾಲು ರೇವಣ್ಣಗೆ ಕಳಿಸುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_3_HBHALLI_MLA_BHIMANAIK_BYTE_7203310
ETV Bharat Logo

Copyright © 2024 Ushodaya Enterprises Pvt. Ltd., All Rights Reserved.