ETV Bharat / state

ನಾಳೆಯಿಂದ ಬಾಗಿಲು ತೆರೆಯಲಿವೆ ದೇವಾಲಯಗಳು; ಪ್ರವೇಶಿಸುವ ಮುನ್ನ ಈ ನಿಯಮ ಪಾಲಿಕೆ ಕಡ್ಡಾಯ - ನಿಯಮ ಪಾಲಿಕೆ ಕಡ್ಡಾಯ

ನಾಳೆಯಿಂದ ದೇವಾಲಯಗಳ ಬಾಗಿಲು ತೆರೆಯಲು ಸರ್ಕಾರದ ಧಾರ್ಮಿಕ ದತ್ತಿ ಇಲಾಖೆ ಕೇಂದ್ರ ಸರ್ಕಾರದ ಸೂಚನೆಯಂತೆ ನಿರ್ದೇಶನ ನೀಡಿದೆ.

Temples
ದೇವಾಲಯ
author img

By

Published : Jun 7, 2020, 8:21 AM IST

ಬೆಂಗಳೂರು: ಸರ್ಕಾರದ ಧಾರ್ಮಿಕ ದತ್ತಿ ಇಲಾಖೆ ಕೇಂದ್ರ ಸರ್ಕಾರದ ಸೂಚನೆಯಂತೆ ನಾಳೆಯಿಂದ ದೇವಾಲಯಗಳ ಬಾಗಿಲು ತೆರೆಯಲು ನಿರ್ದೇಶನ ನೀಡಿದೆ.ಆದ್ರೆ, ಹಲವು ಮಾರ್ಗಸೂಚಿಗಳ‌ನ್ನು ನೀಡಿದ್ದು, ಕಡ್ಡಾಯವಾಗಿ ಸೂಚನಾ ಫಲಕಗಳನ್ನು ಅಳವಡಿಸುವಂತೆ ನಿರ್ದೇಶಿಸಿದೆ.

ಮಾರ್ಗಸೂಚಿಗಳು :

  • ಧಾರ್ಮಿಕ ದತ್ತಿ ಇಲಾಖೆಯಡಿ ಬರುವ ಎ, ಬಿ, ಸಿ ದೇವಾಲಯಗಳಲ್ಲಿ ಮಾತ್ರ ದೇವರ ದರ್ಶನಕ್ಕೆ ಅವಕಾಶ.
  • ಜಾತ್ರೆ, ಬ್ರಹ್ಮರಥೋತ್ಸವ, ಉತ್ಸವಗಳನ್ನು ತಾತ್ಕಾಲಿಕವಾಗಿ ನಿಷೇಧಿಸಿದೆ.
  • ದೇವಾಲಯದ ಆವರಣದಲ್ಲಿ ಕಡ್ಡಾಯವಾಗಿ ಸ್ವಚ್ಛತೆ ಕಾಪಾಡುವುದು. ಭಕ್ತಾದಿಗಳ ದೇಹದ ಉಷ್ಣತೆ ತಪಾಸಣೆ ಮಾಡುವುದು, ಕೈಗಳಿಗೆ ಸ್ಯಾನಿಟೈಸರ್ ಬಳಸುವುದು
  • ಸಾಮಾಜಿಕ ಅಂತರ ಕಾಪಾಡಲು ಮಾರ್ಕ್ ಮಾಡುವುದು, ಮಾಸ್ಕ್ ಬಳಕೆ ಕಡ್ಡಾಯ ಹಾಗೂ ಚಪ್ಪಲಿಗಳನ್ನು ಪ್ರತ್ಯೇಕ ಜಾಗದಲ್ಲಿ ಅಥವಾ ವಾಹನಗಳಲ್ಲೇ ಬಿಡುವುದು.
  • ದೇವಾಲಯಕ್ಕೆ ಮಾನಸಿಕ ಅಸ್ವಸ್ಥರು ಬರುವುದು ನಿಷೇಧ. ವೃದ್ಧರು, ಹತ್ತು ವಯಸ್ಸಿಗಿಂತ ಸಣ್ಣ ಮಕ್ಕಳು ಮನೆಯಲ್ಲೇ ಇದ್ದು ಸಹಕರಿಸಲು ಕೋರಿಕೆ
  • ಭಕ್ತಾದಿಗಳು ಗೋಡೆ, ಕಂಬ, ವಿಗ್ರಹ, ರಥ, ಪಲ್ಲಕ್ಕಿ, ಧಾರ್ಮಿಕ ಗ್ರಂಥಗಳನ್ನು ಮುಟ್ಟುವಂತಿಲ್ಲ.
  • ದೇವಾಲಯಕ್ಕೆ ಆಗಮಿಸುವ ಭಕ್ತಾದಿಗಳು ಹಾಗೂ ಸಿಬ್ಬಂದಿ ಆರೋಗ್ಯ ಸೇತು ಆಪ್ ಅಳವಡಿಸುವುದು ಕಡ್ಡಾಯ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
    Temples will open tomorrow
    ಧಾರ್ಮಿಕ ದತ್ತಿ ಇಲಾಖೆ ಸುತ್ತೋಲೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.