ಬೆಳಗಾವಿ : ನಗರದ ಹೊರವಲಯದಲ್ಲಿರುವ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ನಾಗರ ಹಾವಿನ ಮರಿ ಕಾಣಿಸಿಕೊಂಡು, ಕೆಲ ಹೊತ್ತು ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸಿತ್ತು.
ಸಾಂಬ್ರಾ ವಿಮಾನ ನಿಲ್ದಾಣದ ಮುಂಬಾಗಲ್ಲಿ ನಾಗರ ಹಾವಿನ ಮರಿ ಪ್ರತ್ಯಕ್ಷವಾಗಿತ್ತು. ವಿಮಾನ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಕೆಲ ಹೊತ್ತು ಹರಿದಾಡುತ್ತಿತ್ತು. ಹಾವನ್ನು ಕಂಡು ಪ್ರಯಾಣಿಕರು ಭಯಭೀತರಾಗಿದ್ದರು. ನಂತರ ಭದ್ರತಾ ಸಿಬ್ಬಂದಿಗಳು ಹಾವನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟರು.