ETV Bharat / state

ರಾಜ್ಯದಲ್ಲಿ ಒಕ್ಕಲಿಗ ಅಭಿವೃದ್ಧಿ ಮಂಡಳಿ ಕೂಡ ಆಗಲೇಬೇಕು: ಡಿಸಿಎಂ ಅಶ್ವತ್ಥ್​​ ನಾರಾಯಣ - State Development Board

ಬೇಡಿಕೆ ಅನುಸಾರ ನಮ್ಮ ಸರ್ಕಾರ ಎಲ್ಲಾ ಸಮುದಾಯಗಳಿಗೆ ಆದ್ಯತೆ ನೀಡುತ್ತಿದೆ. ಒಕ್ಕಲಿಗ ಅಭಿವೃದ್ಧಿ ಮಂಡಳಿ ಮಾಡಬೇಕು ಎಂದು ನಾನು ಒತ್ತಾಯಿಸುತ್ತಿದ್ದೇನೆ. ನಮ್ಮ ಸಮಾಜ ಕೂಡ ಅಭಿವೃದ್ಧಿ ನಿಗಮಕ್ಕೆ ಆಗ್ರಹಿಸುತ್ತಿದೆ. ಶೀಘ್ರವೇ ಒಕ್ಕಲಿಗರ ಅಭಿವೃದ್ಧಿ ‌ಮಂಡಳಿ ರಚನೆಗೆ ಸಿಎಂ ಕ್ರಮ ವಹಿಸಬೇಕು ಎಂದು ಡಿಸಿಎಂ ಅಶ್ವತ್ಥ್​​ ನಾರಾಯಣ ಹೇಳಿದರು.

DCM Ashwaththa Narayana
ಡಿಸಿಎಂ ಅಶ್ವತ್ಥ ನಾರಾಯಣ
author img

By

Published : Nov 24, 2020, 11:13 AM IST

ಬೆಳಗಾವಿ: ರಾಜ್ಯದಲ್ಲಿ ಒಕ್ಕಲಿಗ ಅಭಿವೃದ್ಧಿ ಮಂಡಳಿ ಕೂಡ ಆಗಲೇಬೇಕು ಎಂಬುದು ನನ್ನ ಒತ್ತಾಯ ಎಂದು ಡಿಸಿಎಂ ಅಶ್ವತ್ಥ್​ ನಾರಾಯಣ ತಿಳಿಸಿದರು.

ಬೆಳಗಾವಿಯ ಸಾಂಬ್ರಾ ‌ವಿಮಾನ ನಿಲ್ದಾಣದಲ್ಲಿ ‌ಮಾತನಾಡಿದ ಅವರು, ಬೇಡಿಕೆ ಅನುಸಾರ ನಮ್ಮ ಸರ್ಕಾರ ಎಲ್ಲಾ ಸಮುದಾಯಗಳಿಗೆ ಆದ್ಯತೆ ನೀಡುತ್ತಿದೆ. ಒಕ್ಕಲಿಗ ಅಭಿವೃದ್ಧಿ ಮಂಡಳಿ ಮಾಡಬೇಕು ಎಂದು ನಾನು ಒತ್ತಾಯಿಸುತ್ತಿದ್ದೇನೆ. ನಮ್ಮ ಸಮಾಜ ಕೂಡ ಅಭಿವೃದ್ಧಿ ನಿಗಮಕ್ಕೆ ಆಗ್ರಹಿಸುತ್ತಿದೆ. ಶೀಘ್ರವೇ ಒಕ್ಕಲಿಗರ ಅಭಿವೃದ್ಧಿ ‌ಮಂಡಳಿ ರಚನೆಗೆ ಸಿಎಂ ಕ್ರಮ ವಹಿಸಬೇಕು ಎಂದರು.

ರಾಜ್ಯದಲ್ಲಿ ಮರಾಠ ಅಭಿವೃದ್ಧಿ ನಿಗಮ ಮಾಡಲೇಬೇಕಿತ್ತು. ಹಲವು ವರ್ಷಗಳಿಂದ ಈ ಬೇಡಿಕೆ ಇತ್ತು. ಮರಾಠಿಗರು ನಮ್ಮವರೇ. ನಮ್ಮ ರಾಜ್ಯದಲ್ಲೇ ನೆಲೆಸಿದ್ದಾರೆ. ಹೀಗಾಗಿ ಅವರ ಅಭಿವೃದ್ಧಿಗಾಗಿ ಸಹಕರಿಸುವುದರಲ್ಲಿ ತಪ್ಪೇನಿಲ್ಲ ಎಂದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ ಅಶ್ವತ್ಥ ನಾರಾಯಣ

