ETV Bharat / state

ಬೆಂಗಳೂರು: ಹುಟ್ಟುಹಬ್ಬದಂದೇ ಕಲ್ಲಿನಿಂದ ಜಜ್ಜಿ, ರುಂಡ ಬೇರ್ಪಡಿಸಿ ಯುವಕನ ಹತ್ಯೆ - ಬೆಂಗಳೂರಿನ ಕೆಂಗೇರಿ ಬಳಿ ರುಂಡ ಬೇರ್ಪಡಿಸಿ ಯುವಕನ ಹತ್ಯೆ

ಯುವಕನನ್ನು ಕಲ್ಲಿನಿಂದ ಜಜ್ಜಿ, ರುಂಡ ಕತ್ತರಿಸಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಕೆಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

youth-brutally-murdered-in-bengaluru-kengeri
ಬೆಂಗಳೂರು: ಹುಟ್ಟುಹಬ್ಬದಂದೇ ಕಲ್ಲಿನಿಂದ ಜಜ್ಜಿ, ರುಂಡ ಬೇರ್ಪಡಿಸಿ ಯುವಕನ ಹತ್ಯೆ
author img

By

Published : Jul 17, 2022, 1:21 PM IST

ಬೆಂಗಳೂರು: ಹುಟ್ಟುಹಬ್ಬದ ದಿನದಂದೇ ಯುವಕ ಬರ್ಬರವಾಗಿ ಹತ್ಯೆಯಾಗಿರುವ ಘಟನೆ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ನೈಸ್ ರೋಡ್ ಬಳಿ ನಡೆದಿದೆ‌. ಹೆಚ್‌.ಗೊಲ್ಲಹಳ್ಳಿ ನಿವಾಸಿ ಹೇಮಂತ್ ಕುಮಾರ್ ಎಂಬಾತ ಹತ್ಯೆಯಾದ ಯುವಕನಾಗಿದ್ದಾನೆ.‌

ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ಮನೆಯಿಂದ ಹೊರ ಹೋಗಿದ್ದ ಯುವಕ ಮನೆಗೆ ಹಿಂತಿರುಗಿರಲಿಲ್ಲ. ಆದರೆ ಇಂದು ಬೆಳಗ್ಗೆ ಹೆಮ್ಮಿಗೆಪುರ ವಾರ್ಡ್ ನೈಸ್ ರೋಡ್​​​ನ ಸುರಂಗಬಳಿ ಕಲ್ಲಿನಿಂದ ಜಜ್ಜಿ, ರುಂಡ ಬೇರ್ಪಡಿಸಿರುವ ಸ್ಥಿತಿಯಲ್ಲಿ ಆತನ ಶವ ಪತ್ತೆಯಾಗಿದೆ. ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಸ್ಥಳಕ್ಕೆ ಕುಟುಂಬಸ್ಥರು ಬಂದು ನೋಡಿದ ಮೇಲೆ ಕೊಲೆಯಾಗಿರುವುದು ಹೇಮಂತ್ ಎಂಬುದು ಗೊತ್ತಾಗಿದೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಪರಿಚಯಸ್ಥರೇ ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ. ಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ‌‌. ಶ್ವಾನದಳ ಹಾಗೂ ಎಫ್​ಎಸ್​​ಎಲ್ ಸಿಬ್ಬಂದಿ ಸ್ಥಳಕ್ಕೆ ಬಂದು ಸಾಕ್ಷ್ಯಾಧಾರ ಸಂಗ್ರಹಿಸುವಲ್ಲಿ ನಿರತರಾಗಿದ್ದಾರೆ.

ಇದನ್ನೂ ಓದಿ: ವಿಚ್ಛೇದಿತ ಮಹಿಳೆ ಜೊತೆ ಪ್ರೀತಿ ಹೆಸರಲ್ಲಿ ಸೆಕ್ಸ್; ಕೈಕೊಟ್ಟ ಕೃಷಿ ಅಧಿಕಾರಿ ವಿರುದ್ಧ ಮೈಸೂರಿನಲ್ಲಿ ದೂರು

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.