ಬೆಳಗಾವಿ: ಪ್ರತಿನಿತ್ಯ ರಾಜಕೀಯ ಪಕ್ಷಗಳ ದೊಂಬರಾಟದಿಂದ ರಾಜ್ಯದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದ್ದು ಇದು ತಕ್ಷಣ ನಿಲ್ಲಬೇಕು. ಕ್ಷೇತ್ರದ ಅಭಿವೃದ್ಧಿ ನಿರ್ಲಕ್ಷ್ಯ ಮಾಡಿದ ಶಾಸಕರ ನಡೆಯನ್ನು ಕರ್ನಾಟಕ ಸಂಗ್ರಾಮ ಸೇನೆ ತೀವ್ರ ಖಂಡಿಸುತ್ತದೆ ಎಂದು ರಾಜ್ಯಾಧ್ಯಕ್ಷ ಸಂಜೀವ ದುಮಕನಾಳ ಹೇಳಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ರಾಜ್ಯದಲ್ಲಿ ರಾಜಕೀಯ ನಾಟಕದಿಂದ ಜನರು ಬೇಸತ್ತಿದ್ದಾರೆ. ಕ್ಷೇತ್ರದ ಅಭಿವೃದ್ಧಿಯನ್ನು ಮರೆತಿದ್ದಾರೆ. ಆದ್ದರಿಂದ ಇದ್ದನ್ನು ಕೈ ಬಿಟ್ಟು ರಾಜ್ಯದ ಜನರ ಬಗ್ಗೆ ಗಮನ ಹರಿಸಬೇಕಾಗಿದೆ ಎಂದರು.
ಬೆಳಗಾವಿ ಜಿಲ್ಲೆಯಲ್ಲಿ ಅನೇಕ ಸಮಸ್ಯೆಗಳಿವೆ. ಅವುಗಳ ವಿರುದ್ಧ ಕರ್ನಾಟಕ ಸಂಗ್ರಾಮ ಸೇನೆಯ ಜಿಲ್ಲಾಧ್ಯಕ್ಷೆ ಶ್ವೇತಾ ಅವರ ನೇತೃತ್ವದಲ್ಲಿ, ಮುಂದಿನ ದಿನಗಳಲ್ಲಿ ಹೋರಾಟ ಮಾಡಲಿದೆ ಎಂದರು.