ಚಿಕ್ಕೋಡಿ : ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಝಾರಿಗಲ್ಲಿಯಲ್ಲಿ ಸೀಲ್‌ಡೌನ್ ಜಾರಿಯಲ್ಲಿದ್ದರೂ ಮಹಿಳೆಯರು ಅನಾವಶ್ಯಕ ಮನೆಯಿಂದ ಆಚೆ ಬಂದು ಪೊಲೀಸರ ಜೊತೆ ವಾಗ್ವಾದ ನಡೆಸಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ತಾಯಿ ಹಾಗೂ ಮಗುವಿನಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದ ಹಿನ್ನೆಲೆ ತಾಲೂಕಾಡಳಿತ ಝಾರಿಗಲ್ಲಿ ಪ್ರದೇಶವನ್ನ ಸೀಲ್‌ಡೌನ್ ಮಾಡಿತ್ತು. ಆದರೆ, ಇವರ ರಂಪಾಟ ಕಂಡು ಮನವಿ ಮಾಡಿದ ಪೊಲೀಸರು, ನಿಮಗೆ ಹಾಲು, ನೀರು, ತರಕಾರಿ ಎಲ್ಲಾ ಸಿಗುತ್ತೆ ಎಂದು ಹೇಳಿದರೂ ಮಹಿಳೆಯರು ಸ್ವಲ್ಪವೂ ಕೇರ್ ಮಾಡಲಿಲ್ಲ.
ನಮಗೆ ರೇಷನ್ ತಂದು ಕೊಡಬೇಕು. ಇಲ್ಲದಿದ್ರೆ ನಮ್ಮನ್ನ ಮನೆಯಿಂದ ಹೊರಗಡೆ ಬಿಡಬೇಕು ಎಂದು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ಮನೆಗಳಿಗೆ ದಿನಸಿ ವಸ್ತುಗಳ ವಿತರಣೆಯಲ್ಲಿ ತಡವಾದ ಹಿನ್ನೆಲೆ ರಸ್ತೆಗಿಳಿದು ಆಕ್ರೋಶ ವ್ಯಕ್ತಪಡಿಸಿದರು.