ETV Bharat / state

ಜೂ‌.18 ರಿಂದ 30ರವರೆಗೆ ಜಿಂದಾಲ್​ ನಿಷೇಧ : ಜಿಲ್ಲಾಧಿಕಾರಿ

ಬಳ್ಳಾರಿಯಲ್ಲಿ ಜೂ‌.18 ರಿಂದ 30ರವರೆಗೆ ಜಿಂದಾಲ್ ಒಳ ಪ್ರವೇಶಿಸುವಿಕೆ ಮತ್ತು ಹೊರಹೋಗುವಿಕೆ ಗೇಟ್ ಬಳಿ ಸಂಪೂರ್ಣ ಬ್ಯಾರಿಕೇಡ್ ಅಳವಡಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ತಿಳಿಸಿದ್ದಾರೆ.

Banning of Barricades in Bellary from 18th to 30th June
ಬಳ್ಳಾರಿಯಲ್ಲಿ ಜೂ‌.18 ರಿಂದ 30ರವರೆಗೆ ನಿಷೇಧ, ಬ್ಯಾರಿಕೇಡ್ ಅಳವಡಿಕೆ : ಜಿಲ್ಲಾಧಿಕಾರಿ
author img

By

Published : Jun 17, 2020, 2:34 AM IST

ಬಳ್ಳಾರಿ : ತಮ್ಮ ಸಿಬ್ಬಂದಿಯನ್ನು ಕಾರ್ಖಾನೆಯ ಟೌನ್​ಶಿಪ್​​ನಲ್ಲಿ ಉಳಿಸಿಕೊಂಡೇ ಕೆಲಸ ಮಾಡಿಕೊಳ್ಳಬೇಕು ಮತ್ತು ಸಿಬ್ಬಂದಿ ಹೊರಗಡೆ ಹಳ್ಳಿ ಮತ್ತು ನಗರಕ್ಕೆ ಬರದ ರೀತಿಯಲ್ಲಿ ಪ್ರವೇಶ ಮತ್ತು ಹೊರಹೋಗುವಿಕೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ. ಅಗತ್ಯ ಸೇವೆಗಳನ್ನು ಅನುಮತಿ ಪಡೆದು ಒಳ ಸಂಚರಿಸುವುದನ್ನು ಹೊರತುಪಡಿಸಿ ಉಳಿದವುಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.

ಈ ಆದೇಶವು ಜೂ.18ರಿಂದ ಜಾರಿಗೆ ಬರಲಿದ್ದು, ಜೂ.30ರವರೆಗೆ ಜಾರಿಯಲ್ಲಿರಲಿದೆ. ಜಿಂದಾಲ್ ಒಳ ಪ್ರವೇಶಿಸುವಿಕೆ ಮತ್ತು ಹೊರಬರುವಿಕೆ ಗೇಟ್ ಬಳಿ ಸಂಪೂರ್ಣ ಬ್ಯಾರಿಕೇಡ್ ಅಳವಡಿಸಲಾಗುತ್ತಿದೆ ಎಂದು ವಿವರಿಸಿದ ಅವರು, ಕೋಮೋರ್ಬಿಡಿಟಿ ಪ್ರಕರಣಗಳಿಂದ 838 ಜನ ಜಿಂದಾಲ್ ಸಿಬ್ಬಂದಿ ಬಳಲುತ್ತಿದ್ದು, ಇವರನ್ನು ಸಂಬಳ ಸಹಿತ ರಜೆ ಮೇಲೆ ಜಿಂದಾಲ್ ಈಗಾಗಲೇ ಕಳುಹಿಸಲು ಒಪ್ಪಿಕೊಂಡಿದೆ ಎಂದರು.

ಇದುವರೆಗೆ 146 ಪ್ರಕರಣಗಳು ದಾಖಲಾಗಿವೆ. 633 ಪ್ರಥಮ ಸಂಪರ್ಕಿತರಿದ್ದು, ಅವರನ್ನು ಸಾಂಸ್ಥಿಕ ಕ್ವಾರಂಟೈನ್​ ನಲ್ಲಿರಿಸಲಾಗಿದೆ ಎಂದು ವಿವರಿಸಿದರು.

ಕೋವಿಡ್ ಕೇಸ್​​ಗಳು ಹೆಚ್ಚಿನ ಪ್ರಮಾಣದಲ್ಲಿ ಬಂದ ಸಂದರ್ಭದಲ್ಲಿ ಚಿಕಿತ್ಸೆ ನೀಡಲು ಅನುಕೂಲವಾಗುವ ದೃಷ್ಟಿಯಿಂದ ತಾಲೂಕು ಆಸ್ಪತ್ರೆಗಳನ್ನು ಅಗತ್ಯ ಸಲಕರಣೆಗಳೊಂದಿಗೆ ಸಿದ್ಧಪಡಿಸಲಾಗಿದೆ ಎಂದರು.

ಎಸ್ಪಿ ಸಿ.ಕೆ.ಬಾಬಾ ಮಾತನಾಡಿ, ಸಂಪೂರ್ಣ ಬ್ಯಾರಿಕೆಡ್ ಹಾಕಲಾಗುವುದು ಮತ್ತು ಯಾವುದೇ ರೀತಿಯ ‌ಚಲನವಲನವಾಗದಂತೆ ನೋಡಿಕೊಳ್ಳಲಾಗುವುದು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.