ETV Bharat / state

ಅಧುನಿಕತೆ ಸೋಕಿಸಿಕೊಳ್ಳದ ಗಡಿನಾಡಿ ಮಳೆ ಮಾಪನ ಯಂತ್ರಗಳು... ಇಲ್ಲಿವೆ ಅಜ್ಜನ ಕಾಲದ ಮಷಿನ್​ಗಳು - Kannada news paper

ಹಳೆಯ ಮಳೆಯ ಮಾಪನಗಳನ್ನು ನಂಬಿಕೊಂಡು ಕೆಲವೊಂದು ಸಮಯದಲ್ಲಿ ಮಳೆಯ ಪ್ರಮಾಣ ಜೋರಾದಾಗ ಮಳೆ ಮಾಪನ ಗೇಜ್ ಅನ್ನು ಅಳತೆ ಮಾಡಲು ವಿಳಂಬವಾಗುವ ಸಾಧ್ಯತೆಯೂ ಹೆಚ್ಚಿದೆ. ಅಂತಹ ಸಂದರ್ಭದಲ್ಲಿ ಮಳೆಯ ಪ್ರಮಾಣದ ವರದಿಯನ್ನು ನೀಡೋದೇ ದೊಡ್ಡ ಸವಾಲಾಗಿ ಪರಿಣಮಿಸಲಿದೆ.

ಅಧುನಿಕ ಸ್ಪರ್ಷದಿಂದ ದೂರವಿರುವ ಗಡಿನಾಡಿ ಮಳೆ ಮಾಪನ ಯಂತ್ರಗಳು
author img

By

Published : Jul 26, 2019, 9:58 PM IST

ಬಳ್ಳಾರಿ : ಬೆರಳ ತುದಿಯಲ್ಲಿ ಮಾಹಿತಿ ಸಿಗುವ ಇಂದಿನ ಕಾಲದಲ್ಲಿ, ಗಡಿನಾಡಿನಲ್ಲಿ ಮಾತ್ರ ಹಳೆಯ ಕಾಲದ ಮಳೆ ಮಾಪನ ಮಷಿನ್ ಗಳ ಬಳೆಕೆ ಮುಂದುವರೆದಿದ್ದು ಅವುಗಳಿಗೆ ಯಾವುದೇ ಅಧುನಿಕ ಸ್ಪರ್ಶ ನೀಡಿಲ್ಲ.

ಜಲಸಂಪನ್ಮೂಲ ಇಲಾಖೆಯಿಂದ ಜಿಲ್ಲೆಯ ಆಯಾ ತಾಲೂಕು ಕೇಂದ್ರಗಳಲ್ಲಿ ಅಳವಡಿಸಲಾದ ಹಿಂದಿನ ಕಾಲದ ಮಳೆ ಮಾಪನ ಮಷಿನ್​ಗಳು ನೀಡುವ ಮಳೆಯ ಮಾಹಿತಿ ಅಧಿಕಾರಿಗಳಿಗೆ ತಿಳಿಸುವಷ್ಟರಲ್ಲಿ ಮಳೆಯ ಗರಿಷ್ಠ ಮತ್ತು ಕನಿಷ್ಠ ನಿಖರತೆ ನಾಶವಾಗುತ್ತಿದೆ.

ತಾಲೂಕಿನ ನಗರ ಹಾಗೂ ಪಟ್ಟಣ ಕೇಂದ್ರಗಳಲ್ಲಿ ಮಳೆ ಮಾಪನ ಮಷಿನ್ ಗಳನ್ನು ಅಳವಡಿಸಲಾಗಿದ್ದು, ಮಳೆಗಾಲದ ಸಂದರ್ಭದಲ್ಲಿ ಎರಡು ಬಾರಿ ಮಳೆ ಮಾಪನ ಗೇಜ್ ಅನ್ನು ಅಳತೆ ಮಾಡಿಕೊಂಡು ಡೈರಿಯಲ್ಲಿ ಬರೆದುಕೊಂಡು ತಹಸೀಲ್ದಾರ್ ಕಚೇರಿಗೆ ಮುಟ್ಟಿಸುವ ಹೊತ್ತಿಗೆ ಮಳೆಯ ಪ್ರಮಾಣವು ಹೆಚ್ಚು- ಕಡಿಮೆಯಾಗುವ ಸಾಧ್ಯತೆ ದಟ್ಟವಾಗಿದೆ.

