ETV Bharat / state

ಭಾರೀ ಮಳೆಗೆ ಮೈದುಂಬಿ ಧುಮುಕುತ್ತಿದೆ ಗೋಕಾಕ್ ಫಾಲ್ಸ್ - ಗೋಕಾಕ್ ಫಾಲ್ಸ್ ಸುದ್ದಿ

ಧಾರಾಕಾರ ಮಳೆಯಿಂದಾಗಿ ಘಟಪ್ರಭಾ ನದಿ ನೀರಿನ ಒಳಹರಿವು ಹೆಚ್ಚಾಗಿದ್ದು, ಇದರಿಂದ ಗೋಕಾಕ್​​ ಫಾಲ್ಸ್ ಮೈದುಂಬಿ ಹರಿಯುತ್ತಿದೆ.

Gokak Falls flowing video
ಭಾರಿ ಮಳೆಗೆ ಮೈದುಂಬಿ ಧುಮ್ಮುಕ್ಕುತ್ತಿದೆ ಗೋಕಾಕ್ ಫಾಲ್ಸ್
author img

By

Published : Jun 18, 2021, 1:06 PM IST

ಬೆಳಗಾವಿ: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರೀ ಮಳೆಗೆ ಭಾರತದ ನಯಾಗರ ಫಾಲ್ಸ್ ಎಂದೇ ಖ್ಯಾತಿ ಪಡೆದಿರುವ ಬೆಳಗಾವಿ ಜಿಲ್ಲೆಯ ಗೋಕಾಕ್​ ಫಾಲ್ಸ್ ಮೈದುಂಬಿ ಹರಿಯುತ್ತಿದೆ.

ಮೈದುಂಬಿ ಧುಮುಕುತ್ತಿದೆ ಗೋಕಾಕ್ ಫಾಲ್ಸ್

ಹಾಸುಗಲ್ಲುಗಳ ಮೇಲೆ ಹರಿದು ಬರುವ ನೀರನ್ನು ನೋಡುವುದೇ ಒಂದು ಸಡಗರ. ಜಾರುಗಲ್ಲುಗಳ ಮೇಲಿಂದ ನೀರು ಧುಮುಕುವುದಂತೂ ಕಣ್ಣಿಗೆ ಹಬ್ಬದಂತಿದೆ.

ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಘಟಪ್ರಭಾ ನದಿ ನೀರಿನ ಒಳಹರಿವು ಹೆಚ್ಚಾಗಿದೆ. ಇದರಿಂದ ಗೋಕಾಕ್​​ ಫಾಲ್ಸ್ ರುದ್ರರಮಣೀಯವಾಗಿ ಕಂಗೊಳಿಸುತ್ತಿದೆ. ಕೋವಿಡ್ ಲಾಕ್​ಡೌನ್ ಜಾರಿಯಲ್ಲಿರುವುದರಿಂದ ಫಾಲ್ಸ್‌ಗೆ ಸುತ್ತಮುತ್ತಲಿನ ಗ್ರಾಮಸ್ಥರು ಮಾತ್ರ ಆಗಮಿಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.