ETV Bharat / state

ಪಿಎಸ್​ಐ ತಂದೆಯ ಅನೈತಿಕ ಸಂಬಂಧ ಪ್ರಶ್ನಿಸಿದ ಮಗನ ಮೇಲೆ ಪೊಲೀಸರಿಂದ ಹಲ್ಲೆ! - belagavi Immoral relationship

ತಂದೆಯ ಅನೈತಿಕ ಸಂಬಂಧವನ್ನು ಪ್ರಶ್ನಿಸಿದ ಮಗನ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ. ಥಳಿತಕ್ಕೊಳಗಾದ ಮಗ ಬೆಳಗಾವಿ ಎಸ್ಪಿ ಲಕ್ಷ್ಮಣ ನಿಂಬರಗಿಗೆ ದೂರು ನೀಡಿದ್ದಾರೆ.

fatal assault on young man by police staff in belagavi
ಪಿಎಸ್​ಐ ತಂದೆಯ ಅನೈತಿಕ ಸಂಬಂಧವನ್ನು ಪ್ರಶ್ನಿಸಿದ ಮಗನ ಮೇಲೆ ಪೊಲೀಸರಿಂದ ಹಲ್ಲೆ
author img

By

Published : Jun 2, 2022, 3:02 PM IST

ಬೆಳಗಾವಿ: ಪಿಎಸ್ಐ ತಂದೆಯ ಅನೈತಿಕ ಸಂಬಂಧವನ್ನು ಪ್ರಶ್ನಿಸಿದ ಮಗನ ಮೇಲೆ ಪೊಲೀಸರಿಂದಲೇ ಮಾರಣಾಂತಿಕ ಹಲ್ಲೆ ಮಾಡಿಸಿರುವ ಆರೋಪ ಕೇಳಿಬಂದಿದ್ದು, ಹಿಗ್ಗಾಮುಗ್ಗಾ ಥಳಿಸಿಕೊಂಡ ಮಗ ಬೆಳಗಾವಿ ಎಸ್ಪಿ ಲಕ್ಷ್ಮಣ ನಿಂಬರಗಿಗೆ ದೂರು ನೀಡಿದ್ದಾರೆ.

ಹಲ್ಲೆಗೊಳಗಾದ ಯುವಕ ರಾಹುಲ್ ಕರ್ನಿಂಗ್

ಗೋಕಾಕ ತಾಲೂಕಿನ ಕೊಣ್ಣೂರ ಗ್ರಾಮದ ರಾಹುಲ್ ಕರ್ನಿಂಗ್ ಹಲ್ಲೆಗೊಳಗಾದ ಯುವಕ. ಐದು ವರ್ಷಗಳಿಂದ ಬೆಳಗಾವಿಯ ವೈಭವ ನಗರದಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾನೆ. ಈತನ ತಂದೆ ಸಿದ್ದಪ್ಪ ಕರ್ನಿಂಗ್ ಕುಲಗೋಡ ಪೊಲೀಸ್ ಠಾಣೆಯ ಪಿಎಸ್ಐ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸಿದ್ದಪ್ಪ ಕರ್ನಿಂಗ್ ತಮ್ಮ ಸಂಬಂಧಿ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎನ್ನುವ ಆರೋಪವಿದೆ‌. ತಂದೆಗೆ ಸಾಕಷ್ಟು ತಿಳಿ ಹೇಳಿದರೂ ಕೂಡ ಕೇಳದಿದ್ದಾಗ ಕಳೆದ ಮೇ. 23ರಂದು ಗೋಕಾಕ್ ತಾಲೂಕಿನ ಕೊಣ್ಣೂರ ಗ್ರಾಮಕ್ಕೆ ತೆರಳಿ ಆ ಮಹಿಳೆಗೆ ಮಗ ರಾಹುಲ್ ಕರ್ನಿಂಗ್ ಎಚ್ಚರಿಕೆ ನೀಡಿದ್ದಾನೆ. ಇದರಿಂದ ರೊಚ್ಚಿಗೆದ್ದ ಮಹಿಳೆ 112 ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.

ಇದನ್ನೂ ಓದಿ: ಇದ್ದ ಹಣ ಬಳಸಿದ ಜೋಡಿ.. ಲೋನ್​ಗಾಗಿ ಬಾಯ್​ಫ್ರೆಂಡ್ ಜೊತೆ ಸೇರಿ ಸರಗಳ್ಳತನಕ್ಕಿಳಿದ ನಾರಿ!

ಬಳಿಕ ಅದೇ ಪೊಲೀಸರಿಂದ ಮನಬಂದಂತೆ ಥಳಿಸಿದ್ದು, ಪೊಲೀಸರ ಹೊಡೆತಕ್ಕೆ ಯುವಕನ ಮೈತುಂಬ ಬಾಸುಂಡೆಗಳಾಗಿವೆ. ತೀವ್ರ ಗಾಯಗೊಂಡಿದ್ದ ರಾಹುಲ್ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾನೆ. ಬಳಿಕ ಬೆಳಗಾವಿ ಎಸ್ಪಿ ಮತ್ತು ಗೋಕಾಕ್​ ಗ್ರಾಮೀಣ ಠಾಣೆಯಲ್ಲಿ ತಂದೆ ಸಿದ್ದಪ್ಪ ಕರ್ನಿಂಗ್ ಮತ್ತು ಮಹಿಳೆಯ ವಿರುದ್ಧ ದೂರು ನೀಡಿದ್ದಾನೆ .

ETV Bharat Logo

Copyright © 2025 Ushodaya Enterprises Pvt. Ltd., All Rights Reserved.