ಮಳೆಮಾಪನ ಮಷಿನ್ ಗಳ ನಿರ್ವಹಣೆ ಕೊರತೆ

ಅಧುನಿಕ ಸ್ಪರ್ಷದಿಂದ ದೂರವಿರುವ ಗಡಿನಾಡಿ ಮಳೆ ಮಾಪನ ಯಂತ್ರಗಳು

ಜಿಲ್ಲೆಯಲ್ಲಿ ಹಲವು ದಶಕಗಳಿಂದಲೂ ಮಳೆಯ ಅಳತೆಯನ್ನು ಗೋಲ್ ನಿಂದಲೆ ಮಾಡುತ್ತಿದ್ದು, ಅದಕ್ಕಾಗಿ ನಿವೃತ್ತ ನೌಕರರನ್ನು ನೇಮಿಸಲಾಗಿದೆ. ಪ್ರತಿನಿತ್ಯ ಮಳೆಮಾಪನ ಸ್ಥಳಕ್ಕಾಗಮಿಸಿ ಮಳೆಮಾಪನ ಅಳತೆ ಗೋಲ್ ಅನ್ನು ಚೆಕ್ ಮಾಡಿ ತಹಸೀಲ್ದಾರ್ ಕಚೇರಿಗೆ ವರದಿ ಒಪ್ಪಿಸೋದೇ ದೊಡ್ಡ ಕೆಲಸವಾಗಿದೆ.

ಕಳೆದ ಇಪ್ಪತ್ತು ವರ್ಷಗಳಿಂದಲೂ ಈ ಮಳೆ ಮಾಪನ ಅಳತೆ ಗೋಲ್ ಅನ್ನು ಚೆಕ್ ಮಾಡುತ್ತಿರುವೆ. ಪ್ರತಿದಿನ ಬೆಳಗ್ಗೆ 8.30ರ ಸುಮಾರಿಗೆ ಹಾಗೂ ಸಂಜೆ 5.30ರ ಸುಮಾರಿಗೆ ಈ ಅಳತೆಯ ಗೋಲ್ ಅನ್ನು ಚೆಕ್ ಮಾಡುವೆ. ಮಳೆಯ ಪ್ರಮಾಣ ಎಷ್ಟು ಸುರಿದಿದೆ ಎಂಬುದು ಈ ಮಳೆ ಮಾಪನ ಮಷಿನ್ ನಿಂದ ಗೊತ್ತಾಗಲಿದೆ ಎಂದು ಜಲ ಸಂಪನ್ಮೂಲ ಇಲಾಖೆ ನಿವೃತ್ತ ನೌಕರರ ಎಂ.ಸಂಗಪ್ಪ ಹೇಳುತ್ತಾರೆ.

ಕೇಂದ್ರಕ್ಕೆ ಮಳೆ ಮಾಹಿತಿ

ಇನ್ನು ಮಳೆ ಮಾಪನ ಮಾಹಿತಿಯನ್ನು ಕೇವಲ ಕೇಂದ್ರ ಸರ್ಕಾರಕ್ಕೆ ಮಾತ್ರ ನೀಡಲಾಗುತ್ತಿದ್ದು, ಜಿಲ್ಲೆಯ ಆಯಾ ನಗರ ಹಾಗೂ ಪಟ್ಟಣ ಪ್ರದೇಶದಲ್ಲಿ ಮಾತ್ರ ಈ ಮಷಿನ್ ಗಳನ್ನು ಅಳವಡಿಸಲಾಗಿದೆ. ಕೆಲವು ಮಷಿನ್ ಗಳು ದುರಸ್ತಿಯಾಗಿವೆ. ಕೇವಲ 35 ಮಷಿನ್ ಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ ಎಂದು ಜಿಲ್ಲಾ ಸಾಂಖ್ಯಿಕ ಅಧಿಕಾರಿ ವಾಗೀಶ ಆಚಾರ್ಯ ತಿಳಿಸಿದ್ದಾರೆ.

