ETV Bharat / state

ದ್ವಿತೀಯ ಪಿಯುಸಿ ಪರೀಕ್ಷೆಗೆ ವಿದ್ಯಾರ್ಥಿಗಳು ಗೈರು: ಪಿಯು ಬೋರ್ಡ್ ನಿರ್ದೇಶಕರು ಹೇಳುವುದೇನು?

author img

By

Published : Apr 24, 2022, 4:44 PM IST

Updated : Apr 24, 2022, 4:54 PM IST

ದ್ವಿತೀಯ ಪಿಯುಸಿ ಪರೀಕ್ಷೆ ಏಪ್ರಿಲ್ 22 ರಿಂದ ಆರಂಭವಾಗಿದೆ. ಎಸ್ಎಸ್ಎಲ್​ಸಿ ಪರೀಕ್ಷೆಯಂತೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೈರು ಹಾಜರಾಗುತ್ತಿದ್ದಾರೆ. ಹಿಜಾಬ್ ಕಾರಣಕ್ಕೋ ಅಥವಾ ಇತರೆ ಸಮಸ್ಯೆಗಳಿಂದ ಈ ರೀತಿ ಗೈರು ಹಾಜರಾತಿ ಹೆಚ್ಚಾಗಿದೆಯೇ ಎಂಬ ಪ್ರಶ್ನೆಉದ್ಭವಿಸಿದೆ.

Students absent for secondary PUC exam
ದ್ವಿತೀಯ ಪಿಯುಸಿ ಪರೀಕ್ಷೆಗೆ ವಿದ್ಯಾರ್ಥಿಗಳು ಗೈರು

ಬೆಂಗಳೂರು: ಕೋವಿಡ್ ಕಾರಣಕ್ಕೆ ಕಳೆದ ಶೈಕ್ಷಣಿಕ ವರ್ಷದಲ್ಲಿ ಎಲ್ಲ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗಿತ್ತು.‌ ಕೋವಿಡ್ ಮೂರನೇ ಅಲೆಯಲ್ಲಿ ಸೋಂಕಿನ ತೀವ್ರತೆ ಕಡಿಮೆ ಇರುವುದರಿಂದ ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆ ಏಪ್ರಿಲ್ 22ರಿಂದ ಆರಂಭವಾಗಿದೆ. ಆದರೆ ಎಸ್ಎಸ್ಎಲ್​ಸಿ ಪರೀಕ್ಷೆಯಂತೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೈರು ಹಾಜರು ಆಗುತ್ತಿದ್ದಾರೆ. ಇದಕ್ಕೆ ಹಿಜಾಬ್ ಕರಿನೆರಳು ಕಾರಣನಾ ಅಥವಾ ಇತರೆ ಸಮಸ್ಯೆಗಳಿಂದ ಈ ರೀತಿ ಗೈರು ಹಾಜರಾತಿ ಹೆಚ್ಚಾಗಿದ್ಯಾ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.

ಏಪ್ರಿಲ್ 22ರಂದು ತರ್ಕ ಶಾಸ್ತ್ರ, ವ್ಯವಹಾರ ಅಧ್ಯಯನ, 23ರಂದು ಗಣಿತ, ಶಿಕ್ಷಣ ಶಾಸ್ತ್ರ ಪರೀಕ್ಷೆ ನಡೆದಿದೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಗೈರುಹಾಜರಿ ಪ್ರಮಾಣ ಹೆಚ್ಚಾಗಿದೆ. ಕಳೆದ ವರ್ಷ (2020-21) ವ್ಯವಹಾರ ಅಧ್ಯಯನ ಪರೀಕ್ಷೆಗೆ 7,926 ವಿದ್ಯಾರ್ಥಿಗಳು ಗೈರಾಗಿದ್ದರೆ, ಈ ವರ್ಷ 11,311 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 3,385 ವಿದ್ಯಾರ್ಥಿಗಳು ಹೆಚ್ಚಾಗಿ ಗೈರಾಗಿದ್ದಾರೆ. ತರ್ಕಶಾಸ್ತ್ರ ಪರೀಕ್ಷೆಗೆ ಕಳೆದ ವರ್ಷ 658 ನೋಂದಣಿ ಪೈಕಿ 38 ವಿದ್ಯಾರ್ಥಿಗಳು ಗೈರಾದ್ರೆ, ಈ ವರ್ಷ 620 ವಿದ್ಯಾರ್ಥಿಗಳು ಹಾಜರಾಗಿ 68 ವಿದ್ಯಾರ್ಥಿಗಳು ಗೈರಾಗಿದ್ದಾರೆ.‌