ಶೈಕ್ಷಣಿಕವಾಗಿ ಸಹಾಯವಾಗಲೆಂದು ಪದವಿ ಕಾಲೇಜು ಆರಂಭಿಸಲಾಗಿದೆ. ಕಾಲೇಜುಗಳಲ್ಲಿ ಸವಾಲು, ಸಮಸ್ಯೆಗಳನ್ನು ವಿಚಾರಿಸಲಾಗುತ್ತಿದೆ. ಆನ್​ಲೈನ್ ಹಾಗೂ ಆಫ್​ಲೈನ್ ನಲ್ಲಿ ಪಾಠ ಕೇಳಲು ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳ ಹಾಗೂ ಪೋಷಕರ ಒತ್ತಾಯದಂತೆ ರಾಜ್ಯದಲ್ಲಿ ಶೈಕ್ಷಣಿಕ ಅಭಿವೃದ್ಧಿಯಾಗುತ್ತಿದೆ. ಕೋವಿಡ್ ಪಾಸಿಟಿವ್ ಬರುತ್ತಿದೆ. ಸುರಕ್ಷತೆಗೆ ಕ್ರಮ ವಹಿಸಲಾಗಿದೆ. ದಿನದಿಂದ ದಿನಕ್ಕೆ ಕಾಲೇಜಿಗೆ ಬರುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. ಕಾಲೇಜು ತಡವಾಗಿ ಆರಂಭವಾಗಿವೆ. ಸೆಮಿಸ್ಟರ್ ಪರೀಕ್ಷೆಗಳು ಕೂಡ ಲೇಟ್ ಆಗಲಿವೆ. ರಜೆ ಕಡಿತ ಮಾಡಿ ತರಗತಿಗಳನ್ನು ನಡೆಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಡಿಸಿಎಂ ಅಶ್ವತ್ಥ್ ನಾರಾಯಣ ತಿಳಿಸಿದರು​.

ಸಿಎಂ ಬದಲಾವಣೆ ಇಲ್ಲ: ಕೆಲವರು ಸಿಎಂ ಬದಲಾವಣೆ ಕುರಿತು ಹೇಳಿಕೆ ನೀಡುತ್ತಿದ್ದಾರೆ. ಆದರೆ ಸಿಎಂ ಬದಲಾವಣೆ ವಿಚಾರ ಪಕ್ಷದ ಮುಂದಿಲ್ಲ. ಒಳ್ಳೆಯ ಆಡಳಿತ ಕೊಡಲು ಯಡಿಯೂರಪ್ಪ ಅವರೇ ಮುಂದುವರಿಯುತ್ತಾರೆ. ಸಿಎಂ ಬದಲಾವಣೆ ಕುರಿತು ವದಂತಿಗಳು ಬರುತ್ತಿವೆ. ಅಂಥವರ ವಿರುದ್ಧ ನಮ್ಮ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಠಿಣ ಕ್ರಮ ಜರುಗಿಸಲಿದ್ದಾರೆ ಎಂದು ಡಿಸಿಎಂ ಎಚ್ಚರಿಕೆ ರವಾನಿಸಿದರು.

ಸಚಿವ ಸಂಪುಟ ವಿಸ್ತರಣೆಗೆ ಸಿಎಂ ಯಡಿಯೂರಪ್ಪ ಉತ್ಸುಕರಾಗಿದ್ದಾರೆ. ಸಮಯ ಬಂದಾಗ ಸಂಪುಟ ವಿಸ್ತರಣೆ ಆಗಲಿದೆ. ಈ ಬಗ್ಗೆ ಯಾವುದೇ ಗೊಂದಲಗಳಿಲ್ಲ. ಸಿಪಿ ಯೋಗೀಶ್ವರ್ ಕೂಡ ಮಂತ್ರಿ ಆಗಬೇಕು. ನಾನು ಮೊದಲಿಂದಲೂ ಅವರು ಮಂತ್ರಿ ಆಗಬೇಕು ಎಂದು ಹೇಳುತ್ತಲೇ ಬಂದಿದ್ದೇನೆ. ಸರ್ಕಾರ ರಚನೆಯಲ್ಲಿ ಅವರ ಪಾತ್ರವೂ ಬಹುಮುಖ್ಯ ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.