Intro:ಗಣಿನಾಡಿನಲಿ ಓಬಿರಾಯನ ಕಾಲದ ಮಳೆಮಾಪನ ಮಷಿನ್ ಗಳು
ಬಳ್ಳಾರಿ: ಗಣಿನಾಡಿನಲಿ ಓಬಿರಾಯನಕಾಲದ ಮಳೆ‌
ಮಾಪನ ಮಷಿನ್ ಗಳಿವೆ. ನಲವತ್ತಕ್ಕೂ ಅಧಿಕ ಮಷಿನ್
ಗಳ ಪೈಕಿ ಕೇವಲ 35 ಮಷಿನ್ ಗಳು ಮಾತ್ರ ಕಾರ್ಯನಿರ್ವ ಹಿಸುತ್ತಿವೆ.‌ ಉಳಿದವು ದುರಸ್ತಿಯಲ್ಲಿವೆ.‌ ಅವುಗಳ ನಿರ್ವಹಣೆ ಅಷ್ಟಕಷ್ಟೇ.
ಹೌದು, ಜಲಸಂಪನ್ಮೂಲ ಇಲಾಖೆಯಿಂದ ಜಿಲ್ಲೆಯ ಆಯಾ ತಾಲೂಕು ಕೇಂದ್ರಗಳಲ್ಲಿ ಅಳವಡಿಸಲಾದ ಓಬಿರಾಯನ ಕಾಲದ ಮಳೆ ಮಾಪನ ಮಷಿನ್ ಗಳ ಸ್ಥಿತಿಗತಿ.
ಈಗೆಲ್ಲಾ ವಾಟ್ಸಾಪ್, ಟ್ವಿಟರ್, ಇನ್ಸ್ ಸ್ಟ್ರಾಗ್ರಾಮ್, ಫೇಸ್ ಬುಕ್ ಹಾಗೂ ಗೂಗಲ್ ಸರ್ಚ್ ನಲ್ಲೇ ಎಲ್ಲ ಮಾಹಿತಿಯನ್ನು
ಈ ತಾಂತ್ರಿಕ‌ ಯುಗದಲ್ಲಿ ಮಳೆಮಾಪನ ಮಷಿನ್ ಗಳಿಗೆ ಮಾತ್ರ ಯಾವುದೇ ತಂತ್ರಜ್ಞಾನ ವೇಗದ ಸ್ಪರ್ಶವೇ ನೀಡಿಲ್ಲ.
ಬಳ್ಳಾರಿ ನಗರದ ಜಿಲ್ಲಾಸ್ಪತ್ರೆ, ಸರ್ಕಾರಿ ಅತಿಥಿ ಗೃಹದ
ಆವರಣ ಹಾಗೂ ರೈಲ್ವೇ ನಿಲ್ದಾಣ ಸೇರಿದಂತೆ ಜಿಲ್ಲೆಯ
ಆಯಾ ತಾಲೂಕಿನ ನಗರ ಹಾಗೂ ಪಟ್ಟಣ ಕೇಂದ್ರಗಳಲ್ಲಿ
ಮಳೆ ಮಾಪನ ಮಷಿನ್ ಗಳನ್ನು ಅಳವಡಿಸಲಾಗಿದೆ. ಮಳೆಗಾಲದ ಸಂದರ್ಭದಲ್ಲಿ ಎರಡು ಬಾರಿ ಮಳೆ ಮಾಪನ ಗೇಜ್ ಅನ್ನು ಅಳತೆ ಮಾಡಿಕೊಂಡು ಡೈರಿಯಲ್ಲಿ ಬರೆದು ಕೊಂಡು ತಹಸೀಲ್ದಾರ್ ಕಚೇರಿಗೆ ಮುಟ್ಟಿಸುವ ಹೊತ್ತಿಗೆ ಮಳೆಯ ಪ್ರಮಾಣವು ಹೆಚ್ಚು- ಕಡಿಮೆಯಾಗುವ ಸಾಧ್ಯತೆ ದಟ್ಟವಾಗಿದೆ. ಹಾಗೊಂದು ವೇಳೆ ಮಳೆಯ ಪ್ರಮಾಣ ಜೋರಾದ ಸಮಯದಲ್ಲಿ ಈ ಮಳೆ ಮಾಪನ ಗೇಜ್ ಅನ್ನು ಅಳತೆ ಮಾಡಲು ವಿಳಂಬವಾಗುವ ಸಾಧ್ಯತೆಯೂ ಹೆಚ್ಚಿದೆ.
ಅಂತಹ ಸಂದರ್ಭದಲ್ಲಿ ಯಾವ ರೀತಿಯಾಗಿ ಮಳೆಮಾಪನ ವರದಿಯನ್ನು ನೀಡೋದೇ ದೊಡ್ಡ ಸವಾಲಾಗಿ ಪರಿಣಮಿಸ ಲಿದೆ.
ಮಳೆಮಾಪನ ಮಷಿನ್ ಗಳ ನಿರ್ವಹಣೆ ಕೊರತೆ:
ಈ ಮಳೆ ಮಾಪನ ಮಷಿನ್ ಗಳ ನಿರ್ವಹಣೆಯ ಕೊರತೆ
ಎದ್ದು ಕಾಣುತ್ತಿದೆ. ಇದರ ಅಳತೆ ಗೋಲ್ ಅನ್ನು ಅಂದಾಜಿಸಲು ನಿವೃತ್ತ ನೌಕರರನ್ನು ‌ನೇಮಿಸಲಾಗಿದೆ.‌ ಹಲವು ದಶಕದಿಂದಲೂ ಮಳೆಮಾಪನದ ಅಳತೆ ಗೋಲ್ ಅನ್ನು ಅಳತೆ ಮಾಡಲಿದ್ದಾರೆ.
ಪ್ರತಿನಿತ್ಯ ಬೆಳಿಗ್ಗೆ 8.30 ಸಂಜೆ 5.30 ಗಂಟೆಗೆ ಮಳೆಮಾಪನ ಸ್ಥಳಕ್ಕಾಗಮಿಸಿ ಮಳೆಮಾಪನ ಅಳತೆ ಗೋಲ್ ಅನ್ನು ಚೆಕ್ ಮಾಡುವ ನಿವೃತ್ತ ನೌಕರರು ತಹಸೀಲ್ದಾರ್ ಕಚೇರಿಗೆ ವರದಿ ಒಪ್ಪಿಸೋದೇ ದೊಡ್ಡ ಕೆಲಸವಾಗಿದೆ. ಕೆಲವೊಮ್ಮೆ ಮಳೆಯು ಜೋರಾಗಿ ಸುರಿದಾಗ ಆ ನಿವೃತ್ತ ನೌಕರರ ಪಾಡು ಹೇಳ ತೀರದು.

