ಬಹು ನಿರೀಕ್ಷಿತ ''ಪುಷ್ಪ: ದಿ ರೂಲ್'' ಅಬ್ಬರಕ್ಕೆ ಅದ್ಧೂರಿ ವೇದಿಕೆ ಸಜ್ಜಾಗಿದೆ. ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಆರಂಭಗೊಂಡಿದ್ದು, ವಿಶ್ವಾದ್ಯಂತ 12,500 ಸ್ಕ್ರೀನ್ಗಳಲ್ಲಿ ಪುಷ್ಪರಾಜ್ ಸದ್ದು ಮಾಡಲಿದ್ದಾನೆ. ರಿಲೀಸ್ ಟೈಮ್ ಅತ್ಯಂತ ಸಮೀಪದಲ್ಲಿದ್ದು, ರಾಷ್ಟ್ರಪ್ರಶಸ್ತಿ ವಿಜೇತ ನಟ ಅಲ್ಲು ಅರ್ಜುನ್ ಮತ್ತು ಬಹುಭಾಷಾ ಬಹುಬೇಡಿಕೆ ನಟಿ ರಶ್ಮಿಕಾ ಮಂದಣ್ಣ ಅಭಿನಯದ ಸಿನಿಮಾ ಸುತ್ತಲಿನ ಕ್ರೇಜ್ ಅಭೂತಪೂರ್ವ ಅಂತಲೇ ಹೇಳಬಹುದು. ಬಹುನಿರೀಕ್ಷಿತ ಚಿತ್ರ ತನ್ನ ಅಡ್ವಾನ್ಸ್ ಬುಕಿಂಗ್ ಕಲೆಕ್ಷನ್ ವಿಷಯದಿಂದ ಕೋಟ್ಯಂತರ ಜನರ ಗಮನ ಸೆಳೆದಿದೆ. ಸಿನಿಮಾ ಬಿಗ್ ಬ್ಲಾಕ್ಬಸ್ಟರ್ ಆಗಲಿದೆ ಎಂಬುದು ಈಗಾಗಲೇ ಸ್ಪಷ್ಟವಾಗಿದೆ.
ವಿಶ್ವಾದ್ಯಂತದ ಮುಂಗಡ ಬುಕಿಂಗ್ - 100 ಕೋಟಿ ರೂ. ಕಲೆಕ್ಷನ್: ಬಿಡುಗಡೆಗೂ ಮುನ್ನ ಪುಷ್ಪ ಸೀಕ್ವೆಲ್ ಬಾಕ್ಸ್ ಆಫೀಸ್‌ನಲ್ಲಿ ಈಗಾಗಲೇ ದೊಡ್ಡ ಮೊತ್ತವನ್ನು ಸಂಗ್ರಹಿಸಿದೆ. ಚಿತ್ರ ತಯಾರಕರ ಲೇಟೆಸ್ಟ್ ಅಪ್ಡೇಟ್ಸ್ ಪ್ರಕಾರ, ಸಿನಿಮಾ ವಿಶ್ವಾದ್ಯಂತ ಅಡ್ವಾನ್ಸ್ ಟಿಕೆಟ್ ಬುಕಿಂಗ್‌ನಲ್ಲಿ 100 ಕೋಟಿ ರೂಪಾಯಿ ದಾಟಿದೆ. ನಾಯಕ ನಟ ಅಲ್ಲು ಅರ್ಜುನ್ ಸಿಂಹಾಸನದ ಮೇಲೆ ಕುಳಿತಿರುವ ಪವರ್ಫುಲ್ ಪೋಸ್ಟರ್ ಅನಾವರಣಗೊಳಿಸಿ ಚಿತ್ರತಂಡ ಈ ಮಾಹಿತಿ ಹಂಚಿಕೊಂಡಿದೆ. "ಪುಷ್ಪ2: ದಿ ರೂಲ್ ಅಡ್ವಾನ್ಸ್ ಬುಕಿಂಗ್‌ನಲ್ಲಿ 100 ಕೋಟಿ ರೂ.ನ ಗಡಿ ದಾಟಿದೆ. ಭಾರತದ ಅತಿ ದೊಡ್ಡ ಚಿತ್ರವು ದಾಖಲೆಗಳನ್ನು ಮುರಿಯುತ್ತಿದೆ" ಎಂಬ ಕ್ಯಾಪ್ಷನ್ ನೆಟ್ಟಿಗರ ಗಮನ ಸೆಳೆದಿದೆ.
ರಶ್ಮಿಕಾ ಮಂದಣ್ಣ, ಅಲ್ಲು ಅರ್ಜುನ್ ವೃತ್ತಿಜೀವನದ ದೊಡ್ಡ ದಾಖಲೆ: ದೊಡ್ಡ ಮಟ್ಟದ ಪೂರ್ವ ವ್ಯವಹಾರದೊಂದಿಗೆ, ಪುಷ್ಪ 2 ಈಗಾಗಲೇ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಅವರ 'ಬಿಗ್ಗೆಸ್ಟ್ ಓಪನರ್' (ದೇಶೀಯ ಮತ್ತು ವಿಶ್ವಾದ್ಯಂತದ ಮೊದಲ ದಿನದ ಕಲೆಕ್ಷನ್) ಆಗಲಿದೆ ಎಂದು ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಮಾಡಿದೆ. ಮೊದಲ ದಿನವೇ ಚಿತ್ರ ಹಲವು ದಾಖಲೆಗಳನ್ನು ಮುರಿಯಲು ಸಜ್ಜಾಗಿದೆ. ಆರಂಭಿಕ ಅಂದಾಜಿನ ಪ್ರಕಾರ, ಪುಷ್ಪಾ 2 ತೆರೆಕಂಡ ದಿನವೇ 250-275 ಕೋಟಿ ರೂಪಾಯಿಗಳ ನಡುವೆ ಕಲೆಕ್ಷನ್ ಮಾಡುವ ಸಾಧ್ಯತೆಗಳಿವೆ.
