ETV Bharat / state

ರಾಜ್ಯವು ನಾವೀನ್ಯತೆ ಮತ್ತು ಸಮರ್ಥ ನೀತಿಗಳ ತೊಟ್ಟಿಲು: ಡಾ.ಸಿ ಎನ್ ಅಶ್ವತ್ಥ ನಾರಾಯಣ - ASIP President Young Joo Koo Atul Batra

ಎನ್ಇಪಿ ಜಾರಿಯಲ್ಲಿ ರಾಜ್ಯವು ಮುಂಚೂಣಿಯಲ್ಲಿ ಇದ್ದು, ಇದರಲ್ಲಿ ವೈಜ್ಞಾನಿಕ ವಿಧಾನ ಅಳವಡಿಸಿ ಕೊಳ್ಳಲಾಗಿದೆ. ಉನ್ನತ ಶಿಕ್ಷಣ ವಲಯದಲ್ಲಿ ಸಂಪೂರ್ಣ ಡಿಜಿಟಲೀಕರಣ ಮತ್ತು ಆಧುನಿಕ ತಂತ್ರಾಂಶಗಳ ಅಳವಡಿಕೆ ವ್ಯವಸ್ಥೆ ಜಾರಿಗೆ ಬಂದಿದೆ ಎಂದು ನುಡಿದರು.

State is the cradle of innovation and efficient policies: Dr CN Aswattha Narayan
ರಾಜ್ಯವು ನಾವೀನ್ಯತೆ ಮತ್ತು ಸಮರ್ಥ ನೀತಿಗಳ ತೊಟ್ಟಿಲು: ಡಾ.ಸಿ ಎನ್ ಅಶ್ವತ್ಥ ನಾರಾಯಣ
author img

By

Published : Nov 25, 2022, 7:21 PM IST

ಬೆಂಗಳೂರು: ಕರ್ನಾಟಕವು ಸದ್ಯಕ್ಕೆ ಐಟಿ, ಬಿಟಿ, ಸೆಮಿ ಕಂಡಕ್ಟರ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ದೇಶದಲ್ಲಿ ಮೊದಲ ಸ್ಥಾನದಲ್ಲಿದೆ. ಮುಂಬರುವ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ನಂಬರ್ 1 ಸ್ಥಾನವನ್ನು ಅಲಂಕರಿಸುವುದು ನಮ್ಮ ಗುರಿಯಾಗಿದ್ದು, ಕೋವಿಡ್ ನಂತರದ ಕಾಲಘಟ್ಟವು ಇದಕ್ಕೆ ಸೂಕ್ತ ವಾತಾವರಣ ಸೃಷ್ಟಿಸಿದೆ ಎಂದು ಐಟಿ ಮತ್ತು ಬಿಟಿ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಹೇಳಿದರು.

ದಕ್ಷಿಣ ಕೊರಿಯಾದ ಏಷ್ಯನ್ ಸೊಸೈಟಿ ಫಾರ್ ಇನ್ನೋವೇಶನ್ ಅಂಡ್ ಪಾಲಿಸಿ (ಎಎಸ್ಎಪಿ) ಮತ್ತು ಎಂ ಎಸ್ ರಾಮಯ್ಯ ಯೂನಿವರ್ಸಿಟಿ ಫಾರ್ ಅಡ್ವಾನ್ಸ್ಡ್ ಸ್ಟಡೀಸ್ ಜೊತೆ ಭಾರತೀಯ ವಿಜ್ಞಾನ ಸಂಸ್ಥೆಯ ಸಭಾಂಗಣದಲ್ಲಿ ಏರ್ಪಡಿಸಿದ್ದ 12ನೇ ವರ್ಷದ ಸಮಾವೇಶ ಉದ್ಘಾಟಿಸಿ ಸಚಿವ ಅಶ್ವತ್ಥ ನಾರಾಯಣ ಶುಕ್ರವಾರ ಮಾತನಾಡಿದರು.

