ಬೆಳಗಾವಿ: ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಲಿಫ್ಟ್ ಕೈಕೊಟ್ಟ ಪರಿಣಾಮ ಸುಮಾರು ಒಂದು ಗಂಟೆಗಳ ಕಾಲ ಇಬ್ಬರು ವ್ಯಕ್ತಿಗಳು ಪರದಾಡಿದ್ದಾರೆ.
ಗುರುವಾರ ಮಧ್ಯಾಹ್ನ ಲಿಫ್ಟ್ ಮೂಲಕ ಕೆಳಗೆ ಬರುತ್ತಿದ್ದ ಅಲ್ಲಿನ ಸಿಬ್ಬಂದಿ ಹಾಗೂ ವ್ಯಕ್ತಿಯೊಬ್ಬ ಲಿಫ್ಟ್ ಬಾಗಿಲು ತೆಗೆಯದೆ ಸಿಕ್ಕಿಹಾಕಿಕೊಂಡಿದ್ದಾರೆ. ನಂತರ ಸಹೋದ್ಯೋಗಿಗೆ ಕರೆ ಮಾಡಿ ಮಾಹಿತಿ ನೀಡಿದ ಬಳಿಕ ಅಗ್ನಿ ಶಾಮಕ ಹಾಗೂ ಲಿಫ್ಟ್ ಟೆಕ್ನಿಷಿಯನ್ ಧಾವಿಸಿ ಇಬ್ಬರನ್ನು ರಕ್ಷಿಸಲಾಗಿದೆ.