#Pushpa2 ADVANCE BOOKING: 2.43 LAKH TICKETS SOLD [till 11 pm on Tue, 3 Dec 2024]…
— taran adarsh (@taran_adarsh) December 4, 2024
NOTE: *Thu* / *Day 1* at NATIONAL CHAINS…
⭐️ #PVR + #INOX: 1,97,000
⭐️ #Cinepolis: 46,000
⭐️ Total: 2,43,000
The #AlluArjun starrer is all set for a BUMPER START. #WildFirePushpa |… pic.twitter.com/ZYAJTKqrsd
2 ಮಿಲಿಯನ್ ಟಿಕೆಟ್ ಸೇಲ್, ಆರ್ಆರ್ಆರ್ ದಾಖಲೆ ಉಡೀಸ್: 2 ಮಿಲಿಯನ್‌ಗಿಂತಲೂ ಹೆಚ್ಚು ಟಿಕೆಟ್‌ಗಳು ಈಗಾಗಲೇ ಮಾರಾಟವಾದ್ದು, ಭಾರತೀಯ ಚಲನಚಿತ್ರ ರಂಗದಲ್ಲೇ ಅತಿದೊಡ್ಡ ಓಪನಿಂಗ್‌ಗಳಲ್ಲಿ ಒಂದಾಗಲಿದೆ. ಟ್ರೇಡ್ ಅಂದಾಜುಗಳನ್ನು ನಂಬುವುದಾದರೆ, ಪುಷ್ಪ ಸೀಕ್ವೆಲ್ ಎಸ್ಎಸ್ ರಾಜಮೌಳಿ ಅವರ 2022ರ ಬ್ಲಾಕ್ಬಸ್ಟರ್ ಆರ್ಆರ್ಆರ್ ದಾಖಲೆಯನ್ನು ಪುಡಿಗಟ್ಟುವ ಸಾಧ್ಯತೆ ಹೆಚ್ಚಿದೆ. ಸೌತ್ ಸೂಪರ್ಸ್ಟಾರ್ಗಳಾದ ಜೂನಿಯರ್ ಎನ್ಟಿಆರ್ ಮತ್ತು ರಾಮ್ಚರಣ್ ಮುಖ್ಯಭೂಮಿಕೆಯ ಆರ್ಆರ್ಆರ್ ಜಾಗತಿಕವಾಗಿ ಮೊದಲ ದಿನ 223 ಕೋಟಿ ರೂ. ಕಲೆಕ್ಷನ್ ಮಾಡಿತ್ತು.
ಇದನ್ನೂ ಓದಿ: 'ಪುಷ್ಪ 3' ಕನ್ಫರ್ಮ್: ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಜೊತೆ ವಿಜಯ್ ದೇವರಕೊಂಡ?
ಭಾರತದಲ್ಲಿ ಪ್ರೀ ರಿಲೀಸ್ ಕಲೆಕ್ಷನ್: ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಮಾಹಿತಿ ಪ್ರಕಾರ, ಸಿನಿಮಾ ಭಾರತದಲ್ಲಿ ಈಗಾಗಲೇ ಮುಂಗಡ ಬುಕಿಂಗ್‌ನಲ್ಲಿ 78.78 ಕೋಟಿ ರೂ. ಗಳಿಸಿದೆ. ತೆಲುಗು ಸೂಪರ್‌ಸ್ಟಾರ್ ಆಗಿರುವುದರಿಂದ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಅಲ್ಲು ಅರ್ಜುನ್ ಅವರ ಅಪಾರ ಸಂಖ್ಯೆಯ ಅಭಿಮಾನಿ ಬಳಗದಿಂದ ಕಲೆಕ್ಷನ್ಗೆ ಹೆಚ್ಚಿನ ಕೊಡುಗೆ ಸಿಕ್ಕಿದೆ. ತೆಲಂಗಾಣದಲ್ಲಿ, ಚಿತ್ರ ಈಗಾಗಲೇ 15.69 ಕೋಟಿ ರೂಪಾಯಿಗಳನ್ನು ಗಳಿಸಿದೆ. ಆಂಧ್ರಪ್ರದೇಶದಲ್ಲಿ ಒಟ್ಟು ಮುಂಗಡ ಸಂಗ್ರಹದಲ್ಲಿ 11.68 ಕೋಟಿ ರೂಪಾಯಿ ಸಂಗ್ರಹವಾಗಿದೆ. ಚಿತ್ರವು ಭಾರತದಲ್ಲಿ 2.1 ಮಿಲಿಯನ್‌ಗಿಂತಲೂ ಹೆಚ್ಚು ಟಿಕೆಟ್‌ಗಳನ್ನು ಮಾರಾಟ ಮಾಡಿದೆ. ಇದು ಸಿನಿಮಾದ ಜನಪ್ರಿಯತೆಗೆ ಸಾಕ್ಷಿಯಾಗಿದೆ.
ಇದನ್ನೂ ಓದಿ: ಉಗ್ರಂ ಮಂಜು ಐಶ್ವರ್ಯಾ ಬಿಗ್ ವಾರ್: ಮಂಜುರಿಂದ ಸ್ಪರ್ಧಿಗಳನ್ನು ಕುಗ್ಗಿಸೋ ಕೆಲಸವಾಗ್ತಿದೆಯಾ?