ಹಿಜಾಬ್ ನಂಟಿದ್ಯಾ?: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಈ ಸಲ ಅತೀ ಹೆಚ್ಚು ಗೈರು ಹಾಜರಾತಿ ವರದಿಯಾಗಿದೆ. ಆದರೆ ಪರೀಕ್ಷೆ ಗೈರು ಹಾಜರಿಗೆ ಹಿಜಾಬ್ ಕಾರಣವಲ್ಲ ಎಂದು ಪಿಯು ಬೋರ್ಡ್ ಹೇಳ್ತಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಪಿಯು ಬೋರ್ಡ್ ನಿರ್ದೇಶಕ ರಾಮಚಂದ್ರನ್, ಕೋವಿಡ್ ಕಾರಣ ಹಾಗೂ ಕಳೆದ ವರ್ಷದಂತೆ ಎಲ್ಲರನ್ನೂ ಪಾಸ್ ಮಾಡುವ ಉದ್ದೇಶದಿಂದ ಗೈರು ಹಾಜರಾತಿ ಆಗಿಬಹುದು.‌ ಇಂತಹದ್ದೇ ಕಾರಣ ಅಂತಾ ಹೇಳಲು ಸಾಧ್ಯವಿಲ್ಲ. ನೂರಾರು ಕಾರಣಗಳು ಇರಬಹುದು. ಈ ವರ್ಷ ಇಲಾಖೆಯಿಂದ ಪ್ರತಿ ಕಾಲೇಜಿನಲ್ಲೂ ಪ್ರಿಪರೇಟರಿ ಪರೀಕ್ಷೆಯನ್ನೂ ನಡೆಸಲಾಗಿತ್ತು. ಜೊತೆಗೆ, ಕ್ಲಾಸ್​ಗಳು ನಡೆಯದೇ ಇದಿದ್ದಕ್ಕೆ ಶೇ.30 ರಷ್ಟು ಪಠ್ಯ ಕಡಿತ ಕೂಡ ಮಾಡಲಾಗಿತ್ತು.‌ ಇಷ್ಟೆಲ್ಲ ವ್ಯವಸ್ಥೆ ಮಾಡಿದ್ದರೂ ವಿದ್ಯಾರ್ಥಿಗಳು ಗೈರು ಹಾಜರು ಆಗಿದ್ದಾರೆ ಎಂದರು.

ಗೈರಾದವರಿಗೆ ಸಪ್ಲಿಮೆಂಟರಿ ಎಕ್ಸಾಂ: ವಾರ್ಷಿಕ ಪರೀಕ್ಷೆಯಲ್ಲಿ ಈ ಸಲ ಗೈರು ಹಾಜರಾದವರಿಗೆ ಸಪ್ಲಿಮೆಂಟರಿ ಪರೀಕ್ಷೆ ನಡೆಸಲಾಗುವುದು. ಆಗ ಹೆಚ್ಚಿನ ಸಂಖ್ಯೆಯಲ್ಲಿ ಬರೆಯುವ ನಿರೀಕ್ಷೆ ಇರುವುದಾಗಿ ಅವರು ಹೇಳಿದ್ದಾರೆ. ಈ ಗೈರು ಹಾಜರಾತಿ ಸಂಬಂಧ ಸಮೀಕ್ಷೆಯನ್ನು ಈತನಕ ಮಾಡಿಲ್ಲ. ‌ಒಂದು ವೇಳೆ ಅನಿರ್ವಾಯ ಬಿದ್ದರೆ ಸಮೀಕ್ಷೆ ನಡೆಸಲಾಗುವುದು.‌ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಈ ರೀತಿ ಹೆಚ್ಚಿನ ಪ್ರಮಾಣದಲ್ಲಿ ಗೈರು ಹಾಜರು ಆಗದಂತೆ ಕ್ರಮವಹಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.‌

ಇದನ್ನೂ ಓದಿ: 'ನನ್ನದು ಅಳಿಲು ಸೇವೆ ಮಾತ್ರ, ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನನ್ನ ಹೆಸರು ಬೇಡ': ಸಿಎಂಗೆ ಬಿಎಸ್​ವೈ ಪತ್ರ

Last Updated : Apr 24, 2022, 4:54 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.