ETV Bharat / state

ಕಳೆದೊಂದು ವಾರದಿಂದ ಗುಮ್ಮಟನಗರಿ ಏರುಗತಿಯಲ್ಲಿದೆ ತಾಪಮಾನ - ವಿಜಯಪುರ ಲೇಟೆಸ್ಟ್​ ನ್ಯೂಸ್​

ಎಲ್ಲೆಡೆ ಬೇಸಿಗೆ ಆರಂಭವಾಗಿದ್ದು, ಬಿಸಿಲನಾಡು ಎಂದು ಕರೆಯುವ ವಿಜಯಪುರದಲ್ಲಿ ಕಳೆದೊಂದು ವಾರದಿಂದ ತಾಪಮಾನ ಹೆಚ್ಚಾಗುತ್ತಿದ್ದು, ಮಧ್ಯಾಹ್ನ ಸಮಯದಲ್ಲಂತೂ ಜನರು ರಸ್ತೆಗಿಳಿಯಲು ಹಿಂದೆ ಮುಂದೆ ನೋಡುವಂತಾಗಿದೆ.

Temperatures rising in Vijayapura in one week
ಕಳೆದೊಂದು ವಾರದಿಂದ ಗುಮ್ಮಟನಗರಿಯಲ್ಲಿ ಹೆಚ್ಚುತ್ತಿರುವ ತಾಪಮಾನ
author img

By

Published : May 25, 2020, 6:48 PM IST

ವಿಜಯಪುರ: ಕೊರೊನಾ ಭೀತಿ ನಡುವೆ ಗುಮ್ಮಟ ನಗರಿಯಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನರು ಸೂರ್ಯನ ಝಳಕ್ಕೆ ತತ್ತರಿಸಿದ್ದಾರೆ.

ಕಳೆದೊಂದು ವಾರದಿಂದ ಗುಮ್ಮಟನಗರಿಯಲ್ಲಿ ಹೆಚ್ಚುತ್ತಿರುವ ತಾಪಮಾನ

ಎಲ್ಲಡೆ ಬೇಸಿಗೆ ಆರಂಭವಾಗಿದ್ದು, ಬಿಸಿಲನಾಡು ಎಂದು ಕರೆಯುವ ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ತಾಪಮಾನ ಹೆಚ್ಚಾಗುತ್ತಿದ್ದು, ಮಧ್ಯಾಹ್ನ ಸಮಯದಲ್ಲಂತೂ ಜನರು ರಸ್ತೆಗಿಳಿಯಲು ಹಿಂದೆ ಮುಂದೆ ನೋಡುವಂತಾಗಿದೆ.

ಒಂದು ಕಡೆ ಬಿಲಿಸಿನ ತಾಪಮಾನ ಹೆಚ್ಚಾಗುತ್ತಿದ್ದು, ಮತ್ತೊಂದೆಡೆ ಜಿಲ್ಲೆಯ ಕೆಲವು ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಇದರಿಂದ ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗುತ್ತಿಲ್ಲ. ಕೇವಲ ಜನರು ಮಾತ್ರವಲ್ಲದೇ ಜಾನುವಾರುಗಳು ನೀರಿಲ್ಲದೇ ಸಂಕಷ್ಟಕ್ಕೀಡಾಗಿವೆ.

ಕಳೆದ ವರ್ಷವೂ ಜಿಲ್ಲೆಯಲ್ಲಿ 39 ಡಿಗ್ರಿ ವರೆಗೂ ತಾಪಮಾನ ಹೆಚ್ಚಾಗಿತ್ತು. ಕಳೆದೊಂದು ವಾರದಿಂದ ಬಿಸಿಲಿನ ಉಷ್ಣಾಂಶ ಹೆಚ್ಚಾಗುತ್ತಿದ್ದು, ಹಿರಿ ಜೀವಗಳಿಗೆ ಕೊಂಚ ಮಟ್ಟಿಗೆ ಆರೋಗ್ಯ ಸಮಸ್ಯೆಗಳು ಎದುರಾಗುವವ ಸಂಭವವಿದೆ. ಹಾಗಾಗಿ ಎಚ್ಚರದಿಂದ ಇರಬೇಕು. ಇನ್ನು ಈ ವರ್ಷ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಯಿದೆ ಎಂದು ನಿವೃತ್ತ ಹವಾಮಾನ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.