ETV Bharat / state

'ಕೋರ್ಟ್​​ಗಳಿಗೆ ಓಡಾಡುವ ಬದಲು ಪರೀಕ್ಷೆಗೆ ಸಿದ್ಧರಾಗಿ' ಎಂದ ಸುಪ್ರೀಂಕೋರ್ಟ್‌: ಕೆಎಸ್ಎಲ್​ಯು ವಿದ್ಯಾರ್ಥಿಗಳ ಅರ್ಜಿ ವಜಾ

ಪರೀಕ್ಷೆ ನಡೆಸಲು ಸಮ್ಮತಿಸಿದ ರಾಜ್ಯ ಹೈಕೋರ್ಟ್​ ವಿಭಾಗೀಯ ಪೀಠದ ತೀರ್ಪು ಪ್ರಶ್ನಿಸಿ ವಿದ್ಯಾರ್ಥಿಗಳು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ನ್ಯಾಯಮೂರ್ತಿ ಎ.ಎಸ್ ಖಾನ್ವಿಲ್ಕರ್ ಹಾಗೂ ನ್ಯಾಯಮೂರ್ತಿ ಸಿ.ಟಿ. ರವಿಕುಮಾರ್ ಅವರಿದ್ದ ಸುಪ್ರೀಂಕೋರ್ಟ್ ಪೀಠವು ವಜಾಗೊಳಿಸಿದೆ.

supreme-court-dismisses-law-student-plea-to-cancel-llb-exams-of-kslu
ಕೆಎಸ್ಎಲ್​ಯು ವಿದ್ಯಾರ್ಥಿಗಳ ಅರ್ಜಿ ವಜಾ
author img

By

Published : Mar 4, 2022, 10:14 PM IST

ಬೆಂಗಳೂರು: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ನಡೆಸಲಿರುವ ಮೂರು ವರ್ಷದ ಎಲ್ಎಲ್‌ಬಿ ಪರೀಕ್ಷೆಗಳನ್ನು ರದ್ದುಪಡಿಸಲು ನಿರಾಕರಿಸಿರುವ ಸುಪ್ರೀಂಕೋರ್ಟ್, ವಿದ್ಯಾರ್ಥಿಗಳಿಗೆ ಹೋಗಿ ಪರೀಕ್ಷೆಗೆ ಸಿದ್ಧರಾಗಿ ಎಂದು ಸೂಚಿಸಿದೆ.

ಪರೀಕ್ಷೆ ನಡೆಸಲು ಸಮ್ಮತಿಸಿದ ರಾಜ್ಯ ಹೈಕೋರ್ಟ್​ ವಿಭಾಗೀಯ ಪೀಠದ ತೀರ್ಪು ಪ್ರಶ್ನಿಸಿ ವಿದ್ಯಾರ್ಥಿಗಳು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ನ್ಯಾಯಮೂರ್ತಿ ಎ.ಎಸ್ ಖಾನ್ವಿಲ್ಕರ್ ಹಾಗೂ ನ್ಯಾಯಮೂರ್ತಿ ಸಿ.ಟಿ. ರವಿಕುಮಾರ್ ಅವರಿದ್ದ ಪೀಠ ಈ ಅರ್ಜಿಯನ್ನು ವಜಾಗೊಳಿಸಿದೆ.

ಅರ್ಜಿದಾರ ವಿದ್ಯಾರ್ಥಿಗಳ ನಡೆಗೆ ಬೇಸರ ವ್ಯಕ್ತಪಡಿಸಿರುವ ಕೋರ್ಟ್, ನೀವೀಗ ವಿದ್ಯಾರ್ಥಿಗಳು ಮತ್ತು ವಕೀಲರಾಗಲು ಬಯಸುತ್ತಿರುವವರು. ಭವಿಷ್ಯದ ನ್ಯಾಯಾಧೀಶರು ಹೀಗೆ ಪರೀಕ್ಷೆ ಇಲ್ಲದೆ ಉತ್ತೀರ್ಣರಾಗಬೇಕು ಎಂದು ಬಯಸುವುದು ಸರಿಯೇ ಎಂದು ಪ್ರಶ್ನಿಸಿದೆ.

