ಬೆಂಗಳೂರು : ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಮಹಾತ್ಮ ಗಾಂಧೀಜಿ ಫೋಟೋಗೆ ಪುಷ್ಪ ನಮನ ಹಾಗೂ ಉಪ್ಪಿನ ಪ್ಯಾಕೆಟ್‍ಗಳನ್ನು ಇಟ್ಟು ವಿನೂತನವಾಗಿ ಗಾಂಧೀಜಿ ಹುಟ್ಟು ಹಬ್ಬವನ್ನು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಆಚರಿಸಿದ್ದಾರೆ.
ಮೆಜೆಸ್ಟಿಕ್ ಬಸ್ ನಿಲ್ದಾಣದ ಬಳಿ ಗಾಂಧೀಜಿ ಜಯಂತಿಯನ್ನು ಆಚರಣೆ ಮಾಡಲಾಯಿತು. ಕಾರ್ಯಕ್ರಮದ ಬಳಿಕ ಉಪ್ಪಿನ ಪ್ಯಾಕೆಟ್‌ಗಳನ್ನು ಸಾರ್ವಜನಿಕರಿಗೆ ಹಂಚುವ ಮೂಲಕ ಗಾಂಧೀಜಿಯನ್ನು ವಾಟಾಳ್ ನಾಗರಾಜ್ ನೆನೆದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್ ಅವರು, ದೇಶದಲ್ಲಿ ರಾಜಕೀಯ ನಾಯಕರು ಹದಗೆಟ್ಟು ಹೋಗಿದ್ದಾರೆ. ರಾಜಕೀಯ ನಾಯಕರಾದ ಸಿಎಂ, ಮಂತ್ರಿಗಳು, ಎಂಎಲ್ಎ ಹಾಗೂ ಎಂಪಿಗಳನ್ನು ಹರಾಜು ಮೂಲಕ ಪಡೆದುಕೊಳ್ಳಬಹುದು. ದೇಶದ ರಾಜಕೀಯ ವಲಯದಲ್ಲಿ ಪ್ರಾಮಾಣಿಕತೆ ಕಡಿಮೆಯಾಗಿದೆ. ಈ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ದೇಶದ ಜನರಿಗೆ ಜೀವನ ಮಾಡುವುದು ತುಂಬಾ ಕಷ್ಟ ಆಗುತ್ತದೆ ಎಂದರು.
ಈ ವೇಳೆ ಕೆಲವು ಸಾರ್ವಜನಿಕರು ಗಾಂಧೀಜಿ ಹೇಗೂ ಇಲ್ಲ. ಹೀಗಾಗಿ, ಕನ್ನಡಪರ ಹೊರಟಗಾರ ವಾಟಾಳ್ ನಾಗರಾಜ್ ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳುವ ಮೂಲಕ ಖುಷಿ ಪಟ್ಟರೆ, ಇನ್ನೂ ಕೆಲವರು ಉಪ್ಪಿನ ಪ್ಯಾಕೆಟ್ ಪಡೆದು ವಾಟಾಳ್ ನಾಗರಾಜ್‍ರಿಂದ ಆಶೀರ್ವಾದ ಪಡೆದು ಖುಷಿ ಪಟ್ಟರು.