ಬೆಂಗಳೂರು: ದೇಶದಲ್ಲಿ ಕೋವಿಡ್ ಎರಡನೇ ಅಲೆ ಅಪ್ಪಳಿಸುತ್ತಿದ್ದು, ಅತಿ ಹೆಚ್ಚು ಕೇಸ್ ದಾಖಲಾಗುತ್ತಿವೆ. ಮಾರ್ಚ್ 17 ರಂದು ದೇಶದಲ್ಲೇ 23,179 ಕೇಸ್ ದಾಖಲಾಗಿದ್ದು, 2021ರ ಒಂದೇ ದಿನದದಲ್ಲಿ ದಾಖಲೆ ಪ್ರಕರಣಗಳು ಕಂಡು ಬಂದಿದ್ದವು. ಜನರಲ್ಲಿ ಮತ್ತೆ ಆತಂಕ ಸೃಷ್ಟಿಸಿರುವ ಕೊರೊನಾಗೆ ಪುಷ್ಟಿ ನೀಡುವಂತೆ ಪಾಲಿಕೆ ಕೂಡ ನಗರದಲ್ಲಿ ಮೂರು ಕೋವಿಡ್ ಕ್ಲಸ್ಟರ್ಗಳನ್ನು ಹೊಸದಾಗಿ ಘೋಷಿಸಿದೆ.
ಪಾಲಿಕೆಯ ಕೋವಿಡ್ ಸಂಬಂಧಿ ವರದಿ ಹೊರಬಿದಿದ್ದು, ಒಂದು ಅಪಾರ್ಟ್ಮೆಂಟ್ ಹಾಗೂ ಎರಡು ಡ್ಯುಪ್ಲೆಕ್ಸ್ ಮನೆ ಹಾಗೂ ಸುತ್ತಾಮುತ್ತಾ ಕೋವಿಡ್ ಕಂಟೇನ್ಮೆಂಟ್ ಕ್ಲಸ್ಟರ್ ಎಂದು ಘೋಷಿಸಲಾಗಿದೆ.
ಯಲಹಂಕಂ ವಲಯದ ಗೋವರ್ಧನ್ ಅಪಾರ್ಟ್ಮೆಂರ್ಟ್ನಲ್ಲಿ ಕೇರಳದಿಂದ ಬಂದಿರುವ ಒಬ್ಬರಿಗೆ ಕೊರೊನಾ ದೃಢಪಟ್ಟ ಹಿನ್ನೆಲೆ ಕೋವಿಡ್ ಪರೀಕ್ಷೆ ನಡೆಸಿದಾಗ ಇನ್ನೂ ನಾಲ್ವರಿಗೆ ಕೊರೊನಾ ಹರಡಿರುವುದು ದೃಢಪಟ್ಟಿದೆ. ಈ ನಾಲ್ವರು ಇಸ್ಕಾನ್ ದೇವಾಲಯಕ್ಕೆ ಕೂಡ ಭೇಟಿ ನೀಡಿರುವುದು ಬೆಳಕಿಗೆ ಬಂದಿದೆ. ಇತ್ತೀಚಿನ ಮಾಹಿತಿ ಪ್ರಕಾರ ಇನ್ನಿಬ್ಬರು ಅಪಾರ್ಟ್ಮೆಂಟ್ ವಾಸಿಗಳಿಗೆ ಕೋವಿಡ್ ದೃಢಪಟ್ಟಿದೆ. ಪ್ರತಿಯೊಂದು ಫ್ಲ್ಯಾಟ್ನ ನಿವಾಸಿಗಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.
ಬಿ. ಇ. ಎಲ್ನ ತಿಂಡ್ಲು ಬಳಿಯ ಮನೆಯೊಂದರ ಸದಸ್ಯರು ಮದುವೆ ಸಮಾರಂಭಕ್ಕೆ ಹೋಗಿ ಬಂದಿದ್ದು ಇಡೀ ಕುಟುಂಬದ ಸದಸ್ಯರಿಗೆ ಕೋವಿಡ್ ದೃಢಪಟ್ಟಿದೆ. ವಯಸ್ಸಾದವರೂ ಕುಟುಂಬದಲ್ಲಿದ್ದು, ಮದುವೆ ಸಮಾರಂಭಕ್ಕೆ ಹೋಗಿ ಬಂದಿರುವುದು ಆತಂಕಕ್ಕೆ ಎಡೆ ಮಾಡಿ ಕೊಟ್ಟಿದೆ. ಪಾಲಿಕೆ ಕೋವಿಡ್ ಕಂಟೇನ್ಮೆಂಟ್ ಝೋನ್ ಎಂದು ಮನೆಯ ಸುತ್ತ ಮುತ್ತಲಿನ ಪ್ರದೇಶವನ್ನು ಘೋಷಿಸಿದ್ದಾರೆ. ಕುಟುಂಬದ ಸದಸ್ಯರಿಗೆ ಹೋಮ್ ಐಸೋಲೇಶನ್ಗೆ ಸೂಚಿಸಲಾಗಿದೆ.
ಎಂ ಎಸ್ ಪಾಳ್ಯದ ಮನೆಯ ಸುತ್ತ ಮುತ್ತ ಕೂಡ ಕಂಟೇನ್ಮೆಂಟ್ ಝೋನ್ ಎಂದು ಘೋಷಿಸಲಾಗಿದ್ದು, 9 ಜನರಿರುವ ಕುಟುಂಬದದಲ್ಲಿನ 7 ಸದಸ್ಯರಿಗೆ ಕೋವಿಡ್ ದೃಢಪಟ್ಟಿದೆ. ಇನ್ನುಳಿದ ಇಬ್ಬರ ಕೋವಿಡ್ ರಿಪೋರ್ಟ್ ಬರಬೇಕಿದೆ.