ETV Bharat / state

ಸಿಡಿ ಪ್ರಕರಣದಲ್ಲಿ ಕೈಕೊಟ್ಟ ರಾಜ್ಯ ನಾಯಕರು ; ಫಡ್ನವೀಸ್ ಮನೆ ಬಾಗಿಲು ತಟ್ಟಿದ ರಮೇಶ್ ಜಾರಕಿಹೊಳಿ! - ramesh jarkiholi cd case

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ಮಾಧ್ಯಮಗಳ ಎದುರೇ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು. ಆದರೀಗ ಸಿಡಿ ಪ್ರಕರಣದ ಷಡ್ಯಂತ್ರದ ಹಿಂದೆ ಸ್ವಪಕ್ಷಿಯರೂ ಇದ್ದಾರೆ ಎಂಬ ಮಾಹಿತಿ ರಮೇಶ್ ಜಾರಕಿಹೊಳಿಗೆ ಸಿಕ್ಕಿದೆ. ಹೀಗಾಗಿ, ಡಿಕೆಶಿ ಹೆಸರಿನ ಜೊತೆಗೆ ರಾಜ್ಯದ ಇಬ್ಬರು ಪ್ರಭಾವಿ ಮಂತ್ರಿಗಳು ಹಾಗೂ ಬಿಜೆಪಿಯ ಉನ್ನತ ಸ್ಥಾನದಲ್ಲಿರುವ ನಾಯಕ ಸಿಡಿ ಷಡ್ಯಂತ್ರದಲ್ಲಿ ಡಿಕೆಶಿ ಜೊತೆಗೆ ಕೈಜೋಡಿಸಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಆಪ್ತರ ಎದುರು ಹೇಳಿಕೊಂಡಿದ್ದಾರೆ..

ramesh ಫಡ್ನವೀಸ್ ಬಾಗಿಲು ತಟ್ಟಿದ ರಮೇಶ್ ಜಾರಕಿಹೊಳಿ!

author img

By

Published : Jun 21, 2021, 3:13 PM IST

Updated : Jun 21, 2021, 7:14 PM IST

ಬೆಳಗಾವಿ : ರಾಸಲೀಲೆ ಸಿಡಿ ಪ್ರಕರಣದಲ್ಲಿ ರಾಜ್ಯ ಬಿಜೆಪಿ ನಾಯಕರು ತೋರುತ್ತಿರುವ ಅಸಹಕಾರಕ್ಕೆ ನೊಂದಿರುವ ಮಾಜಿ ಸಚಿವ ರಮೇಶ್​ ಜಾರಕಿಹೊಳಿ, ಸಿಡಿ ಜಾಲದಿಂದ ಪಾರಾಗಲು ಇದೀಗ ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಬಳಿ ಹೋಗಿದ್ದಾರೆ. ನಿನ್ನೆಯಷ್ಟೇ ಮುಂಬೈಗೆ ಹಾರಿರುವ ಜಾರಕಿಹೊಳಿ ತಡರಾತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿ ಆಗಿದ್ದಾರೆ. ನಂತರ ಮುಂಬೈನ ಖಾಸಗಿ ಹೋಟೆಲ್‍ನಲ್ಲಿ ತಂಗಿರುವ ರಮೇಶ್ ಜಾರಕಿಹೊಳಿ ಇಂದು ಸಹಿತ ಫಡ್ನವೀಸ್ ಅವರನ್ನು ಭೇಟಿಯಾಗಲಿದ್ದಾರೆ.

ಸಿಡಿ ಕೇಸ್‍ನಲ್ಲಿ ರಾಜ್ಯದ ನಾಯಕರು ತೋರುತ್ತಿರುವ ಅಸಹಕಾರ ಹಾಗೂ ಸಿಡಿ ಪ್ರಕರಣದಿಂದ ಹೊರಬರಲು ಮಾಡಬೇಕಾದ ಮುಂದಿನ ಹೆಜ್ಜೆಯ ಬಗ್ಗೆ ರಮೇಶ ಜಾರಕಿಹೊಳಿ ಅವರು ಫಡ್ನವೀಸ್ ಜೊತೆಗೆ ಚರ್ಚಿಸಿ ನಿರ್ಣಯಕ್ಕೆ ಬರಲಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಜೊತೆಗೆ ದೇವೇಂದ್ರ ಫಡ್ನವೀಸ್ ಉತ್ತಮ ಸಂಬಂಧ ಹೊಂದಿದ್ದಾರೆ. ಅಲ್ಲದೇ ಆರ್‌ಎಸ್‍ಎಸ್‌ ನಾಯಕರೊಂದಿಗೆ ದೇವೇಂದ್ರ ಫಡ್ನವೀಸ್ ಒಡನಾಟ ಅತ್ಯುತ್ತಮವಾಗಿದೆ.

ಸಿಬಿಐ ಅಂಗಳಕ್ಕೆ ಹೋಗುತ್ತಾ ಸಿಡಿ ಕೇಸ್?

ರಮೇಶ್ ಜಾರಕಿಹೊಳಿ ಅವರಿಗೆ ಸೇರಿದ ರಾಸಲೀಲೆ ಸಿಡಿ ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ರಚಿಸಿರುವ ಎಸ್‍ಐಟಿ ಬಗ್ಗೆಯೇ ಸಂತ್ರಸ್ತೆ ಅನುಮಾನ ವ್ಯಕ್ತಪಡಿಸಿದ್ದಳು. ಅಲ್ಲದೇ ಎಸ್‍ಐಟಿ ತಂಡವನ್ನೇ ಬದಲಿಸುವಂತೆ ಹೈಕೋರ್ಟ್ ಮೊರೆ ಹೋಗಿದ್ದಳು. ಈ ಸಂಬಂಧ ಹೈಕೋರ್ಟ್ ಕೂಡ ರಾಜ್ಯ ಸರ್ಕಾರ ಹಾಗೂ ಬೆಂಗಳೂರು ಪೊಲೀಸ್ ಆಯುಕ್ತರಿಗೆ ನೋಟಿಸ್ ಕೂಡ ನೀಡಿದೆ.

