ETV Bharat / state

ಮದ್ಯದ ಅಮಲಿನಲ್ಲಿ ಪತ್ನಿಯನ್ನೇ ಕೊಲೆ ಮಾಡಿದ ವಿಕೃತ ವ್ಯಕ್ತಿ - intoxication of alcohol

ಮದ್ಯದ ಅಮಲಿನಲ್ಲಿ ತನ್ನ ಪಕ್ಕದಲ್ಲೇ ಮಲಗಿದ್ದ ಪತ್ನಿಯನ್ನೇ ಕೊಡಲಿಯಿಂದ ಕೊಲೆ ಮಾಡಿ ವಿಕೃತಿ ಮೆರೆದ ಘಟನೆ ಬಳ್ಳಾರಿ ಜಿಲ್ಲೆಯ ಹಡಗಲಿ ತಾಲೂಕಿನ ವಡ್ಡಿನಹಳ್ಳಿ ತಾಂಡದಲ್ಲಿ ನಡೆದಿದೆ. ಸದ್ಯ ಈ ಕುರಿತು ಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮದ್ಯದ ಅಮಲಿನಲ್ಲಿ ಪತ್ನಿಯನ್ನೇ ಕೊಲೆಗೈದ ವಿಕೃತ ವ್ಯಕ್ತಿ
author img

By

Published : Sep 6, 2019, 4:48 PM IST

Updated : Sep 6, 2019, 5:00 PM IST

ಬಳ್ಳಾರಿ: ಮದ್ಯದ ಅಮಲಿನಲ್ಲಿ ತನ್ನ ಪಕ್ಕದಲ್ಲೇ ಮಲಗಿದ್ದ ಪತ್ನಿಯನ್ನೇ ಕೊಡಲಿಯಿಂದ ಕೊಲೆ ಮಾಡಿ ವಿಕೃತಿ ಮೆರೆದ ಘಟನೆಯು ಜಿಲ್ಲೆಯ ಹಡಗಲಿ ತಾಲೂಕಿನ ವಡ್ಡಿನಹಳ್ಳಿ ತಾಂಡದಲ್ಲಿ ನಡೆದಿದೆ.

ಜಿಲ್ಲೆಯ ಹಡಗಲಿ ತಾಲೂಕಿನ ವಾಚ್ಯಾನಾಯ್ಕ ಎಂಬ ವ್ಯಕ್ತಿ ತನ್ನ ಪತ್ನಿ ಜ್ಯೋತಿಬಾಯಿ (40) ಯನ್ನು ಕೊಡಲಿಯಿಂದ ಮರ್ಡರ್​ ಮಾಡಿದ್ದು, ಸದ್ಯ ಆತ ಹಡಗಲಿ ಪೊಲೀಸರ ಅತಿಥಿಯಾಗಿದ್ದಾನೆ. ಈಕೆ ಕೂಲಿ ಕಾರ್ಮಿಕರಾಗಿದ್ದು ಇದೀಗ ತನ್ನ ಪತಿಯ ಕುಡಿತದ ಅಮಲಿಗೆ ಬಲಿಯಾಗಿದ್ದಾಳೆ.

