ETV Bharat / state

ಮಾ.15ರಂದು ಸಹಕಾರ ಮಹಾಮಂಡಲದ ನೂತನ‌ ಕಚೇರಿ ಉದ್ಘಾಟನೆ - ಮಾಜಿ ಸಚಿವ ಎಚ್​.ಕೆ. ಪಾಟೀಲ್​​

ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕ್​​​​ಗಳ ಮಹಾಮಂಡಲದ ಪ್ರಾಂತೀಯ ನೂತನ ಕಟ್ಟಡವನ್ನು ಸಿಎಂ ಹಾಗೂ ರಾಜ್ಯಪಾಲರು ಮಾಡಲಿದ್ದಾರೆ ಎಂದು ಮಾಜಿ ಸಚಿವ ಎಚ್​.ಕೆ. ಪಾಟೀಲ್​​ ಬೆಳಗಾವಿಯಲ್ಲಿ ಹೇಳಿದ್ದಾರೆ.

new office of Co-operative Federation
ಸಹಕಾರ ಮಹಾಮಂಡಲದ ನೂತನ‌ ಕಚೇರಿ ಉದ್ಘಾಟನೆ
author img

By

Published : Mar 13, 2020, 3:15 AM IST

ಬೆಳಗಾವಿ: ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕ್​​​​ಗಳ ಮಹಾಮಂಡಲದ ಪ್ರಾಂತೀಯ ನೂತನ ಕಟ್ಟಡ, ಮಾ.15ರಂದು ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಉದ್ಘಾಟನೆಯಾಗಲಿದೆ ಎಂದು ಮಾಜಿ ಸಚಿವ ಎಚ್​.ಕೆ. ಪಾಟೀಲ್ ತಿಳಿಸಿದ್ದಾರೆ.

ಸಹಕಾರ ಮಹಾಮಂಡಲದ ನೂತನ‌ ಕಚೇರಿ ಉದ್ಘಾಟನೆ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಟ್ಟಡ ಅನಾವರಣವನ್ನು ರಾಜ್ಯಪಾಲ ವಜುಭಾಯಿ ವಾಲಾ ಮಾಡಲಿದ್ದು, ಸಭಾಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೆರವೇರಿಸಲಿದ್ದಾರೆ. ರೈಲ್ವೆ ಇಲಾಖೆಯ ರಾಜ್ಯ ಸಚಿವ ಸುರೇಶ್ ಅಂಗಡಿ ಹಿರಿಯರಿಗೆ ಸನ್ಮಾನ ಮಾಡಲಿದ್ದಾರೆ. ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಪತ್ರಿಕೆ ಬಿಡುಗಡೆ ಮಾಡುವರು. ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಧ್ವಜಾರೋಹಣ ನೆರವೇರಿಸಲಿದ್ದಾರೆ ಎಂದರು.

ಇನ್ನು ಅಂಬ್ರೆಲಾ ಆರ್ಗನೈಸೇಶನ್ ಪುಸ್ತಕವನ್ನು ನ್ಯಾಫಕ್ಲಬಗ್​​ನ ಅಧ್ಯಕ್ಷ ಜ್ಯೋತಿಂದ್ರ ಬಿಡುಗಡೆ ಮಾಡಲಿದ್ದಾರೆ. ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಅವರು ಶತಮಾನ ಪೂರೈಸಿದ ಪಟ್ಟಣ ಬ್ಯಾಂಕ್​​ಗಳ ಫಲಕವನ್ನು ಅನಾವರಣ ಮಾಡಲಿದ್ದಾರೆ. ವಿಧಾನಪರಿಷತ್ ವಿರೋಧಪಕ್ಷದ ನಾಯಕ ಎಸ್.ಆರ್.ಪಾಟೀಲ್ ವಿಶೇಷ ವಾರಪತ್ರಿಕೆ ಬಿಡುಗಡೆ ಮಾಡಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.