ETV Bharat / state

ದುಬಾರಿ ಬೆಲೆಯ ಮೊಬೈಲ್​ಗಳೇ ಇವರ ಟಾರ್ಗೆಟ್: ಪೊಲೀಸ್​ ಬಲೆಗೆ ಬಿದ್ದ ಇಬ್ಬರು ಮೊಬೈಲ್ ಕಳ್ಳರು - Nayandalli on Mysore Road

ಕೆಂಪೇಗೌಡ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೆಲ ತಿಂಗಳ ಹಿಂದೆ ರಿಲಾಯನ್ಸ್ ಡಿಜಿಟಲ್ ಶೋ ರೂಂ ಬೀಗ ಒಡೆದು ಒಳ ನುಗ್ಗಿದ್ದ ಕಳ್ಳರು 20 ಲಕ್ಷ ರೂಪಾಯಿ ಬೆಲೆ ಬಾಳುವ 29 ಮೊಬೈಲ್ ಫೋನ್​ಗಳು ಹಾಗೂ 4 ಕ್ಯಾಮರಾಗಳನ್ನು ಕಳ್ಳತನ ‌ಮಾಡಿ‌ ನಾಪತ್ತೆಯಾಗಿದ್ದರು.

Two mobile thieves who fell into the police trap
ದುಬಾರಿ ಬೆಲೆಯ ಮೊಬೈಲ್​ಗಳೇ ಇವರ ಟಾರ್ಗೆಟ್: ಪೊಲೀಸ್​ ಬಲೆಗೆ ಬಿದ್ದ ಇಬ್ಬರು ಮೊಬೈಲ್ ಕಳ್ಳರು
author img

By

Published : Mar 14, 2020, 8:47 PM IST

ಬೆಂಗಳೂರು: ದುಬಾರಿ ಬೆಲೆಯ ಮೊಬೈಲ್ ಗಳು ಮತ್ತು ಡಿಜಿಟಲ್ ಕ್ಯಾಮರಾಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಖದೀಮರನ್ನು ಕೆಂಪೇಗೌಡ ನಗರ ಪೊಲೀಸರು ಬಂಧಿಸಿದ್ದಾರೆ.

ರಿಲಾಯನ್ಸ್ ಡಿಜಿಟಲ್ ಶೋ ರೂಂ ಬೀಗ ಹೊಡೆದು ಒಳ ನುಗ್ಗಿದ್ದ ಕಳ್ಳರು

ಸೂರ್ಯ ಹಾಗೂ ವೆಂಕಟೇಶ್ ಬಂಧಿತ ಆರೋಪಿಗಳು. ಬಂಧಿತರಿಬ್ಬರೂ ಮೈಸೂರು ರಸ್ತೆಯ ನಾಯಂಡಳ್ಳಿಯ ನಿವಾಸಿಗಳಾಗಿದ್ದಾರೆ. ಕೆಂಪೇಗೌಡ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೆಲ ತಿಂಗಳ ಹಿಂದೆ ರಿಲಾಯನ್ಸ್ ಡಿಜಿಟಲ್ ಶೋ ರೂಂ ಬೀಗ ಒಡೆದು ಒಳ ನುಗ್ಗಿದ್ದ ಕಳ್ಳರು 20 ಲಕ್ಷ ರೂಪಾಯಿ ಬೆಲೆ ಬಾಳುವ 29 ಮೊಬೈಲ್ ಫೋನ್​ಗಳು ಹಾಗೂ 4 ಕ್ಯಾಮರಾಗಳನ್ನು ಕಳ್ಳತನ ‌ಮಾಡಿ‌ ಪರಾರಿಯಾಗಿದ್ದರು.

ಕದ್ದಿರುವ ಮೊಬೈಲ್, ಕ್ಯಾಮೆರಾಗಳನ್ನು ಮೂರನೇ ಆರೋಪಿ ಅರವಿಂದ ಎಂಬಾತನಿಗೆ ಮಾರಾಟ ಮಾಡುತ್ತಿದ್ದರು. ಸದ್ಯ ಈತ ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದಾನೆ. ಇನ್ನಿಬ್ಬರು ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಬೈಕ್ ಕಳ್ಳತನ ಪ್ರಕರಣ ಕೂಡ ಹೊರಬಂದಿದೆ. ಆರೋಪಿಗಳಿಂದ ಕದ್ದಿರುವ ಮಾಲು, ಪಲ್ಸರ್ ಬೈಕ್ ವಶಕ್ಕೆ ಪಡೆದುಕೊಂಡಿರುವುದಾಗಿ‌ ನಗರ ದಕ್ಷಿಣ ವಿಭಾಗದ ಪೊಲೀಸ್​ ಅಧಿಕಾರಿ ಡಾ. ರೋಹಿಣಿ ಕಟೋಚ್ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.