ಗುರುವಾರ ರಾತ್ರಿ ಕಂಠಪೂರ್ತಿ ಮದ್ಯ ಸೇವನೆ ಮಾಡಿ ಮನೆಗೆ ತೆರಳಿದ್ದ ವಾಚ್ಯಾನಾಯ್ಕ ಅವರೊಂದಿಗೆ ಪತ್ನಿ ಜ್ಯೋತಿಬಾಯಿ ಅವರು ಜಗಳಕ್ಕಿಳಿದಿದ್ದಾರೆ. ಅದೇ ಸಿಟ್ಟಿನಿಂದಾಗಿ ರಾತ್ರಿ ವೇಳೆ ತನ್ನ ಪಕ್ಕದಲ್ಲೇ ಮಲಗಿದ್ದ ಆಕೆಯ ಕತ್ತಿಗೆ ಕೊಡಲಿಯಿಂದಲೇ ಕೊಚ್ಚಿ ಕೊಲೆಗೈದಿದ್ದಾರೆ. ನಿದ್ರೆಗೆ ಜಾರಿದ್ದ ಜ್ಯೋತಿಬಾಯಿ ರಕ್ತದ ಮಡುವಿನಲ್ಲೇ ಚಿರನಿದ್ರೆಗೆ ಜಾರಿದ್ದಾರೆ. ಸದ್ಯ ಹಡಗಲಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Intro:ಮದ್ಯದ ಅಮಲಿನಲ್ಲಿ ತನ್ನಪಕ್ಕದಲ್ಲೇ ಮಲಗಿದ್ದ ಪತ್ನಿಯನ್ನೇ ಕೊಲೆಗೈದ ವಿಕೃತ ವ್ಯಕ್ತಿ..!
ಬಳ್ಳಾರಿ: ಮದ್ಯದ ಅಮಲಿನಲ್ಲಿ ತನ್ನಪಕ್ಕದಲ್ಲೇ ಮಲಗಿದ್ದ ಪತ್ನಿಯನ್ನೇ ಕೊಡಲಿಯಿಂದ ಕೊಲೆಗೈದ ಘಟನೆಯು ಜಿಲ್ಲೆಯ ಹಡಗಲಿ ತಾಲೂಕಿನ ವಡ್ಡಿನಹಳ್ಳಿ ತಾಂಡದಲ್ಲಿ ನಡೆದಿದೆ. ಆತನು ತನ್ನ ವಿಕೃತಿಯನ್ನು ಮೆರೆದಿದ್ದಾನೆ.
ಜಿಲ್ಲೆಯ ಹಡಗಲಿ ತಾಲೂಕಿನ ಜ್ಯೋತಿಬಾಯಿ (40) ಕೊಲೆಯಾದ ಕೂಲಿ ಕಾರ್ಮಿಕ ಮಹಿಳೆ ಎಂದು ಗುರುತಿಸಲಾಗಿದೆ. ಆಕೆಯ ಪತಿ ವಾಚ್ಯಾನಾಯ್ಕ ಎಂಬುವವರೇ ಕೊಲೆಗೈದು ಹಡಗಲಿ ಪೊಲೀಸರ ಅತಿಥಿಯಾಗಿದ್ದಾನೆ.
ಗುರುವಾರ ರಾತ್ರಿ ಕಂಠಪೂರ್ತಿ ಮದ್ಯ ಸೇವನೆ ಮಾಡಿ ಮನೆಗೆ ತೆರಳಿದ್ದ ವಾಚ್ಯಾನಾಯ್ಕ ಅವರೊಂದಿಗೆ ಪತ್ನಿ ಜ್ಯೋತಿಬಾಯಿ ಅವರು ಜಗಳಕ್ಕಿಳಿದಿದ್ದಾರೆ.
Body:ಅದೇ ಸಿಟ್ಟಿನಿಂದಾಗಿ ರಾತ್ರಿವೇಳೆ ತನ್ನ ಪಕ್ಕದಲ್ಲೇ ಮಲಗಿದ್ದ ಆಕೆಯ ಕತ್ತುವಿಗೆ ಕೊಡಲಿಯಿಂದಲೇ ಕೊಚ್ಚಿ ಕೊಲೆಗೈದಿದ್ದಾರೆ. ನಿದ್ರೆಗೆ ಜಾರಿದ್ದ ಜ್ಯೋತಿಬಾಯಿ ಅವರು ರಕ್ತದ ಮಡುವಿನಲ್ಲೇ ಚಿರನಿದ್ರೆಗೆ ಜಾರಿದ್ದಾರೆ.
ಪ್ರತಿದಿನವೂ ಮದ್ಯ ಸೇವನೆ ಮಾಡಿ ಬರುತ್ತಿರೋದರಿಂದ ಜ್ಯೋತಿಬಾಯಿ ಪತಿಯೊಂದಿಗೆ ಜಗಳವಾಡುತ್ತಿದ್ದ. ನಿನ್ನೆಯ
ದಿನ ವಿಪರೀತ ಮದ್ಯ ಸೇವನೆ ಮಾಡಿದ್ದ ಆತನು ಪತ್ನಿಯನ್ನು ಕೊಲೆ ಮಾಡಿದ್ದಾರೆ. ದಶಕಗಳ ಹಿಂದಷ್ಟೇ ವಿವಾಹವಾಗಿದ್ದ ಈ ದಂಪತಿ ಕೂಲಿ, ನಾಲಿ ಮಾಡಿಕೊಂಡೇ ಇಬ್ಬರು ಮಕ್ಕಳೊಂದಿಗೆ ಜೀವನ ಸಾಗಿಸುತಿದ್ದರು. ಹಡಗಲಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_2_HADAGALI_MURDER_NEWS_7203310

KN_BLY_2a_HADAGALI_MURDER_NEWS_7203310

KN_BLY_2b_HADAGALI_MURDER_NEWS_7203310
Last Updated : Sep 6, 2019, 5:00 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.