ರಾಜ್ಯದಲ್ಲಿ ಉತ್ತಮ ಗುಣಮಟ್ಟದ ಕಲಿಕೆ ಮತ್ತು ಉದ್ಯಮಗಳಿಗೆ ಬೇಕಾದ ಆಧುನಿಕ ಕೌಶಲಗಳನ್ನು ನಮ್ಮ ಯುವಜನರಿಗೆ ಕಲಿಸಬೇಕು ಎಂಬ ಮಹತ್ವಾಕಾಂಕ್ಷೆಯಿಂದ ಕಳೆದ 3 ವರ್ಷಗಳಲ್ಲಿ 15 ಸಾರ್ವಜನಿಕ ವಿ.ವಿ.ಗಳನ್ನು ಸ್ಥಾಪಿಸಲಾಗಿದೆ ಎಂದರು.

ಮುಂದುವರಿದು ಎನ್ಇಪಿ ಜಾರಿಯಲ್ಲಿ ರಾಜ್ಯವು ಮುಂಚೂಣಿಯಲ್ಲಿ ಇದ್ದು, ಇದರಲ್ಲಿ ವೈಜ್ಞಾನಿಕ ವಿಧಾನವನ್ನು ಅಳವಡಿಸಿಕೊಳ್ಳಲಾಗಿದೆ. ಉನ್ನತ ಶಿಕ್ಷಣ ವಲಯದಲ್ಲಿ ಸಂಪೂರ್ಣ ಡಿಜಿಟಲೀಕರಣ ಮತ್ತು ಆಧುನಿಕ ತಂತ್ರಾಂಶಗಳ ಅಳವಡಿಕೆಯ ವ್ಯವಸ್ಥೆ ಜಾರಿಗೆ ಬಂದಿದೆ ಎಂದು ನುಡಿದರು.

ಉದ್ಯಮಗಳ ಬೆಳವಣಿಗೆಗೆ ಸಹಭಾಗಿತ್ವ ಮತ್ತು ಪಾಲುದಾರಿಕೆ ಅತ್ಯಗತ್ಯವಾಗಿವೆ. ಇದಕ್ಕಾಗಿ ಸರ್ಕಾರದ ಹಲವು ನೀತಿಗಳನ್ನು ಜಾರಿಗೆ ತಂದಿದೆ ಎಂದು ಪ್ರತಿಪಾದಿಸಿ ಅವರು ಕರ್ನಾಟಕವು ಇಡುತ್ತಿರುವ ಹೆಜ್ಜೆಗಳು ಇಂದು ರಾಷ್ಟ್ರೀಯ ಮಾದರಿಗಳಾಗುತ್ತಿವೆ. ಹಲವು ರಾಜ್ಯಗಳು ಇನ್ನೂ ಚಿಂತನೆ ಮಾಡದೇ ಇರುವಾಗ ನಾವು ಸ್ಪಷ್ಟ ನೀತಿಗಳೊಂದಿಗೆ ಹೊರ ಬರುತ್ತಿದ್ದೇವೆ. ಇದರಿಂದ ರಾಜ್ಯವು ನಾವೀನ್ಯತೆ ಮತ್ತು ಸಮರ್ಥ ನೀತಿಗಳ ತೊಟ್ಟಿಲಾಗಿದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಕೊರಿಯಾ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ಅಧ್ಯಕ್ಷ ಡಾ.ಜೇಸೂ ಕಿಮ್, ಭಾರತೀಯ ವಿಜ್ಞಾನ ಸಂಸ್ಥೆಯ ಡಾ.ಪ್ರಹ್ಲಾದ್ ರಾಮರಾವ್, ಡಾ.ಬಾಲಸುಬ್ರಹ್ಮಣ್ಯಂ, ಎಎಸ್ಐಪಿ ಅಧ್ಯಕ್ಷ ಯಂಗ್ ಜೂ ಕೂ, ಅತುಲ್ ಬಾತ್ರಾ ಮುಂತಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ; ಬಿಎಸ್​ವೈ ತವರು ಜಿಲ್ಲೆಯಲ್ಲಿ ರಾಜ್ಯ ಪ್ರಶಿಕ್ಷಣ ವರ್ಗ: ಶಿವಮೊಗ್ಗಕ್ಕೆ ತೆರಳಿದ ಬಿಜೆಪಿ ನಾಯಕರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.