ಬೆಳಗಾವಿ: ಎರಡು ದಿನಗಳ ಹಿಂದೆಯಷ್ಟೇ ವಿವಾದಿತ ಪುಸ್ತಕ ಬಿಡುಗಡೆ ಮಾಡಿ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದ್ದ ಮಹಾರಾಷ್ಟ್ರ ಸರ್ಕಾರ, ಇದೀಗ ಗಡಿ ಕ್ಯಾತೆ ಮುಂದುವರೆಸಿದೆ. ಬೆಳಗಾವಿ ಸೇರಿ ಮರಾಠಿ ಭಾಷಿಕ ಪ್ರದೇಶ ಮಹಾರಾಷ್ಟ್ರಕ್ಕೆ ಸೇರಿದ್ದು ಎಂದು ಬಿಂಬಿಸಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ. ಇದಕ್ಕಾಗಿ 50 ವರ್ಷದ ಹಿಂದಿನ ಸಾಕ್ಷ್ಯಚಿತ್ರದ ವಿಡಿಯೋವನ್ನು ಮಹಾರಾಷ್ಟ್ರ ಸರ್ಕಾರ ಮರಳಿ ಯೂಟ್ಯೂಬ್ ಗೆ ಅಪ್ಲೋಡ್ ಮಾಡಿಸಿದೆ.
- " class="align-text-top noRightClick twitterSection" data="">
ಸಿಎಂ ಉದ್ಧವ್ ಠಾಕ್ರೆ ಸೂಚನೆ ಮೇರೆಗೆ ಕುಮಾರಸೇನ್ ಸಮರ್ಥ್ ನಿರ್ದೇಶನದಲ್ಲಿ 50 ವರ್ಷ ಹಿಂದೆ ಸಿದ್ಧಪಡಿಸಿದ್ದ ಸಾಕ್ಷ್ಯಚಿತ್ರ ದ ವಿಡಿಯೋ ಅಪ್ಲೋಡ್ ಮಾಡಲಾಗಿದೆ. 35 ನಿಮಿಷದ 'ಎ ಕೇಸ್ ಫಾರ್ ಜಸ್ಟೀಸ್' ಹೆಸರಿನ ವಿಡಿಯೋ ರೀಲಿಸ್ ಆಗಿದೆ. 50 ವರ್ಷದ ಹಿಂದಿನ ಜನಜೀವನ ಸ್ಥಿತಿ ಬಗ್ಗೆ ಸಾಕ್ಷ್ಯಚಿತ್ರದಲ್ಲಿ ತೋರಿಸಲಾಗಿದೆ.
ವಿಡಿಯೋದಲ್ಲಿ ಏನಿದೆ..?
ಮಹಾರಾಷ್ಟ್ರ ಸರ್ಕಾರ ಬಿಡುಗಡೆ ಮಾಡಿದ ಸಾಕ್ಷ್ಯಚಿತ್ರದಲ್ಲಿ, ಕಾರವಾರದ ಶಾಲೆಯೊಂದರಲ್ಲಿ ಇಂಗ್ಲೀಷ್, ಮರಾಠಿ, ಕೊಂಕಣಿ, ಕನ್ನಡ ಭಾಷೆ ಬೋಧನೆಯನ್ನು ಚಿತ್ರಿಸಲಾಗಿದೆ. ಎನ್‌ಸಿಸಿ ಬಟಾಲಿಯನ್ ಬೋರ್ಡ್‌ನಲ್ಲಿರುವ ಹಿಂದಿ ಭಾಷೆಯನ್ನು ಮರಾಠಿ ಭಾಷೆ ಎಂದು ಬಿಂಬಿಸುವ ಫೋಟೋ ಇದೆ. 1912ರಲ್ಲಿ ಮರಾಠಿ ಪತ್ರಿಕೆ 'ವಿಚಾರಿ'ಯಲ್ಲಿ ಪ್ರಕಟವಾಗಿದ್ದ ಕಾರವಾರ ಸಹಕಾರ ಬ್ಯಾಂಕ್‌ನ ಸುದ್ದಿ ತುಣಕು ಹಾಗೂ ಬೆಳಗಾವಿಯಲ್ಲಿ 1890ರಲ್ಲಿ ನಿರ್ಮಾಣವಾಗಿದ್ದ ಸೇತುವೆ ಮೇಲೆ ಮರಾಠಿ ಭಾಷೆ ಇರುವ ಚಿತ್ರ ತೋರಿಸಲಾಗಿದೆ. ಎಲ್ಲ ಮರಾಠಿ ಭಾಷಿಕ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಿದ್ದು ಎಂದು ಬಿಂಬಿಸಲು ವಿಡಿಯೋ ತುಣುಕುಗಳನ್ನು ಸೇರಿಸಲಾಗಿದೆ. ಉದ್ಧವ್ ಠಾಕ್ರೆ ಸೂಚನೆ ಮೇರೆಗೆ 50 ವರ್ಷಗಳ ಹಿಂದಿನ ವಿಡಿಯೋ ಯೂಟ್ಯೂಬ್‌ಗೆ ಅಪ್ಲೋಡ್ ಮಾಡಲಾಗಿದೆ.
ಓದಿ : ಉದ್ಧವ್ ಠಾಕ್ರೆ 'ಉದ್ಧ'ಟತನ: ಮತ್ತೆ ವಿವಾದಕ್ಕೆ ಎಡೆ ಮಾಡಿಕೊಡುತ್ತಾ 'ಮಹಾ' ಸಿಎಂ ನಡೆ