ETV Bharat / state

ಕೃಷ್ಣಾ ನೆರೆ ಸಂತ್ರಸ್ತರಿಗೆ ಪರಿಹಾರ ಒದಗಿಸುವಂತೆ ವಿವಿಧ ಸಂಘಟನೆಗಳಿಂದ ಪ್ರತಿಭಟನೆ - Krishna Flood affective People protesting

ಕಳೆದ ಬಾರಿ ಕೃಷ್ಣಾ ಪ್ರವಾಹಕ್ಕೆ ತುತ್ತಾದ ನದಿ ತೀರದ ಗ್ರಾಮಸ್ಥರಿಗೆ ಪರಿಹಾರ ಹಣ ಸಿಗದ ಕಾರಣ ಇಂದು ಅಥಣಿಯ ತಹಶೀಲ್ದಾರ್​ ಕಚೇರಿ ಎದುರು ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.

Krishna Flood affective People
ವಿವಿಧ ಸಂಘಟನೆಗಳಿಂದ ಅಥಣಿಯಲ್ಲಿ ಪ್ರತಿಭಟನೆ
author img

By

Published : Aug 13, 2020, 9:04 PM IST

ಅಥಣಿ: ಕೃಷ್ಣಾ ನದಿಯಿಂದ ಕಳೆದ ವರ್ಷ ನಷ್ಟ ಅನುಭವಿಸಿದ ನೆರೆ ಸಂತ್ರಸ್ತರಿಗೆ ಪರಿಹಾರ ಒದಗಿಸುವಂತೆ ಆಗ್ರಹಿಸಿ ಹಲವಾರು ಸಂಘಟನೆಗಳು ನಗರದ ಮಿನಿ ವಿಧಾನಸೌಧ ಹಾಗೂ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ವಿವಿಧ ಸಂಘಟನೆಗಳಿಂದ ಅಥಣಿಯಲ್ಲಿ ಪ್ರತಿಭಟನೆ

ಪ್ರತೀ ವರ್ಷವೂ ಸಹ ಮಳೆಗಾಲದ ಸಮಯದಲ್ಲಿ ಪ್ರವಾಹ ಉಂಟಾಗಿ ಕೃಷ್ಣಾ ನದಿ ತೀರದ ಗ್ರಾಮಗಳು ಹಾನಿಯಾಗುತ್ತಿವೆ. ಆದರೆ ಸರ್ಕಾರ ಮತ್ತು ಅಧಿಕಾರಿಗಳು ಮಾತ್ರ ಹಳ್ಳಿ ಜನರ ಸ್ಥಿತಿಗತಿ ಬಗ್ಗೆ ಯೋಚಿಸದಿರುವುದು ಶೋಚನೀಯ ಸಂಗತಿಯಾಗಿದೆ. ಕಳೆದ ಬಾರಿ ಸಂಭವಿಸಿದ ನೆರೆಗೆ ಇನ್ನೂ ಸಹ ಪರಿಹಾರ ದೊರೆತಿಲ್ಲ. ಈ ಕೂಡಲೇ ನೆರೆ ಸಂತ್ರಸ್ತರಿಗೆ ಪರಿಹಾರ ಒದಗಿಸಬೇಕು ಎಂದು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಅಥಣಿಯ ಮಿನಿ ವಿಧಾನಸೌಧದ ಮುಂದೆ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ನಂತರ ತಹಶೀಲ್ದಾರ್ ದುಂಡಪ್ಪ ಕೋಮಾರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.