Body:ಜಲ ಸಂಪನ್ಮೂಲ ಇಲಾಖೆ ನಿವೃತ್ತ ನೌಕರರ ಎಂ.ಸಂಗಪ್ಪ ನವರು ಮಾತನಾಡಿ, ಕಳೆದ ಇಪ್ಪತ್ತು ವರ್ಷಗಳಿಂದಲೂ ಈ ಮಳೆ ಮಾಪನ ಅಳತೆ ಗೋಲ್ ಅನ್ನು ಚೆಕ್ ಮಾಡುತ್ತಿರುವೆ. ಪ್ರತಿದಿನ ಬೆಳಿಗ್ಗೆ 8.30ರ ಸುಮಾರಿಗೆ ಹಾಗೂ ಸಂಜೆ 5.30ರ ಸುಮಾರಿಗೆ ಈ ಅಳತೆಯ ಗೋಲ್ ಅನ್ನು ಚೆಕ್ ಮಾಡುವೆ. ಮಳೆಯ ಪ್ರಮಾಣ ಎಷ್ಟು ಸುರಿದಿದೆ ಎಂಬುದು ಈ ಮಳೆ ಮಾಪನ ಮಷಿನ್ ನಿಂದ ಗೊತ್ತಾಗಲಿದೆ ಎಂದರು.
ಕೇಂದ್ರಕ್ಕೆ ಮಳೆ ಮಾಹಿತಿ: ಮಳೆಮಾಪನ ಮಷಿನ್ ಗಳಿಂದ ಚೆಕ್ ಮಾಡುವ ಮಳೆ ಮಾಪನ ಮಾಹಿತಿಯನ್ನು ಕೇವಲ ಕೇಂದ್ರ ಸರ್ಕಾರಕ್ಕೆ ಮಾತ್ರ ನೀಡಲಾಗುತ್ತದೆ.‌ ಜಿಲ್ಲೆಯ ಆಯಾ ನಗರ ಹಾಗೂ ಪಟ್ಟಣ ಪ್ರದೇಶದಲ್ಲಿ ಮಾತ್ರ ಈ ಮಷಿನ್ ಗಳನ್ನು ಅಳವಡಿಸಲಾಗಿದೆ. ಕೆಲವು ಮಷಿನ್ ಗಳು ದುರಸ್ತಿಯಾಗಿವೆ. ಕೇವಲ 35 ಮಷಿನ್ ಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ ಎಂದು ಜಿಲ್ಲಾ ಸಾಂಖ್ಯಿಕ ಅಧಿಕಾರಿ ವಾಗೀಶ ಆಚಾರ್ಯ ತಿಳಿಸಿದ್ದಾರೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:ಪವರ್ ಡೈರೆಕ್ಟರ್ ನಲ್ಲಿ ಈ ವಿಡಿಯೊ ಕಳಿಸಿರುವೆ. ಗಮನಿಸಿರಿ.
KN_BLY_4_RAIN_GUAGE_MACHINE_STORY_VISUALS_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.