ETV Bharat / state

ಆಟವಾಡುವಾಗ ಗಣೇಶನ ಮೂರ್ತಿ ನುಂಗಿದ ಕಂದಮ್ಮ.. ಮಗು ಉಳಿಸಲು ವೈದ್ಯರು ಮಾಡಿದ್ದೇನು? - boy-swallowed-a-ganesh-idol-

ಆಟವಾಡುತ್ತಿದ್ದ ಮಗು ಗಣೇಶನ ಮೂರ್ತಿಯನ್ನು ನುಂಗಿ ಅಪಾಯಕ್ಕೆ ಸಿಲುಕಿದ್ದ ಘಟನೆ ವರದಿಯಾಗಿದೆ. ಮಗು ಉಸಿರಾಡಲು ಕಷ್ಟಪಡುತ್ತಿದ್ದದನ್ನು ಕಂಡ ಪೋಷಕರು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ. ಬೆಂಗಳೂರಿನಲ್ಲಿ ಈ ಘಟನೆ ನಡೆದಿದೆ.

three-year-old-boy-swallowed-a-ganesh-idol-while-playing
ಆಟವಾಡುವಾಗ ಗಣೇಶನ ಮೂರ್ತಿ ನುಂಗಿದ ಮೂರು ವರ್ಷದ ಕಂದಮ್ಮ
author img

By

Published : Jul 24, 2021, 12:54 PM IST

ಬೆಂಗಳೂರು: ಗಣೇಶ ಮೂರ್ತಿ ನುಂಗಿದ ಮೂರು ವರ್ಷದ ಮಗು ವೈದ್ಯರ, ಪೋಷಕರ ಸಮಯಪ್ರಜ್ಞೆಯಿಂದ ಬದುಕುಳಿದಿದೆ. ಗಣೇಶ ಮೂರ್ತಿ ಜೊತೆ ಮಗು ಆಟವಾಡುತ್ತಿದ್ದ ವೇಳೆ ಇಡಿಯಾಗಿ ನುಂಗಿದೆ, ಮನೆಯವರು ನೋಡಿದಾಗ ಮಗು ಉಸಿರಾಡಲಾಗದೆ ಒದ್ದಾಡುತ್ತಿತ್ತು. ತಕ್ಷಣ ಎಚ್ಚೆತ್ತ ಪೋಷಕರು ನಗರ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಮೂರ್ತಿಯ ನುಂಗಿರುವುದು ಪತ್ತೆಯಾಗಿದೆ. ಇದೀಗ ಮೂರು ವರ್ಷದ ಮಗುವಿಗೆ ಚಿಕಿತ್ಸೆ ನೀಡಿ ಗಣೇಶನನ್ನು ಹೊರೆತೆಗೆದಿರುವ ವೈದ್ಯರು ಮಗು ಆರೋಗ್ಯವಾಗಿದೆ ಎಂದು ತಿಳಿಸಿದ್ದಾರೆ.

ಶುಕ್ರವಾರ 8:30ಕ್ಕೆ ಪೋಷಕರ ಗಮನಕ್ಕೆ ಈ ಘಟನೆ ತಿಳಿದುಬಂದಿದೆ. ಕೂಡಲೇ ಓಲ್ಡ್ ಏರ್​ಪೋರ್ಟ್​ ಬಳಿಯಿರುವ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಂದು ಗಂಟೆ ಚಿಕಿತ್ಸೆ ನೀಡಿ ಗಣೇಶನ ಮೂರ್ತಿ ವೈದ್ಯರು ಹೊರತೆಗೆದಿದ್ದಾರೆ.

ಶಸ್ತ್ರಚಿಕಿತ್ಸೆ ಮಾಡದೆ ಮೂರ್ತಿ ಹೊರಕ್ಕೆ

ಫುಡ್ ಪೈಪ್ ಬಳಿ ಮೂರ್ತಿ ಇರೋದನ್ನು ಪತ್ತೆ ಹಚ್ಚಲಾಗಿತ್ತು. ಮೆಟಲ್ ಆಬ್ಜೆಕ್ಟ್ ಆಗಿದ್ದರಿಂದ ಎಂಡೋಸ್ಕೋಪಿಕ್ ಮೂಲಕ ತೆಗೆಯಲು‌ ನಿರ್ಧರಿಸಿದ್ದರು. ಸಾಮಾನ್ಯವಾಗಿ ಫುಡ್ ಪೈಪ್ ಬಳಿ ಇದ್ದಾಗ ತೆಗೆಯಲು ರಿಸ್ಕ್ ಹೆಚ್ಚಿರುತ್ತದೆ, ಫುಡ್ ಪೈಪ್ ಡ್ಯಾಮೇಜ್ ಆಗುವ ಸಾಧ್ಯತೆ ಸಹ ಇರುತ್ತದೆ. ಹೀಗಾಗಿ ಮೂರ್ತಿಯನ್ನು ಹೊಟ್ಟೆಯ ಭಾಗಕ್ಕೆ ತಂದು. ಮಗು ದೇಹ ಉಲ್ಟಾ ಮಾಡಿ ಎಂಡೋಸ್ಕೋಫಿ ಮೂಲಕ ತೆಗೆಯಲಾಗಿದೆ. ಮಗುವಿನ ಮೇಲೆ ಮೂರು ಗಂಟೆಗಳ ನಿಗಾ ಇರಿಸಿ ನಂತರ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಮಣಿಪಾಲ್ ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.