ETV Bharat / state

ಸರಣಿ ಬಾಂಬ್ ಸ್ಫೋಟ ಪ್ರಕರಣ.. ಸೆರೆ ಸಿಕ್ಕ ಶಂಕಿತ ಬಾಯ್ಬಿಟ್ಟ ಸತ್ಯವೇನು? - bangalore serial bomb blasts news

ಸೆರೆಯಾದ ಶೋಯೆಬ್ ವಿರುದ್ಧ ಈಗಾಗಲೇ 9 ಪ್ರಕರಣ ದಾಖಲಾಗಿವೆ. ಅಂದರೆ ಈ ಹಿಂದೆ ಬಂಧನಕ್ಕೊಳಗಾಗಿರುವ ಇತರೆ ಆರೋಪಿಗಳು ಬಾಂಬ್ ಸ್ಫೋಟದಲ್ಲಿ ಶೋಯೆಬ್ ಪಾತ್ರದ ಬಗ್ಗೆ ನೀಡಿದ ಹೇಳಿಕೆ‌ಗಳನ್ನ ಸುದೀರ್ಘ ಅಧ್ಯಯನ ಮಾಡಬೇಕಾಗುತ್ತದೆ..

ಶಂಕಿತ ಉಗ್ರ‌ ಶೋಯೆಬ್​
ಶಂಕಿತ ಉಗ್ರ‌ ಶೋಯೆಬ್​
author img

By

Published : Sep 23, 2020, 9:39 PM IST

ಬೆಂಗಳೂರು : 2008ರಲ್ಲಿ ಸಿಲಿಕಾನ್ ಸಿಟಿಯೊಳಗೆ ನಡೆದ‌ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದ ಶಂಕಿತ ಉಗ್ರ‌ ಶೋಯೆಬ್​​ನನ್ನು‌ ಕೇರಳದಲ್ಲಿ ಭಯೋತ್ಪಾದನಾ ನಿಗ್ರಹದ (ಎಟಿಸಿ) ತನಿಖಾಧಿಕಾರಿಗಳು ಬಂಧಿಸಿದ್ದು, ವಿಚಾರಣೆ ಚುರುಕುಗೊಳಿಸಿದ್ದಾರೆ.

ಪೊಲೀಸ್ ವಶದಲ್ಲಿರುವ ಶಂಕಿತ ಉಗ್ರ ತನ್ನ ಹಿನ್ನೆಲೆ, ನಗರದಲ್ಲಿ ಬಾಂಬ್‌ ಸ್ಫೋಟಿಸಲು ಕಾರಣ ಏನು ಎಂಬುದರ ಬಗ್ಗೆ ವಿಚಾರಣೆ ವೇಳೆ ತನಿಖಾಧಿಕಾರಿಗಳ‌ ಮುಂದೆ ಬಾಯ್ಬಿಟ್ಟಿದ್ದಾನೆ. ಅಲ್ಲದೇ ಪ್ರಕರಣ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳಿಗೆ ಎದುರಾದ ಸವಾಲುಗಳ ಬಗ್ಗೆ ವಿಸ್ತೃತ ಮಾಹಿತಿ ಇಲ್ಲಿ‌ ಬರೆಯಲಾಗಿದೆ.

ಕೇರಳದ ಕಣ್ಣೂರು ಮೂಲದ ಶೋಯೆಬ್, 2005ರಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮುಗಿಸಿದ್ದ.‌ ಬಡತ‌ನ ಹಿನ್ನೆಲೆ ಪಿಯುಸಿ ಬಳಿಕ ಎರಡು ವರ್ಷಗಳ ಕಾಲ ಅಂದರೆ 2006-07ರವರೆಗೂ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ‌ ಮಾಡಿದ್ದ. ಈ ನಡುವೆ ಕೆಲ‌ ಸ್ನೇಹಿತರು ಪರಿಚಯವಾಗಿದ್ದಾರೆ. ಇವರ ನಿರಂತರ ಸಂಪರ್ಕ ಹೊಂದಿದ್ದ ಆತ, ಪ್ರತಿದಿನ ತಬ್ಲಿಘಿ ಆಫ್ ಜಮಾತ್ ಮಸೀದಿಯಲ್ಲಿ‌ ನಡೆಯುವ ಪ್ರವಚನ ಕೇಳಲು ಹೋಗುತ್ತಿದ್ದ. ಅಲ್ಲಿ‌‌ ಮತ್ತೋರ್ವ ಸ್ನೇಹಿತನ ಪರಿಚಯವಾಗಿದ್ದು, ಅಲ್ಲಿಂದ ವಿಧ್ವಂಸಕ‌ ಕೃತ್ಯಗಳಲ್ಲಿ ಭಾಗಿಯಾಗ ತೊಡಗಿದ್ದಾನೆ.

