ETV Bharat / state

ಕೊರೊನಾ ಕುರಿತಾಗಿ ಹಂಪಿಯಲ್ಲಿ ಮುಂಜಾಗೃತ ಕೈಗೊಳ್ಳಬೇಕು: ಎಸಿ ಶೇಖ್ ತನ್ವೀರ್ ಅಸೀಫ್

ನಗರಾಭಿವೃದ್ಧಿ ಪ್ರಾಧಿಕಾರದ ಕಛೇರಿಯಲ್ಲಿ ಇಂದು ನಗರದ ಹೋಟೆಲ್ ಮಾಲೀಕರು ಹಾಗೂ ತಾಲೂಕು ಅಧಿಕಾರಿಗಳ ಜೊತೆ ಕೊರೊನಾ ವೈರಸ್ ಜಾಗೃತಿ ಕುರಿತು ಚರ್ಚಿಸಿದರು.

Awareness discussion on coronavirus with city hotel owners
ಹೋಟೆಲ್ ಮಾಲಿಕರ ಜೊತೆ ಕೊರೊನಾ ವೈರಸ್ ಕುರಿತು ಚರ್ಚೆ
author img

By

Published : Mar 10, 2020, 1:15 AM IST

ಹೊಸಪೇಟೆ: ಐತಿಹಾಸಿಕ ಹಂಪಿಯನ್ನು ನೋಡಲು ಪ್ರತಿದಿನ ಸಾವಿರಾರು ಪ್ರವಾಸಿಗರು ಬರುತ್ತಾರೆ. ನಗರದ ಹೋಟೆಲ್ ಮಾಲೀಕರು ವಿದೇಶಿ ಪ್ರವಾಸಿಗರನ್ನು ಗುರುತಿಸಿ ಅವರ ದಾಖಲೆ ಮತ್ತು ಆರೋಗ್ಯದ ಕುರಿತು ವೈದ್ಯಾಧಿಕಾರಿಗಳ ಗಮನಕ್ಕೆ ತರಬೇಕೆಂದು ಉಪ ವಿಭಾಗದ ದಂಡಾಧಿಕಾರಿ ಶೇಖ್ ತನ್ವೀರ್ ಅಸೀಫ್ ತಿಳಿಸಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಕಛೇರಿಯಲ್ಲಿ ಇಂದು ನಗರದ ಹೋಟೆಲ್ ಮಾಲೀಕರು ಹಾಗೂ ತಾಲೂಕು ಅಧಿಕಾರಿಗಳ ಜೊತೆ ಕೊರೊನಾ ವೈರಸ್ ಕುರಿತು ಜಾಗೃತಿಯ ಕುರಿತು ಚರ್ಚಿಸಿದರು.

ಕೊರೊನಾ ವೈರಸ್ ಕುರಿತಾಗಿ ಪ್ರವಾಸಿ ತಾಣ ಹಂಪಿ ಹಾಗೂ ತಾಲೂಕಿನಲ್ಲಿ ಮುಂಜಾಗೃತ ಕ್ರಮ ಕೈಗೊಳ್ಳಬೇಕು. ಹೋಟೆಲ್ ಮಾಲೀಕರು ವಿದೇಶಿಯರ ಜೊತೆ ಮಾತನಾಡುವಾಗ ತಮ್ಮ ಸಿಬ್ಬಂದಿಗೆ ಮಾಸ್ಕ್ ಹಾಕಿಕೊಳ್ಳುವಂತೆ ಮನವಿಯನ್ನು ಮಾಡಿ. ಅವರಿಗೆ ಸಹ ಮಾಸ್ಕನ್ನು ಧರಿಸುವಂತೆ ತಿಳುವಳಿಕೆಯನ್ನು ನೀಡಿ ಎಂದರು.

ಹೋಟೆಲ್ ಮಾಲೀಕರ ಜೊತೆ ಕೊರೊನಾ ವೈರಸ್ ಕುರಿತು ಚರ್ಚೆ

ಹೋಟೆಲ್ ಮಾಲೀಕರು ವಿದೇಶಿಗರಿಗೆ ಯಾವುದಾದರು ಕಾಯಿಲೆ ಇದ್ದರೆ ವೈದ್ಯಾಧಿಕಾರಿಗಳ ಗಮನಕ್ಕೆ ತರಬೇಕು. ವೈದ್ಯಾಧಿಕಾರಿಗಳ ತಂಡವು ನಗರ ರೈಲ್ವೆ ನಿಲ್ದಾಣದಲ್ಲಿ ಮತ್ತು ಬಸ್ ನಿಲ್ದಾಣಗಳಲ್ಲಿ ಜನರಿಗೆ ಮತ್ತು ವಿದೇಶಿ ಪ್ರವಾಸಿಗರಿಗೆ ಜಾಗೃತಿಯನ್ನು ಮೂಡಿಸುತ್ತಿದ್ದಾರೆ. ಶಾಲೆಗಳಲ್ಲಿ ಮಕ್ಕಳು ಮಾಸ್ಕ್​​ನ್ನು ಧರಿಸುವ ಅವಶ್ಯಕತೆಯಿಲ್ಲ. ವಿದೇಶದಿಂದ ಬಂದಿರುವ ಸ್ವದೇಶಿಯರಿಗೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಆರೋಗ್ಯವನ್ನು ತಪಾಷಣೆಯನ್ನು ಮಾಡಲಾಗುತ್ತಿದೆ ಎಂದರು.

ಸಾಮಾಜಿಕ ಜಾಲತಾಣಗಳಲ್ಲಿ ಈ ವೈರಸ್ ಕುರಿತು ಅನವಶ್ಯಕ ವಿಷಯಗಳನ್ನು ಹೇಳಲಾಗುತ್ತಿದ್ದು, ಇದು ಸರಿಯಲ್ಲ ಎಂದರು. ಮಾಧ್ಯಮದವರು ಜನರಿಗೆ ಭಯ ಬರಿಸುವಂತಹ ವರದಿಗಳನ್ನು ಮಾಡುತ್ತಿದ್ದು, ಹಾಗೂ ವೈದ್ಯರ ಗುಪ್ತ ಚಿಕಿತ್ಸೆಯನ್ನು ಬಹಿರಂಗ ಪಡಿಸುತ್ತಿದ್ದಾರೆ. ಇಂತಹ ವರದಿಗಳನ್ನು ಮಾಡಬಾರದು ಎಂದರು. ಮತ್ತು ತಪಾಷಣೆ ಮಾಡುವಾಗ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೆ ಮಾಡುವುದರಿಂದ ತಪ್ಪು ಸಂದೇಶ ಹೋಗುತ್ತಿದೆ ಎಂದು ಹೇಳಿದರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.