ETV Bharat / state

ಬೆಳಗಾವಿಯಲ್ಲಿ ರೈತರ ಟ್ರ್ಯಾಕ್ಟರ್​ ಪರೇಡ್​​ಗೆ ಪೊಲೀಸರ ತಡೆ - ಚಿಕ್ಕೋಡಿಯಲ್ಲಿ 72 ನೇ ಗಣರಾಜ್ಯೋತ್ಸವ ಸಂಭ್ರಮ .

ಬೆಳಗಾವಿ ಜಿಲ್ಲಾ ಕ್ರೀಡಾಂಗಣಕ್ಕೆ ತೆರಳಲು ಅವಕಾಶ ನೀಡುವಂತೆ ರೈತರು ಪಟ್ಟು ಹಿಡಿದ ಹಿನ್ನೆಲೆ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಟ್ರ್ಯಾಕ್ಟರ್‌ ಪರೇಡ್​​ ತಡೆದ ಪರಿಣಾಮ 20 ನಿಮಿಷಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.

Farmers Tractor Rally in Belgavi
ಬೆಳಗಾವಿಯಲ್ಲಿ ರೈತರ ಟ್ರ್ಯಾಕ್ಟರ್​ ಪರೇಡ್​​ಗೆ ಪೊಲೀಸರ ತಡೆ
author img

By

Published : Jan 26, 2021, 12:47 PM IST

Updated : Jan 26, 2021, 2:11 PM IST

ಬೆಳಗಾವಿ: ಕೃಷಿ ಕಾಯ್ದೆ ವಿರೋಧಿಸಿ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಟ್ರ್ಯಾಕ್ಟರ್​ ಪರೇಡ್​ ಮೂಲಕ ಚೆನ್ನಮ್ಮ ವೃತ್ತದ ಮಾರ್ಗವಾಗಿ ಜಿಲ್ಲಾ ಕ್ರೀಡಾಂಗಣದತ್ತ ತೆರಳುತ್ತಿದ್ದ ರೈತರ ಪರೇಡ್​ನ್ನು ಪೊಲೀಸರು ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ತಡೆದರು. ಈ ವೇಳೆ ರೈತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.

ಬೆಳಗಾವಿಯಲ್ಲಿ ರೈತರ ಟ್ರ್ಯಾಕ್ಟರ್​ ಪರೇಡ್​​ಗೆ ಪೊಲೀಸರ ತಡೆ

ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ರೈತರು ತಾಲೂಕಿನ ಸುವರ್ಣಸೌಧ ಎದರು ಧ್ವಜಾರೋಹಣ ನೆರವೇರಿಸಿ, ಕೃಷಿ ಕಾಯ್ದೆ ವಿರೋಧಿಸಿ ಟ್ರ್ಯಾಕ್ಟರ್‌ ಪರೇಡ್ ಪ್ರಾರಂಭಿಸಿದ್ದು, ಮೊದಲು ಸಾಂಕೇತಿಕವಾಗಿ ಸುವರ್ಣಸೌಧ ಬಳಿ ಒಂದೇ ಟ್ರ್ಯಾಕ್ಟರ್ ತಂದಿದ್ದರು. ಬಳಿಕ ಒಂದೊಂದೇ ಟ್ರ್ಯಾಕ್ಟರ್‌ಗಳನ್ನು ತರುತ್ತಿದ್ದಾರೆ. ರಸ್ತೆಯುದ್ದಕ್ಕೂ ರೈತಪರ ಘೋಷಣೆ ಕೂಗುತ್ತಾ ಟ್ರ್ಯಾಕ್ಟರ್‌, ಖಾಸಗಿ ವಾಹನಗಳು ಹಾಗೂ ಬೈಕ್ ನಲ್ಲಿಯೂ ಜಿಲ್ಲಾ ಕ್ರೀಡಾಂಗಣದತ್ತ ರೈತರು ಪ್ರಯಾಣ ಬೆಳೆಸಿದರು.

ಟ್ರ್ಯಾಕ್ಟರ್​ ಪರೇಡ್​ಗೆ ಪೊಲೀಸರ ತಡೆ: ಜಿಲ್ಲಾ ಕ್ರೀಡಾಂಗಣಕ್ಕೆ ತೆರಳಲು ಅವಕಾಶ ನೀಡುವಂತೆ ಪಟ್ಟು ಹಿಡಿದ ಹಿನ್ನೆಲೆ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಟ್ರ್ಯಾಕ್ಟರ್‌ ಪರೇಡ್​​ ತಡೆ ಮಾಡಿದ ಪರಿಣಾಮ 20 ನಿಮಿಷಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಬಳಿಕ ಪೊಲೀಸರ ಯಾವುದೇ ಕಾರಣಕ್ಕೂ ಅವಕಾಶ ನೀಡೋದಿಲ್ಲ ಎನ್ನುತ್ತಿದ್ದಂತೆ ರೈತರು ಚನ್ನಮ್ಮ ವೃತ್ತದ ಮೂಲಕ ಟ್ರ್ಯಾಕ್ಟರ್‌ ಅಷ್ಟೇ ಅಲ್ಲದೇ ಕಾರು, ಕ್ರೂಸರ್, ಬೈಕ್‌ಗಳಲ್ಲಿ ಹೊರಟ ನೂರಾರು ರೈತರು ಹೊರಟರು. ಜಿಲ್ಲಾ ಕ್ರೀಡಾಂಗಣದತ್ತ ತೆರಳಲು ಅವಕಾಶ ನೀಡಲಿಲ್ಲ. ಹೀಗಾಗಿ ರೈತರು ಸರ್ದಾರ್ ಮೈದಾನದಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

ಚಿಕ್ಕೋಡಿಯ ಜಿಲ್ಲಾ ಕ್ರೀಡಾಂಗಣದಲ್ಲಿ 72 ನೇ ಗಣರಾಜ್ಯೋತ್ಸವ ಸಡಗರ :

Farmers Tractor Rally in Belgavi
ಚಿಕ್ಕೋಡಿಯಲ್ಲಿ 72 ನೇ ಗಣರಾಜ್ಯೋತ್ಸವ ಸಂಭ್ರಮ

ಚಿಕ್ಕೋಡಿಯ ಜಿಲ್ಲಾ ಕ್ರೀಡಾಂಗಣದಲ್ಲಿ 72 ನೇ ಗಣರಾಜ್ಯೋತ್ಸವ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಉಪ ವಿಭಾಗಾಧಿಕಾರಿ ಯುಕೇಶ ಕುಮಾರ ಧ್ವಜಾರೋಹಣ ನೆರವೇರಿಸಿದರು.

ವಿವಿಧ ಪೊಲೀಸ್ ಪಡೆಗಳು ಹಾಗೂ ಶಾಲಾ ವಿದ್ಯಾರ್ಥಿಗಳು ಗೌರವ ವಂದನೆ ಸಲ್ಲಿಸಿ ಪಥ ಸಂಚಲನ ನಡೆಸಿದರು. ಸಮಾರಂಭದಲ್ಲಿ ಶಾಸಕರಾದ ಗಣೇಶ ಹುಕ್ಕೇರಿ, ಸಂಸದ ಅಣ್ಣಾಸಾಹೇಬ್​ ಜೊಲ್ಲೆ, ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ್ ಕವಟಗಿಮಠ ಭಾಗಿಯಾಗಿದ್ದರು.

Last Updated : Jan 26, 2021, 2:11 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.