ETV Bharat / state

ನವೀನ್​ ಪಾರ್ಥಿವ ಶರೀರ ಎಲ್ಲಿಯೂ ಹೋಗಿಲ್ಲ, ಕುಟುಂಬಕ್ಕೆ ತಲುಪಿಸಲಾಗುತ್ತದೆ: ಸಚಿವ ಉಮೇಶ ಕತ್ತಿ - umesh khatti reaction

ಮುಖ್ಯಮಂತ್ರಿಗಳು ನವೀನ್​ ಪಾರ್ಥಿವ ಶರೀರವನ್ನು ತರಿಸುವುದಾಗಿ ಹೇಳಿದ್ದಾರೆ. ಅದರಂತೆ ನಡೆದುಕೊಳ್ಳುತ್ತಾರೆ. ಅಲ್ಲಿ ಯುದ್ಧ ಪರಿಸ್ಥಿತಿ ಇರುವುದರಿಂದ ಕಾರ್ಯಾಚರಣೆ ಕಷ್ಟವಾಗುತ್ತಿದೆ ಎಂದು ಸಚಿವ ಉಮೇಶ್​ ಕತ್ತಿ ಹೇಳಿದ್ದಾರೆ.

Minister Umesh khati
ಸಚಿವ ಉಮೇಶ ಕತ್ತಿ
author img

By

Published : Mar 6, 2022, 7:48 PM IST

ಬೆಳಗಾವಿ: ಉಕ್ರೇನ್​ನಲ್ಲಿ ಸಿಲುಕಿರುವ ಎಲ್ಲ ವಿದ್ಯಾರ್ಥಿಗಳನ್ನು ಕರೆತರಲು ಕೇಂದ್ರ, ರಾಜ್ಯ ಸರ್ಕಾರ ಪ್ರಯತ್ನ ಮಾಡುತ್ತಿವೆ. ಕೇಂದ್ರ ಸರ್ಕಾರ ಇದಕ್ಕಾಗಿ 4ಜನ ಸಚಿವರನ್ನು ನಿಯೋಜನೆ ಮಾಡಿದೆ ಎಂದು ಸಚಿವ ಉಮೇಶ ಕತ್ತಿ ಹೇಳಿದರು.

ನವೀನನ ಪಾರ್ಥಿವ ಶರೀರ ಎಲ್ಲಿಯೂ ಹೋಗಿಲ್ಲ,ಕುಟುಂಬಕ್ಕೆ ತಲುಪಿಸಲಾಗುತ್ತದೆ: ಸಚಿವ ಉಮೇಶ ಕತ್ತಿ

ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಯದ್ಧ ಪೀಡಿತ ಉಕ್ರೇನ್ ಪ್ರದೇಶದಿಂದ ಸುರಕ್ಷಿತವಾಗಿ ಮರಳಿ ಬಂದ ವಿದ್ಯಾರ್ಥಿ ಬ್ರಾಹ್ಮಿ ಪಾಟೀಲ್ ಅವರನ್ನು ಸ್ವಾಗತಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತಾನಡಿದ ಅವರು, ಉಕ್ರೇನ್​ನಿಂದ ವಾಪಸ್ ಬಂದ ವಿದ್ಯಾರ್ಥಿನಿಯನ್ನು ಸ್ವಾಗತಿಸಿದ್ದೇನೆ. ಚಿಕ್ಕೋಡಿ ಬ್ರಾಹ್ಮಿ ಪಾಟೀಲ್ ಇಂದು ಸುರಕ್ಷಿತವಾಗಿ ಮರಳಿ ವಾಪಸ್ ಬಂದಿದ್ದಾರೆ. ಇನ್ನೂ ಅನೇಕರು ಬರುವವರು ಇದ್ದಾರೆ ಎಂದರು.

ಉಕ್ರೇನ್​ನಲ್ಲಿ ನವೀನ್ ಸಾವು ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮುಖ್ಯಮಂತ್ರಿಗಳು ನವೀನ್​ ಪಾರ್ಥಿವ ಶರೀರವನ್ನು ತರಿಸುವುದಾಗಿ ಹೇಳಿದ್ದಾರೆ. ಅದರಂತೆ ನಡೆದುಕೊಳ್ಳುತ್ತಾರೆ. ಅಲ್ಲಿ ಯುದ್ಧ ಪರಿಸ್ಥಿತಿ ಇರುವುದರಿಂದ ಕಾರ್ಯಾಚರಣೆ ಕಷ್ಟವಾಗುತ್ತಿದೆ ಎಂದು ತಿಳಿಸಿದರು.

ಇದೇ ಸಂಧರ್ಬದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ:, ಯದ್ಧಪೀಡಿತ ಉಕ್ರೇನ್ ದೇಶಕ್ಕೆ ಹೋಗಿದ್ದ ಬೆಳಗಾವಿ ಜಿಲ್ಲೆಯ 20 ವಿದ್ಯಾರ್ಥಿಗಳ ಪೈಕಿ ಈಗಾಗಲೇ ಭಾರತಕ್ಕೆ 17ವಿದ್ಯಾರ್ಥಿಗಳು ತಲುಪಿದ್ದಾರೆ. ಇನ್ನೂ ಮೂವರು ವಿದ್ಯಾರ್ಥಿಗಳು ಸುರಕ್ಷಿತವಾಗಿ ಬರಬೇಕಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ

ಓರ್ವ ವಿದ್ಯಾರ್ಥಿ ಬೆಂಗಳೂರಿನಲ್ಲಿ ಇದ್ದಾರೆ. ಇನ್ನೂ 7 ಜನ ದೆಹಲಿ ತಲುಪಿದ್ದು, ಬೆಳಗಾವಿಗೆ ವಾಪಸ್ ಬರಲಿದ್ದಾರೆ. ವಿದ್ಯಾರ್ಥಿಗಳ ಸುರಕ್ಷಿತವಾಗಿ ಕರೆ ತರಲು ಸಿಎಂ ಸೂಚನೆ ಕೊಟ್ಟಿದ್ದಾರೆ. ಸಿಎಂ ಸೂಚನೆ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಮನೆಗೆ ಬಿಡಲು ಎಲ್ಲ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಇಲ್ಲಾ ವಿದ್ಯಾರ್ಥಿಗಳ ಸಂಪರ್ಕದಲ್ಲಿದ್ದೇವೆ. ಉಕ್ರೇನ್​ನಲ್ಲಿರುವ ಮೂರು ಜನರನ್ನು ಆದಷ್ಟು ಬೇಗ ಕರೆತರಲಾಗುವುದು ಎಂದರು.

ಇದನ್ನೂ ಓದಿ: ಉಕ್ರೇನ್​ನಿಂದ ಸುರಕ್ಷಿತವಾಗಿ ಹಿಂದಿರುಗಿದ ಬೆಳಗಾವಿಯ ವಿದ್ಯಾರ್ಥಿನಿ ಬ್ರಾಹ್ಮಿ..

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.