ETV Bharat / state

ಚಾಲಕರ ಸಂಘಟನೆ ಜತೆ ಸಾರಿಗೆ ಆಯುಕ್ತರ ಸಭೆ: ನಾಳೆ ಹಣ ನೀಡಿಕೆ ಮಾರ್ಗಸೂಚಿ ಪ್ರಕಟ - ಚಾಲಕರ ಅಸೋಸಿಯೇಷನ್ ಜೊತೆ ಸಾರಿಗೆ ಆಯುಕ್ತರು ಸಭೆ

ಸಿಎಂ ಯಡಿಯೂರಪ್ಪ ಅವರು ಲಾಕ್​ಡೌನ್​ನಿಂದ ಉಂಟಾದ ನಷ್ಟ ಪರಿಹಾರದ ಘೋಷಣೆ ಹೊರಡಿಸಿದ ಪ್ರಯುಕ್ತ, ಶಾಂತಿನಗರದ ಸಾರಿಗೆ ಆಯುಕ್ತರ ಕಚೇರಿಯಲ್ಲಿ ಆಯುಕ್ತ ಶಿವಕುಮಾರ್ ಕರೆದಿದ್ದ ಸಭೆಯಲ್ಲಿ ಹಲವು ಆಟೋ, ಟ್ಯಾಕ್ಸಿ ಅಸೋಸಿಯೇಷನ್​ನ ಪ್ರತಿನಿಧಿಗಳು ಭಾಗವಹಿಸಿದರು.

Transport commissioners meeting with drivers' association ..
ಚಾಲಕರ ಅಸೋಸಿಯೇಷನ್ ಜೊತೆ ಸಭೆ
author img

By

Published : May 6, 2020, 11:49 PM IST

ಬೆಂಗಳೂರು : ಆಟೋ, ಟ್ಯಾಕ್ಸಿ ಚಾಲಕರಿಗೆ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಸಹಾಯಧನ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಇಂದು ಸಂಜೆ ಸಾರಿಗೆ ಆಯುಕ್ತ ಶಿವಕುಮಾರ್ ಚಾಲಕರ ಸಂಘಟನೆ ಪ್ರತಿನಿಧಿಗಳ ಜೊತೆ ಸಭೆ ನಡೆಸಿದರು.

Transport commissioners meeting with drivers' association ..
ಶಾಂತಿನಗರ ಸಾರಿಗೆ ಆಯುಕ್ತರ ಕಚೇರಿಯಲ್ಲಿ ನಡೆದ ಸಭೆ

ಶಾಂತಿನಗರದ ಸಾರಿಗೆ ಆಯುಕ್ತರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಹಲವು ಆಟೋ, ಟ್ಯಾಕ್ಸಿ ಅಸೋಸಿಯೇಷನ್​ನ ಮುಂಖಡರು ಭಾಗಿಯಾಗಿದ್ದರು. ಫಲಾನುಭವಿಗಳಿಗೆ ಸಹಾಯಧನ ತಲುಪಿಸುವ ಬಗ್ಗೆ ಸಾರಿಗೆ ಆಯುಕ್ತರು ಸಲಹೆ ಪಡೆದಿದ್ದಾರೆ.

ವೆಬ್ ಸೈಟ್ ಮೂಲಕ ಚಾಲಕರ ಮಾಹಿತಿ ಪಡೆದು ಪರಿಹಾರ ಧನ ತಲುಪಿಸುವ ಬಗ್ಗೆ ಚರ್ಚಿಸಿದರು. ಆನ್​ಲೈನ್ ಮೂಲಕ ಸಹಾಯಧನ ತಲುಪಿಸಲು ನಿರ್ಧಾರ ಮಾಡಲಾಗಿದ್ದು, ಈ ಕುರಿತು ನಾಳೆ ಮಾರ್ಗಸೂಚಿ ಹೊರಡಿಸುವುದಾಗಿ‌ ಸಭೆಯಲ್ಲಿ ಸಾರಿಗೆ ಆಯುಕ್ತರು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.