ETV Bharat / state

ಗಾಂಜಾ ಮಾರುತ್ತಿದ್ದ ತಾಯಿ ಅಂದರ್.. ಪುತ್ರ ಪರಾರಿ

ಕಡಸಗಟ್ಟಿ ಗ್ರಾಮದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಸಂದರ್ಭ ದೊಡ್ಡವಾಡ ಪೊಲೀಸರು ದಾಳಿ ನಡೆಸಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣದಡಿ ಶಂಕ್ರೆವ್ವಾ ಕಟಗಿಯನ್ನು ಬಂಧಿಸಲಾಗಿದ್ದು, ಪರಾರಿಯಾಗಿರುವ ಶಿವಾನಂದ ಬಸವರಾಜ ‌ಕಟಗಿಯ ಬಂಧನಕ್ಕೆ ಶೋಧ ಕಾರ್ಯ ಮುಂದುವರೆದಿದೆ.

Marijuana selling case of Belgavi
Marijuana selling case of Belgavi
author img

By

Published : Aug 22, 2020, 6:21 PM IST

ಬೆಳಗಾವಿ: ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಮಹಿಳೆಯೋರ್ವಳನ್ನು ಬಂಧಿಸಿದ ಘಟನೆ ದೊಡ್ಡವಾಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ‌ನಡೆದಿದೆ.

ಬೈಲಹೊಂಗಲ ತಾಲೂಕಿನ ‌ಕಡಸಗಟ್ಟಿ ಗ್ರಾಮದ ಶಂಕ್ರೆವ್ವಾ ಕಟಗಿ (50) ಬಂಧಿತ‌ ಮಹಿಳೆ ಹಾಗೂ ಆರೋಪಿಯ ಪುತ್ರ ಶಿವಾನಂದ ಬಸವರಾಜ ‌ಕಟಗಿ (35) ದಾಳಿ ವೇಳೆ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ.

ಕಡಸಗಟ್ಟಿ ಗ್ರಾಮದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಸಂದರ್ಭ ದೊಡ್ಡವಾಡ ಪೊಲೀಸರು ದಾಳಿ ನಡೆಸಿದ್ದಾರೆ. ಮಹಿಳೆಯ ಬಳಿಯಿದ್ದ 10,100 ರೂ. ಮೌಲ್ಯದ 786 ಗ್ರಾಂ ಗಾಂಜಾ ವಶಕ್ಕೆ ಪಡೆದು, ವಿಚಾರಣೆ ನಡೆಸಿದ ಸಮಯದಲ್ಲಿ ಮಹಿಳೆ ತಪ್ಪೊಪ್ಪಿಕೊಂಡಿದ್ದಾಳೆ ಎನ್ನಲಾಗಿದೆ. ಪೊಲೀಸರು ತಾಯಿ-ಮಗನ ವಿರುದ್ಧ ಪ್ರಕರಣ‌ ದಾಖಲಿಸಿಕೊಂಡಿದ್ದಾರೆ.

ಈ ದಾಳಿಯಲ್ಲಿ‌ ಪೊಲೀಸ್ ಸಿಬ್ಬಂದಿ ಮಂಜುನಾಥ ಕರಿಗಾರ, ನಿತಿನ್ ಗಾಂವಕರ,‌ ಮಂಜುನಾಥ ಬುಕ್ಕಟಗಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು. ಸದ್ಯ ಈ ಕುರಿತು ದೊಡ್ಡವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.