ಬೆಳಗಾವಿ : ನನ್ನ ಬದಲಿಸಿ ಸುಂದರ ಮುಖದವರನ್ನು ಶಾಸಕರನ್ನಾಗಿ ಮಾಡಿದ್ರಿ ಎಂದು ಹೇಳುವ ಮೂಲಕ ಮಾಜಿ ಶಾಸಕ ಸಂಜಯ್ ಪಾಟೀಲ್, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಬೆಳಗಾವಿ ತಾಲೂಕಿನ ಸುಳೇಭಾವಿ ಗ್ರಾಮದ ಹೊರವಲಯದ ತೋಟದಲ್ಲಿ ಸುಳೇಭಾವಿ ಹಾಗೂ ಸಾಂಬ್ರಾ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಬಿಜೆಪಿ ಬೆಂಬಲಿತ ಗ್ರಾಪಂ ಸದಸ್ಯರ ಸನ್ಮಾನ ಸಮಾರಂಭ ನಡೆಯಿತು. ಈ ವೇಳೆ ಮಾತನಾಡಿದ ಅವರು, ಮೊದಲೇ ನಾನು ಕಪ್ಪಗಿದ್ದೇನೆ.
10 ವರ್ಷಗಳ ಕಾಲ ಕಪ್ಪು ಮುಖದ ಶಾಸಕನನ್ನು ನೋಡಿ ಕ್ಷೇತ್ರದ ಜನರು ಬೇಸರಗೊಂಡಿದ್ದರು. ಹೀಗಾಗಿ ಹ್ಯಾಂಡ್ ಸಮ್, ಸುಂದರ ಮುಖದವರನ್ನು ಶಾಸಕರನ್ನಾಗಿ ಮಾಡಿ ನನ್ನನ್ನು ಬದಲಾಯಿಸಿದ್ದಾರೆ ಎಂದರು.
ಓದಿ:ಗಂಡನನ್ನ ಕೊಂದು ನನ್ನ ಹತ್ತಿರ ಬಾ ಅಂದಿದ್ಲಂತೆ ಆಂಟಿ.. ಕೊಲೆಗೆ ಸುಪಾರಿ ಕೊಟ್ಟ ತಾಟಗಿತ್ತಿ ಖಾಕಿ ಅತಿಥಿ
ಹ್ಯಾಂಡ್ ಸಮ್ ಅಲ್ಲದ ನನ್ನ ಈ ಕಪ್ಪು ಮುಖ ನೋಡಿ ಜನರು ಬದಲಾವಣೆ ಬಯಸಿದರು. ಹೀಗಾಗಿ ನನ್ನ ಬಿಟ್ಟು ಬೇರೆಯವರನ್ನು ಶಾಸಕರನ್ನಾಗಿ ಮಾಡಿದ್ದಾರೆ. ಚುನಾವಣೆ ವೇಳೆ ಬೇಳೆ ಬೇಯಿಸುವ ಕುಕ್ಕರ್, ಇಸ್ತ್ರಿ ಪೆಟ್ಟಿಗೆ, ಸೀರೆ ಹಂಚಿದವರು ಬೆಳಗಾವಿ ಗ್ರಾಮೀಣದಲ್ಲಿ ಗೆದ್ದು ಶಾಸಕರಾದರು. ಮತ್ತೆ ಏನೇನು ಹಂಚುತ್ತಾರೆ ಎಂಬುದನ್ನು ನೋಡಬೇಕಾಗಿದೆ ಎಂದರು.