ಈ ದಿಢೀರ್ ಬೆಳವಣಿಗೆಯಿಂದ ಕಂಗೆಟ್ಟಿರುವ ರಮೇಶ್ ಜಾರಕಿಹೊಳಿ ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಗೃಹಸಚಿವ ಬಸವರಾಜ್ ಬೊಮ್ಮಾಯಿ ಅವರಿಂದ ಸಹಕಾರ ಸಿಗುವುದಿಲ್ಲ ಎಂಬುವುದನ್ನು ಮನಗಂಡಿದ್ದಾರೆ. ಈ ಕಾರಣಕ್ಕೆ ಈ ಪ್ರಕರಣವನ್ನು ಸಿಬಿಐಗೆ ನೀಡುವಂತೆ ರಮೇಶ್ ಜಾರಕಿಹೊಳಿ ನ್ಯಾಯಾಲಯದ ಮೆಟ್ಟಿಲೇರುವ ಸಾಧ್ಯತೆ ಇದೆ.

ಪ್ರಕರಣ ಸಿಬಿಐಗೆ ಹೋದರೆ ಕೇಂದ್ರ ನಾಯಕರ ಸಹಕಾರದಿಂದ ಬಚಾವ್ ಆಗಬಹುದು ಎಂಬುವುದು ರಮೇಶ್ ಜಾರಕಿಹೊಳಿ ಲೆಕ್ಕಾಚಾರ. ಈ ವಿಚಾರದ ಬಗ್ಗೆಯೇ ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಜೊತೆಗೆ ರಮೇಶ್​ ಜಾರಕಿಹೊಳಿ ಚರ್ಚಿಸಲಿದ್ದಾರೆ ಎಂದು ಶಾಸಕರ ಆಪ್ತ ಮೂಲಗಳು ಈಟಿವಿ ಭಾರತಕ್ಕೆ ಖಚಿತಪಡಿಸಿವೆ.

ಬಿಜೆಪಿಯಲ್ಲೂ ಇದ್ದಾರಂತೆ ಮಹಾನಾಯಕರು!

ಸಿಡಿ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ರಮೇಶ್ ಜಾರಕಿಹೊಳಿ ಅವರು ಕಾಂಗ್ರೆಸ್‍ನ ಮಹಾನಾಯಕ ನನ್ನ ವಿರುದ್ಧ ಷಡ್ಯಂತ್ರ ಮಾಡಿರುವುದಾಗಿ ಗಂಭೀರ ಆರೋಪ ಮಾಡಿದ್ದರು. ನಂತರ ಸಂತ್ರಸ್ತೆಯ ಪೋಷಕರು ಕೂಡ ನನ್ನ ಪುತ್ರಿಯನ್ನು ಡಿಕೆಶಿ ಅಪಹರಿಸಿದ್ದಾರೆ ಎಂದು ಬಹಿರಂಗ ಹೇಳಿಕೆ ನೀಡಿದ್ದರು. ಈ ಬೆಳವಣಿಗೆ ನಂತರ ರಮೇಶ್ ಜಾರಕಿಹೊಳಿ ಕೂಡ ಮಹಾನಾಯಕನ ಹೆಸರನ್ನು ಮಾಧ್ಯಮಗಳ ಎದುರು ರಿವೀಲ್ ಮಾಡಿದ್ದರು.

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ಮಾಧ್ಯಮಗಳ ಎದುರೇ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು. ಆದರೀಗ ಸಿಡಿ ಪ್ರಕರಣದ ಷಡ್ಯಂತ್ರದ ಹಿಂದೆ ಸ್ವಪಕ್ಷಿಯರೂ ಇದ್ದಾರೆ ಎಂಬ ಮಾಹಿತಿ ರಮೇಶ್ ಜಾರಕಿಹೊಳಿಗೆ ಸಿಕ್ಕಿದೆ. ಹೀಗಾಗಿ, ಡಿಕೆಶಿ ಹೆಸರಿನ ಜೊತೆಗೆ ರಾಜ್ಯದ ಇಬ್ಬರು ಪ್ರಭಾವಿ ಮಂತ್ರಿಗಳು ಹಾಗೂ ಬಿಜೆಪಿಯ ಉನ್ನತ ಸ್ಥಾನದಲ್ಲಿರುವ ನಾಯಕ ಸಿಡಿ ಷಡ್ಯಂತ್ರದಲ್ಲಿ ಡಿಕೆಶಿ ಜೊತೆಗೆ ಕೈಜೋಡಿಸಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಆಪ್ತರ ಎದುರು ಹೇಳಿಕೊಂಡಿದ್ದಾರೆ. ರಮೇಶ್ ಜಾರಕಿಹೊಳಿ ವಿರುದ್ಧ ಷಡ್ಯಂತ್ರ ರೂಪಿಸಿರುವ ಸ್ವಪಕ್ಷದಲ್ಲಿರುವ ನಾಯಕರ್ಯಾರು ಎಂಬ ಬಗ್ಗೆಯೂ ಜಿಲ್ಲಾ ರಾಜಕಾರಣದಲ್ಲಿ ಚರ್ಚೆಗೆ ಕಾರಣವಾಗಿದೆ.

Last Updated : Jun 21, 2021, 7:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.