ಹೊಸಪೇಟೆ (ವಿಜಯನಗರ) : ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಶ್ರೀ ಕಂಠಾಪುರ ತಾಂಡಾದ ಯುವಕರು ಕೊರೊನಾ ಸೋಂಕಿತ 100ಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ಆಹಾರ ಧಾನ್ಯ ಪೂರೈಕೆ ಮಾಡಿದ್ದಾರೆ.ಪ
ಸೋಂಕಿತರಿಗೆ 15 ದಿನಕ್ಕೆ ಆಗುವಷ್ಟು ರೇಷನ್, ತರಕಾರಿ ವಿತರಿಸಿದ್ದಾರೆ. ಕಳೆ ದಿನಗಳ ಹಿಂದೆ ಎರಡು ದಿನಗಳ ಅಂತರದಲ್ಲಿ ಶ್ರೀ ಕಂಠಾಪುರ ತಾಂಡಾದಲ್ಲಿ ಕೊರೊನಾ ಸೋಂಕಿನಿಂದ ಮೂವರು ಮತ್ತು ನಾನ್ ಕೋವಿಡ್ನಿಂದ ಮೂವರು ಮೃತಪಟ್ಟಿದ್ದರು. ಸದ್ಯ ತಾಂಡದಲ್ಲಿ 50ಕ್ಕೂ ಹೆಚ್ಚು ಪಾಸಿಟಿವ್ ಕೇಸ್ಗಳಿವೆ.
ನಿಂಬಳಗೆರೆ ಗ್ರಾಮದ ಸುತ್ತ ವಿಷ್ಣುಸೇನಾ ಸಮಿತಿಯಿಂದ ಸ್ಯಾನಿಟೈಸ್:
ಕೊರೊನಾ ಹರಡದಂತೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗಡಿ ಗ್ರಾಮ ನಿಂಬಳಗೆರೆ ಗ್ರಾಮದ ಸುತ್ತಲೂ ವಿಷ್ಣು ಸೇನಾ ಸಮಿತಿಯ ಸದಸ್ಯರು ಸ್ಯಾನಿಟೈಸರ್ ಸಿಂಪಡಣೆ ಮಾಡಿದರು.
ವಿಷ್ಣುಸೇನಾ ಸಮಿತಿ ಬ್ಯಾನರ್ ಅಡಿಯಲ್ಲಿ ಅದೇ ಗ್ರಾಮದ ಅರವಿಂದ ತನ್ನ ಟಾಟಾ ಏಸ್ನಲ್ಲಿ ಎರಡು ಸಿಂಟೆಕ್ಸ್ನಲ್ಲಿ ತಂದಿದ್ದ ಸುಮಾರು 20 ಲೀಟರ್ ಸ್ಯಾನಿಟೈಸರ್ನ್ನು ಗ್ರಾಮದ ಸುತ್ತಲೂ ಸಿಂಪಡಣೆ ಮಾಡಿದರು.
ಸಮಿತಿಯ ಸದಸ್ಯರಾದ ವಿನಾಯಕ, ಗಡ್ಡೇರ್ ರವಿಕುಮಾರ, ಪ್ರವೀಣ ಜೇನುಕೋಟೆ, ದಾದಾಪೀರ, ಅಜಯ, ಕೊಟ್ರೇಶ ಈ ಕಾರ್ಯಕ್ಕೆ ಕೈ ಜೋಡಿಸಿದ್ರು. ಪಿಡಿಒ ಸಿ.ಉಮಾಪತಿ ಸಾಥ್ ನೀಡಿದ್ರು.
ಯುವಕರೆಲ್ಲರೂ ಒಗ್ಗೂಡಿಕೊಂಡು ನಮ್ಮ ಗ್ರಾಮದಲ್ಲಿ ಸ್ಯಾನಿಟೈಸರ್ ಸಿಂಪಡಣೆ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಮನೆಯಲ್ಲಿಯೇ ಇರುವ ಮೂಲಕ ನಾವು ಕೊರೊನಾ ತಡೆಗಟ್ಟಲು ಮುಂದಾಗಬೇಕು ಎಂದು ಗ್ರಾಮದ ಯುವ ಮುಖಂಡ ಅನ್ವರ್ ಸಾಹೇಬ್ ತಿಳಿಸಿದ್ದಾರೆ.