ಕೋವಿಡ್ ವೇಳೆ ಬರೆಯಬೇಕಿದ್ದ 3 ವರ್ಷದ ಎಲ್ಎಲ್​​ಬಿ ಕೋರ್ಸ್​​ನ 2 ಮತ್ತು 4ನೇ ಸೆಮಿಸ್ಟರ್ ಪರೀಕ್ಷೆಗಳನ್ನು ಬರೆಯಲು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಒತ್ತಾಯಪಡಿಸುತ್ತಿದೆ ಎಂಬ ಅರ್ಜಿದಾರ ವಿದ್ಯಾರ್ಥಿಗಳ ಪರ ವಕೀಲರ ಹೇಳಿಕೆಗೆ ಪೀಠ ಖಾರವಾಗಿ ಪ್ರತಿಕ್ರಿಯಿಸಿದೆ. ಭಾರತೀಯ ವಕೀಲರ ಪರಿಷತ್ತು ಪರೀಕ್ಷೆಗಳನ್ನು ಕಡ್ಡಾಯಗೊಳಿಸಿದೆ. ಈ ನಿಯಮ ಬರೀ ಕರ್ನಾಟಕಕ್ಕೆ ಮಾತ್ರವೇ ಅನ್ವಯಿಸುವುದಿಲ್ಲ. ಇಡೀ ದೇಶದ ಕಾನೂನು ವಿವಿಗಳಿಗೆ ಅನ್ವಯಿಸಲಿದೆ. ನಿಮಗೆ ಮಾತ್ರ ವಿನಾಯಿತಿ ಬೇಕೆ? ಕಾನೂನು ವಿದ್ಯಾರ್ಥಿಯಾಗಿ ಪರೀಕ್ಷೆ ಬರೆಯಲು ಸಂತೋಷದಿಂದ ಸಿದ್ಧರಾಗಬೇಕು. ಪರೀಕ್ಷೆ ನಡೆಸುವುದನ್ನು ಪ್ರಶ್ನಿಸಿ ಹೀಗೆ ಕೋರ್ಟ್​​ಗಳಿಗೆ ಓಡಾಡುವ ಬದಲು ಹೋಗಿ ಪರೀಕ್ಷೆಗೆ ಸಿದ್ಧರಾಗಿ ಎಂದು ಸೂಚಿಸಿ, ಅರ್ಜಿ ವಜಾಗೊಳಿಸಿದೆ.

ಇದನ್ನೂ ಓದಿ: ಬೆಳಗ್ಗೆ ತನ್ನದೇ ದೇಶದ ಕ್ರಿಕೆಟಿಗ ರಾಡ್​ ಮಾರ್ಷ್​ಗೆ ಸಂತಾಪ ಸೂಚಿಸಿದ್ದ ಶೇನ್​ ವಾರ್ನ್​ ಸಂಜೆ ನಿಧನ!

ಕೋವಿಡ್ ಹಿನ್ನೆಲೆಯಲ್ಲಿ ಪರೀಕ್ಷೆ ಬರೆಯಲು ನಿರಾಕರಿಸಿದ್ದ ಕೆಲ ವಿದ್ಯಾರ್ಥಿಗಳು ಕರ್ನಾಟಕ ರಾಜ್ಯ ಕಾನೂನು ವಿವಿ ನಿಗದಿ ಮಾಡಿದ್ದ ಪರೀಕ್ಷಾ ವೇಳಾಪಟ್ಟಿ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. 2021ರ ಡಿಸೆಂಬರ್ 14ರಂದು ಪರೀಕ್ಷೆ ರದ್ದು ಮಾಡಿದ್ದ ಹೈಕೋರ್ಟ್ ಏಕಸದಸ್ಯ ಪೀಠ 3 ವರ್ಷ ಎಲ್ಎಲ್​ಬಿ ಕೋರ್ಸ್​​ನ 2 ಮತ್ತು 4ನೇ ಸೆಮಿಸ್ಟರ್ ವಿದ್ಯಾರ್ಥಿಗಳನ್ನು ಯುಜಿಸಿ ಸುತ್ತೋಲೆಯಂತೆ ಮುಂದಿನ ತರಗತಿಗಳಿಗೆ ಬಡ್ತಿ ನೀಡುವಂತೆ ಸೂಚಿಸಿತ್ತು. ಈ ಆದೇಶ ಪ್ರಶ್ನಿಸಿ ವಿವಿ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಸ್.ಜಿ ಪಂಡಿತ್ ಹಾಗೂ ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ವಿಭಾಗೀಯ ಪೀಠ, ವೃತ್ತಿಪರ ಕೋರ್ಸ್​ಗಳಲ್ಲಿ ವಿನಾಯಿತಿ ನೀಡಲಾಗದು. ವಿದ್ಯಾರ್ಥಿಗಳಿಗೆ ಸೂಕ್ತ ವಿಧಾನದಲ್ಲಿ ಪರೀಕ್ಷೆ ನಡೆಸಿ ಎಂದಿತ್ತು.

ಹೈಕೋರ್ಟ್ ವಿಭಾಗೀಯ ಪೀಠ ಪರೀಕ್ಷೆ ನಡೆಸಲು ವಿವಿಗೆ ಅನುಮತಿಸಿದ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್​ಗೆ ಸ್ಪೆಷಲ್ ಲೀವ್ ಪಿಟಿಷನ್ ಸಲ್ಲಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.