ETV Bharat / state

ಈಟಿವಿ ಭಾರತ​ ಫಲಶ್ರುತಿ: ಗರ್ಭಿಣಿಗೆ ರಾಜ್ಯದ ಗಡಿ ದಾಟಲು ಸಹಾಯ ಮಾಡಿದ ಎಸ್​​​ಪಿ ನಿಂಬರಗಿ!

ಪುಣೆಯಿಂದ ಆಗಮಿಸಿದ್ದ ದಂಪತಿಗೆ ನಿಪ್ಪಾಣಿ ಸಮೀಪದ ಚೆಕ್ ​ಪೋಸ್ಟ್ ಬಳಿ ರಾಜ್ಯ ಪ್ರವೇಶಕ್ಕೆ ಪೊಲೀಸರು ಅನುಮತಿ ನಿರಾಕರಿಸಿದ್ದರು. ದಂಪತಿ ಪರದಾಟದ ಬಗ್ಗೆ ಈಟಿವಿ ಭಾರತ ವರದಿ ಮಾಡಿತ್ತು. ದಂಪತಿ ನೆರವಿಗೆ ಬೆಳಗಾವಿ ಎಸ್​ಪಿ ಧಾವಿಸಿದ್ದು, ರಾಘವೇಂದ್ರ ಭಟ್ ತಮ್ಮ ಗರ್ಭಿಣಿ ಪತ್ನಿ ಜೊತೆ ರಾಜ್ಯದ ಗಡಿ ಪ್ರವೇಶಿಸಿ ತವರಿನತ್ತ ಪ್ರಯಾಣ ಬೆಳೆಸಿದ್ದಾರೆ.

Etv bharat impact: S.P helped the pregnant woman cross the border
ಈಟಿವಿ ಭಾರತ್​ ಫಲಶ್ರುತಿ: ಗರ್ಭಿಣಿಗೆ ಗಡಿನಾಡು ದಾಟಲು ಸಹಾಯ ಮಾಡಿದ ಎಸ್​​​ಪಿ
author img

By

Published : May 6, 2020, 11:39 PM IST

ಬೆಳಗಾವಿ: ರಾಜ್ಯ ಪ್ರವೇಶಿಸಲು ತುಂಬು ಗರ್ಭಿಣಿ ಪತ್ನಿಯೊಂದಿಗೆ ಪರದಾಡುತ್ತಿದ್ದ ಕನ್ನಡಿಗನಿಗೆ ಸಹಾಯ‌ ಮಾಡಿ‌ ಬೆಳಗಾವಿ ಎಸ್‌ಪಿ ಲಕ್ಷ್ಮಣ್ ನಿಂಬರಗಿ ಮಾನವೀಯತೆ ಮೆರೆದಿದ್ದಾರೆ.

ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಹಂದಿಗೋಣ ಮೂಲದ ರಾಘವೇಂದ್ರ ಭಟ್ ಪುಣೆಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಪತ್ನಿ 8 ತಿಂಗಳ ಗರ್ಭಿಣಿ ಆಗಿದ್ದು, ಪುಣೆ ಪೊಲೀಸರ ಅನುಮತಿ ಪಡೆದು ಆ್ಯಂಬುಲೆನ್ಸ್ ಮೂಲಕ ತವರಿನತ್ತ ಪ್ರಯಾಣ ಬೆಳೆಸಿದ್ದರು.

ನಿಪ್ಪಾಣಿ ಸಮೀಪದ ಚೆಕ್​ಪೋಸ್ಟ್ ಬಳಿ ದಂಪತಿಗೆ ರಾಜ್ಯ ಪ್ರವೇಶಕ್ಕೆ ಪೊಲೀಸರು ಅನುಮತಿ ನಿರಾಕರಿಸಿದ್ದರು. ದಂಪತಿ ಪರದಾಟದ ಬಗ್ಗೆ ಈಟಿವಿ ಭಾರತ ವರದಿ ಮಾಡಿತ್ತು. ದಂಪತಿ ನೆರವಿಗೆ ಬೆಳಗಾವಿ ಎಸ್​ಪಿ ಧಾವಿಸಿದ್ದು, ರಾಘವೇಂದ್ರ ಭಟ್ ಗರ್ಭಿಣಿ ಪತ್ನಿ ಜೊತೆ ರಾಜ್ಯದ ಗಡಿ ಪ್ರವೇಶಿಸಿ ತವರಿನತ್ತ ಪ್ರಯಾಣ ಬೆಳೆಸಿದ್ದಾರೆ.

ರಾಜ್ಯದ ಗಡಿ ಪ್ರವೇಶಿಸಲು ಸಹಾಯ ಮಾಡಿದ ಬೆಳಗಾವಿ ಎಸ್‌ಪಿ ಲಕ್ಷ್ಮಣ್ ನಿಂಬರಗಿ ಅವರಿಗೆ ದಂಪತಿ ಕೃತಜ್ಞತೆ ಹೇಳಿದ್ಧಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.