ಬಳ್ಳಾರಿ: ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಶ್ರೀ ಊರಮ್ಮದೇವಿ ಹೊಂಡದಲ್ಲಿ ಮುಖ ತೊಳೆಯಲು ಹೋಗಿ ವ್ಯಕ್ತಿಯೋರ್ವ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.
ಪಟ್ಟಣದ ರಾಜೀವ ಗಾಂಧೀನಗರ ನಿವಾಸಿ ಭೋಜರಾಜ (55 ವರ್ಷ ) ಮೃತ ವ್ಯಕ್ತಿ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಕೂಡ್ಲಿಗಿ ಪೊಲೀಸ್ ಠಾಣೆಯ ಸಿಪಿಐ ಪಂಪನಗೌಡ, ಪಿಎಸ್ಐ ತಿಮ್ಮಪ್ಪ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.