ಬೆಂಗಳೂರು: ರಾಜ್ಯದಲ್ಲಿಂದು 580 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 9,54,393 ಕ್ಕೆ ಏರಿಕೆ ಆಗಿದೆ.
ಐವರು ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆಯು 12,359 ಕ್ಕೆ ಏರಿದೆ. 355 ಮಂದಿ ಗುಣಮುಖರಾಗಿದ್ದು, 9,35,421 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳು 6,594 ಇದ್ದು 109 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೋಂಕಿತರ ಪ್ರಕರಣಗಳ ಶೇಕಡವಾರು 0.70 ರಷ್ಟು ಇದ್ದರೆ ಮೃತ ಪಟ್ಟವರ ಪ್ರಮಾಣ ಶೇ 0.86 ರಷ್ಟು ಇದೆ. ಯುಕೆಯಿಂದ ಬಂದಿದ್ದ ಪ್ರಯಾಣಿಕರಲ್ಲಿ ಈವರೆಗೆ 64 ಜನಕ್ಕೆ ಪಾಸಿಟಿವ್ ಬಂದಿದ್ದು, ಈ ಸೋಂಕಿತರ ಸಂಪರ್ಕದಲ್ಲಿ 26 ಮಂದಿಗೂ ಕೊರೊನಾ ಸೋಂಕು ಹರಡಿರುವುದು ದೃಢಪಟ್ಟಿದೆ. 25 ಜನರಿಗೆ ರೂಪಾಂತರ ಕೊರೊನಾ ಹರಡಿದೆ.