ಬಳಿಕ‌ ತಮ್ಮ ದೇವರೇ ಶೇಷ್ಠ. ನಮ್ಮ ದೇವರ ವಿರೋಧಿಸುವವರು ಶತ್ರುಗಳು ಎಂದು ಶೋಯೆಬ್​ಗೆ ಹೇಳಿ ತಲೆ ಕೆಡಿಸಿದ್ದಾನೆ‌.‌ ಕೆಲ ದಿನಗಳ ನಂತರ ಕೇರಳದ ನ್ಯಾಷನಲ್ ಡೆಮಾಕ್ರಟಿಕ್ ಸಂಘಟನೆಗೂ ಸೇರಿದ್ದ. ಒಂದು ವರ್ಷದವರೆಗೂ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದ. ಇದೇ ವೇಳೆ ಬಾಬ್ರಿ‌ ಮಸೀದಿ- ಅಯೋಧ್ಯೆ ವಿವಾದ ಮುನ್ನೆಲೆಗೆ ಬಂದಿತ್ತು.‌ ಅಲ್ಲದೇ ಆರ್​ಎಸ್​​ಎಸ್ ಸೇರಿದಂತೆ ಬಲಪಂಥೀಯ ವಾದ ಪ್ರಬಲವಾಗಿ ವಿರೋಧಿಸುವಂತೆ ಈತನ‌ ಜೊತೆಯಲ್ಲಿದ್ದವರು ತಲೆ ಕೆಡಿಸಿದ್ದರು.

ಇದಾದ ಬಳಿಕ‌ 2008ರಲ್ಲಿ ಶೋಯೆಬ್ ಬೆಂಗಳೂರಿನ‌ 9 ಕಡೆ ಸರಣಿ ಬಾಂಬ್ ಬ್ಲಾಸ್ಟ್ ಮಾಡಿದ್ದಾನೆ. ಕೃತ್ಯ ಎಸಗಿ 12 ವರ್ಷಗಳೇ‌ ಗತಿಸಿವೆ. ಈವರೆಗೂ ಬಂಧನಕ್ಕೊಳಗಾದವರ‌ ಪಟ್ಟಿ ನೋಡುವುದಾದ್ರೆ‌ ಈತ‌ 32ನೇ ಆರೋಪಿ. ಈಗಾಗಲೇ ಆರು ಮಂದಿ ಆರೋಪಿಗಳು ಪತ್ತೆಯಾಗಿಲ್ಲ.‌ ಇನ್ನೂ‌ ನಾಲ್ಕು ಮಂದಿ ಆರೋಪಿಗಳು ಮೃತಪಟ್ಟಿದ್ದಾರೆ. ಶೋಯೆಬ್ ಹೊರತುಪಡಿಸಿದ್ರೆ 21 ಮಂದಿ ಶಂಕಿತ ಉಗ್ರರು ನ್ಯಾಯಾಂಗ ಬಂಧನದಲ್ಲಿದ್ದಾರೆ.

ತನಿಖಾಧಿಕಾರಿಗಳಿಗೆ ಎದುರಾಗಿದೆ ಹೊಸ ಸವಾಲು : ಈ ಪ್ರಕರಣದಲ್ಲಿ ಮೂರಕ್ಕಿಂತ ಹೆಚ್ಚು ತನಿಖಾಧಿಕಾರಿಗಳು ತನಿಖೆ ಮಾಡಿ ಈಗಾಗಲೇ ವರದಿ ಸಲ್ಲಿಸಿದ್ದಾರೆ. ಈ ಪೈಕಿ ಕೆಲವರು ನಿವೃತ್ತಿಗೊಂಡಿದ್ದಾರೆ. ಸೆರೆಯಾದ ಶೋಯೆಬ್ ವಿರುದ್ಧ ಈಗಾಗಲೇ 9 ಪ್ರಕರಣ ದಾಖಲಾಗಿವೆ. ಅಂದರೆ ಈ ಹಿಂದೆ ಬಂಧನಕ್ಕೊಳಗಾಗಿರುವ ಇತರೆ ಆರೋಪಿಗಳು ಬಾಂಬ್ ಸ್ಫೋಟದಲ್ಲಿ ಶೋಯೆಬ್ ಪಾತ್ರದ ಬಗ್ಗೆ ನೀಡಿದ ಹೇಳಿಕೆ‌ಗಳನ್ನ ಸುದೀರ್ಘ ಅಧ್ಯಯನ ಮಾಡಬೇಕಾಗುತ್ತದೆ.

ಹಿಂದಿನ ಪ್ರಕರಣ ಸಾವಿರಾರು ಪುಟಗಳ ತನಿಖಾ ವರದಿ ಸಂಪೂರ್ಣವಾಗಿ ಅಧ್ಯಯನ ನಡೆಸಿದ ಬಳಿಕವಷ್ಟೇ ವಿಚಾರಣೆ ನಡೆಸಬೇಕಿರುವುದು ಭಯೋತ್ಪಾದನಾ ನಿಗ್ರಹದಳದ (ಎಟಿಸಿ) ತನಿಖಾಧಿಕಾರಿಗೆ ಹೊಸ ಸವಾಲಾಗಿ‌ ಪರಿಣಾಮಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.