ಬೆಂಗಳೂರು: ಭಾನುವಾರ ಬೆಳಗ್ಗೆ 7ರಿಂದ ರಾತ್ರಿ 9 ರ ವರೆಗೆ ಪ್ರಧಾನಿ ಮೋದಿ ಅವರು ಕರೆನೀಡಿರುವ ಜನತಾ ಕರ್ಫ್ಯೂಗೆ ಬೃಹತ್ ಬೆಂಗಳೂರಿನ ಹೋಟೆಲ್ ಸಂಘಟನೆ ಬೆಂಬಲ ನೀಡಿದೆ.
ಕೊರೊನಾ ಸೋಂಕು ತಡೆಗಟ್ಟುವ ಹಿನ್ನೆಲೆ, ಒಂದು ದಿನ ನಮ್ಮ ಮನೆಯಲ್ಲಿಯೇ ಇರಬೇಕು. ಆ ದಿನ ಹೋಟೆಲ್ - ರೆಸ್ಟೋರೆಂಟ್, ಸ್ವೀಟ್ ಸ್ಟಾಲ್, ಬೇಕರಿ, ಕೇಟರಿಂಗ್ ಸಂಪೂರ್ಣವಾಗಿ ಬಂದ್ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ಪಿ.ಸಿ. ರಾವ್ ಪ್ರಕಟಣೆ ಹೊರಡಿಸಿದ್ದಾರೆ.

ರಾಜ್ಯಾದ್ಯಂತ ಹೋಟೆಲ್ಗಳನ್ನು ಬಂದ್ ಮಾಡಲು ಸಹ ಆದೇಶ ಹೊರಡಿಸಲಾಗಿದ್ದು, ಒಂದು ದಿನ ಗ್ರಾಹಕರು, ಕಾರ್ಮಿಕರು, ಮನೆಯಲ್ಲಿಯೇ ಇದ್ದು, ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ರಾಜ್ಯ ಹೋಟೆಲ್ಗಳ ಸಂಘಟನೆಯ ಚಂದ್ರಶೇಖರ ಹೆಬ್ಬಾರ್ ತಿಳಿಸಿದ್ದಾರೆ.