ಬೆಂಗಳೂರು : ಕನ್ನಡ ಭಾವ-ಬದುಕು ಕಲ್ಪನೆಯೊಂದಿಗೆ ಕನ್ನಡದ ನಮ್ಮತನದ ಬಗ್ಗೆ ಚಿಂತನ-ಮಂಥನ ಕಾರ್ಯಕ್ರಮವನ್ನು ಬೆಂಗಳೂರಿನ ಮಣಿಪಾಲ್ ಸೆಂಟರ್‌ನಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ನಂತರ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗಾಭರಣ 'ಈಟಿವಿ ಭಾರತ'ಗೆ ಪ್ರತಿಕ್ರಿಯಿಸಿದ್ದಾರೆ. ಡಿಸೆಂಬರ್ 5ರ ಕರ್ನಾಟಕ ಬಂದ್ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸುತ್ತ, ಬಂದ್ ಮಾಡುವುದರಲ್ಲಿ ತಪ್ಪೇನಿಲ್ಲ.
ಮರಾಠ ಅಭಿವೃದ್ಧಿ ನಿಗಮದಂತೆ ಸಾಕಷ್ಟು ನಿಗಮಗಳಿವೆ ಹಾಗೂ ಮತ್ತಷ್ಟು ನಿಗಮಗಳು ಆಗುತ್ತವೆ ಎಂದರು.
ಇದನ್ನು ಕನ್ನಡ ಸಂಘಟನೆಗಳು ವಿರೋಧ ಮಾಡುವುದರಲ್ಲಿ ತಪ್ಪೇನಿಲ್ಲ. ಬೆಳಗಾವಿಯನ್ನು ನೆನಪಿಸಿಕೊಂಡರೆ ನನಗೂ ರಕ್ತ ಕುದಿಯುತ್ತೆ.
ಗಲಾಟೆ ಮಾಡುವ ಮರಾಠಿಗರಿಗೆ ಸರಿಯಾದ ಸಮಯದಲ್ಲಿ ಉತ್ತರ ಕೊಡೋಣ ಎಂದು ಗಡಿ ವಿಚಾರವಾಗಿ ತಗಾದೆ ತೆಗೆಯುವ ಪುಂಡರಿಗೆ ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ಕಡ್ಡಾಯವಾಗಿ ಕನ್ನಡಿಗರಿಗೇ ಕಾಯಕ.. ಈ ಅಭಿಯಾನ ನಡೆಯಬೇಕು.. ನಿರ್ದೇಶಕ ಟಿ ಎಸ್ ನಾಗಾಭರಣ