ಅಥಣಿ/ಬೆಳಗಾವಿ: ಕರ್ನಾಟಕ ರಾಜ್ಯಕ್ಕೆ ಮಹದಾಯಿ ನದಿ ನೀರು ಹಂಚಿಕೆಗೆ ಅಧಿಸೂಚನೆ ಹೊರಡಿಸಿದ ಕೇಂದ್ರ ಸರ್ಕಾರಕ್ಕೆ ರೈತ ಸಂಘಟನೆಗಳು ಅಭಿನಂದನೆ ಸಲ್ಲಿಸಿವೆ.
ಮಹದಾಯಿ ನದಿ ನೀರಿಗಾಗಿ ಹೋರಾಟ ಮಾಡುತ್ತಿದ್ದ ಉತ್ತರ ಕರ್ನಾಟಕ ಜನರ ದಾಹ ತಣಿಸುವ ಸಲುವಾಗಿ, ಕೇಂದ್ರ ಸರ್ಕಾರ ಕೊನೆಗೂ ಅಧಿಸೂಚನೆ ಹೊರಡಿಸಿದೆ. ಇದರ ಅನ್ವಯ ಕರ್ನಾಟಕ ಮಹದಾಯಿ ನದಿಯಿಂದ 13.45 ಟಿಎಂಸಿ ನೀರು ಬಳಸಬಹುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಈ ಹಿನ್ನೆಲೆ ಕೇಂದ್ರ ಸರ್ಕಾರದ ನಿಲುವನ್ನು ಸ್ವಾಗತಿಸಿ ಅಥಣಿಯ ರೈತ ಸಂಘಟನೆಗಳು ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿವೆ.
ಹಲವು ವರ್ಷಗಳಿಂದ ಮಹದಾಯಿ ನೀರಿಗಾಗಿ ರೈತರು ರೈತ ಸಂಘಟನೆಗಳು ಹೋರಾಟದ ಪ್ರತಿಫಲವಾಗಿ ಮಹದಾಯಿ ನೀರು ಹಂಚಿಕೆ ವಿಷಯದಲ್ಲಿ ಕೇಂದ್ರ ಸರ್ಕಾರ ನಿಲುವನ್ನು ನಾವು ಸ್ವಾಗತಿಸುತ್ತೇವೆ. ಕೇಂದ್ರ ಸರ್ಕಾರಕ್ಕೆ ನಮ್ಮ ಉತ್ತರ ಕರ್ನಾಟಕ ಸಮಸ್ತ ರೈತರ ಪರವಾಗಿ ಅಭಿನಂದನೆ ಸಲ್ಲಿಸುತ್ತೇವೆಂದು ರೈತ ಮುಖಂಡರಾದ ಭರಮು ನಾಯಕ್, ಚಿದಾನಂದ ಶೇಗುಣಸಿ ಹೇಳಿದ್ದಾರೆ. ಮಹದಾಯಿ ನೀರಿಗಾಗಿ ನಾವು ಹೋರಾಡುತ್ತಲೇ ಬಂದಿದ್ದೆವು. ರೈತ ಸಂಘಟನೆಗಳು ಸಮಾಜಸೇವಕರು ಕವಿಗಳು ಹಾಗೂ ಅನೇಕರು ಹೋರಾಟ ಮಾಡಿದ್ರು. ಇದರ ಪ್ರತಿಫಲವಾಗಿ ಇವತ್ತು ನಮಗೆ ನೀರು ಹಂಚಿಕೆಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