ETV Bharat / state

ತಪ್ಪೇನೈತಿ ಬಿಡಿ, ಸತೀಶಣ್ಣನ ಜತೆ ರಮೇಶಣ್ಣಂಗೂ ಸಚಿವ ಸ್ಥಾನ ಕೊಡ್ಬೇಕು : ಶಾಸಕ ಮಹೇಶ ಕುಮಟಳ್ಳಿ - undefined

ರಮೇಶ್​ ಜಾರಕಿಹೊಳಿ ಕಾಂಗ್ರೆಸ್ ಪಕ್ಷದ ಲಕ್ಷ್ಮಣ ರೇಖೆ ದಾಟಿಲ್ಲ. ಅವರು ಕಾಂಗ್ರೆಸ್​ನಲ್ಲೇ ಇದ್ದಾರೆ. ಹೀಗಾಗಿ ಸತೀಶ್ ಜತೆಗೆ ರಮೇಶ್​ ಜಾರಕಿಹೊಳಿಗೂ ಸಚಿವ ಸ್ಥಾನ ಕೊಡಬೇಕು. ಯಾವುದೇ ಹುದ್ದೆ ಕೊಟ್ಟರೂ ನಿಭಾಯಿಸುವ ಸಾಮರ್ಥ್ಯ ಅವರಿಗಿದೆ ಎಂದು‌ ಅಥಣಿ ಶಾಸಕ ಮಹೇಶ ಕುಮಟಳ್ಳಿ ಹೇಳಿದ್ದಾರೆ.

ಶಾಸಕ ಮಹೇಶ ಕುಮಟಳ್ಳಿ
author img

By

Published : Jun 3, 2019, 7:35 PM IST

ಬೆಳಗಾವಿ: ಮೈತ್ರಿ ಸರ್ಕಾರದಲ್ಲಿ ‌ಸಚಿವ ಸತೀಶ್​ ಜಾರಕಿಹೊಳಿ‌ ಜತೆಗೆ ಗೋಕಾಕ್​ ಶಾಸಕ ರಮೇಶ್​ ‌ಜಾರಕಿಹೊಳಿ‌ ಅವರಿಗೂ‌ ಸಚಿವ ಸ್ಥಾನ ನೀಡಬೇಕು ಎಂದು‌ ಅಥಣಿ ಶಾಸಕ ಮಹೇಶ ಕುಮಟಳ್ಳಿ ಆಗ್ರಹಿಸಿದ್ದಾರೆ.

ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ರಮೇಶ್​ ಜಾರಕಿಹೊಳಿ‌ಗೆ ಡಿಸಿಎಂ ಸ್ಥಾನ ನೀಡಬೇಕು ಎಂಬ ವಾಲ್ಮೀಕಿ ಶ್ರೀಗಳ ಆಗ್ರಹಕ್ಕೆ ನನ್ನ ಬೆಂಬಲವಿದೆ. ಉಪಮುಖ್ಯಮಂತ್ರಿ ಸ್ಥಾನ ಸಿಕ್ಕರೆ ಜನರ ಸೇವೆ ಹೆಚ್ಚಿನ ಪ್ರಮಾಣದಲ್ಲಿ ‌ಮಾಡಬಹುದು. ಈ ನಿರ್ಧಾರ ಹೈಕಮಾಂಡ್‌ಗೆ ಬಿಟ್ಟಿದ್ದು ಎಂದರು.

ಕಾಂಗ್ರೆಸ್‌ ಶಾಸಕ ಮಹೇಶ ಕುಮಟಳ್ಳಿ

ರಮೇಶ್​ ಜಾರಕಿಹೊಳಿ ಕಾಂಗ್ರೆಸ್‌ನ ಲಕ್ಷ್ಮಣ ರೇಖೆ ದಾಟಿಲ್ಲ. ಅವರು ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದಾರೆ. ಹೀಗಾಗಿ ಸತೀಶಣ್ಣನ ಜತೆಗೆ ರಮೇಶಣ್ಣ ಜಾರಕಿಹೊಳಿಯವರಿಗೂ ಸಚಿವ ಸ್ಥಾನ ಕೊಡಬೇಕು. ಯಾವುದೇ ಹುದ್ದೆ ಕೊಟ್ಟರೂ ನಿಭಾಯಿಸುವ ಸಾಮರ್ಥ್ಯ ರಮೇಶ್​ ಜಾರಕಿಹೊಳಿ‌ ಅವರಿಗಿದೆ ಎಂದು‌ ಗೃಹಸಚಿವ ಎಂಬಿ ಪಾಟೀಲ್​ಗೆ ತಿರುಗೇಟು ನೀಡಿದರು.

ನಾನು‌ ನಿತ್ಯ ರಮೇಶ್​ ಜಾರಕಿಹೊಳಿ‌ ಮನೆಗೆ ಹೋಗುತ್ತೇನೆ. ಊಟ, ಉಪಹಾರ ಅವರ ಮನೆಯಲ್ಲೇ ಮಾಡುತ್ತೇನೆ. ಸಚಿವ, ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ನಾನಲ್ಲ. 25 ವರ್ಷಗಳಿಂದ ಜಾರಕಿಹೊಳಿ‌ ಸಹೋದರರು ಕಾಂಗ್ರೆಸ್‌ ಪಕ್ಷ ಬೆಳೆಸಿದ್ದಾರೆ. ಹೀಗಾಗಿ ಸತೀಶ್​ ಜತೆ ರಮೇಶ್​ ಜಾರಕಿಹೊಳಿ‌ಗೂ ಸಚಿವ ಸ್ಥಾನ ನೀಡಬೇಕು ಎಂದರು.

sample description

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.