ETV Bharat / state

ನೆರೆ ಪರಿಹಾರ ಸರ್ಕಸ್: ಪಿಎಂ ಆವಾಜ್ ಯೋಜನೆ ಹಣಕ್ಕೆ ಕೈ ಒಡ್ಡಿದ ರಾಜ್ಯ ಸರ್ಕಾರ

author img

By

Published : Nov 3, 2019, 2:40 AM IST

ನೆರೆ ಪರಿಹಾರ ಕಾರ್ಯ ಕೈಗೊಳ್ಳಲು ರಾಜ್ಯ ಸರ್ಕಾರ ಹರ ಸಾಹಸ ಪಡುತ್ತಿದೆ. ಸೀಮಿತ ಸಂಪನ್ಮೂಲ ಹಾಗು ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗಿರುವ ಅಲ್ಪ ಪರಿಹಾರ ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಇದಕ್ಕಾಗಿ ಪ್ರಧಾನ ಮಂತ್ರಿ ಆವಾಜ್ ಯೋಜನೆಯಡಿಯಲ್ಲಿ ಹಣ ನೀಡುವಂತೆ ಕೇಂದ್ರ ಸರ್ಕಾರದ ಬಳಿ ಮನವಿ ಮಾಡಿದೆ.

ಪ್ರಧಾನ ಮಂತ್ರಿ ಆವಾಜ್ ಯೋಜನೆಯಡಿಯಲ್ಲಿ ಹಣ ನೀಡುವಂತೆ ಕೇಂದ್ರ ಸರ್ಕಾರದ ಬಳಿ ಮನವಿ

ಬೆಂಗಳೂರು: ನೆರೆ ಪರಿಹಾರಕ್ಕೆ‌ ಸಂಪನ್ಮೂಲ ಕ್ರೋಢೀಕರಣಕ್ಕಾಗಿ ರಾಜ್ಯ ಸರ್ಕಾರ ನಾನಾ ಕಸರತ್ತು ನಡೆಸುತ್ತಿದೆ. ಇದೀಗ ರಾಜ್ಯ ಸರ್ಕಾರ ನೆರೆ ಪರಿಹಾರ ಕಾರ್ಯಕ್ಕಾಗಿ ಪ್ರಧಾನ‌ ಮಂತ್ರಿ ಆವಾಜ್ ಯೋಜನೆ ಹಣದತ್ತ ಮುಖ ಮಾಡಿದೆ.

ನೆರೆ ಪರಿಹಾರ ಕಾರ್ಯ ಕೈಗೊಳ್ಳಲು ರಾಜ್ಯ ಸರ್ಕಾರ ಹರಸಾಹಸ ಪಡುತ್ತಿದೆ. ಸೀಮಿತ ಸಂಪನ್ಮೂಲ ಹಾಗೂ ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗಿರುವ ಅಲ್ಪ ಪರಿಹಾರ ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಇದಕ್ಕಾಗಿ ಹೊಸ ಯೋಜನೆಗಳಿಗೆ ಕತ್ತರಿ ಹಾಕಿ, ಪರಿಹಾರ ಕಾರ್ಯಕ್ಕೆ ಹಣ ಹೊಂದಿಸುತ್ತಿದೆ. ಅದಕ್ಕಾಗಿ ರಾಜ್ಯ ಸರ್ಕಾರ ನೆರೆಯಿಂದ ಮನೆ ಹಾನಿಯಾದವರಿಗೆ ಮನೆ ಕಟ್ಟಿಸಿಕೊಡಲು ಪ್ರಧಾನ ಮಂತ್ರಿ ಆವಾಜ್ ಯೋಜನೆಯಡಿಯಲ್ಲಿ ಹಣ ನೀಡುವಂತೆ ಕೇಂದ್ರ ಸರ್ಕಾರದ ಬಳಿ ಮನವಿ ಮಾಡಿದೆ.

ನೆರೆಪೀಡಿತ ಪ್ರದೇಶದ ನೋಟ

ಪ್ರಧಾನ‌ಮಂತ್ರಿ ಆವಾಜ್ ಯೋಜನೆ ಹಣಕ್ಕೆ ಬೇಡಿಕೆ:

ಈಗಾಗಲೇ‌ ನೆರೆಗೆ ಸಾವಿರಾರು ಮನೆಗಳು ಭಾಗಶ: ನೆಲ‌ ಕಚ್ಚಿ ಹೋಗಿವೆ‌. ಸುಮಾರು 40,000ಕ್ಕೂ ಅಧಿಕ ಮನೆಗಳು ನೆರೆಗೆ ಹಾನಿಯಾಗಿವೆ. ಸದ್ಯ ಮನೆಗಳನ್ನು ಕಟ್ಟಲು ರಾಜ್ಯ ಸರ್ಕಾರ ಸಂತ್ರಸ್ತರಿಗೆ ಐದು ಲಕ್ಷ ರೂ. ಪರಿಹಾರ ‌ನೀಡುತ್ತಿದೆ. ಕೇಂದ್ರ ಸರ್ಕಾರ ನೀಡಿರುವ 1,200 ಕೋಟಿ ರೂ. ನೆರೆ ಪರಿಹಾರ ‌ಹಣವನ್ನು ರಾಜ್ಯ ಸರ್ಕಾರ ಬೆಳೆ ನಷ್ಟದ ಪರಿಹಾರವಾಗಿ ನೀಡಲು ನಿರ್ಧರಿಸಿದೆ. ಆದರೆ ಮನೆ ಕಟ್ಟಲು ಅಪಾರ ಪ್ರಮಾಣದ ಹಣಬೇಕಾಗಿದ್ದು, ರಾಜ್ಯ ಸರ್ಕಾರ ಇದೀಗ ಪ್ರಧಾನ ಮಂತ್ರಿ ಆವಾಜ್ ಯೋಜನೆಯ ಅನುದಾನದತ್ತ ಮುಖ ಮಾಡಿದೆ.

ಮೊದಲ ಬಾರಿಗೆ ಮನೆ ನಿರ್ಮಿಸುವ ಬಡ ಹಾಗೂ ಮಧ್ಯಮ‌ ವರ್ಗದ‌ ಫಲಾನುಭವಿಗಳಿಗೆ ಪ್ರಧಾನ ಮಂತ್ರಿ ಆವಾಜ್ ಯೋಜನೆಯಡಿ ಸಹಾಯಧನ ರೂಪದಲ್ಲಿ ಹಣ‌ ನೀಡಲಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ₹75,000- ₹1,00,000 ರೂ. ಸಬ್ಸಿಡಿ ಮತ್ತು ನಗರ ಪ್ರದೇಶಗಳಲ್ಲಿ‌ ₹1.50 ಲಕ್ಷದಿಂದ ₹2 ಲಕ್ಷ ರೂ.ವರೆಗೆ ಮನೆಕಟ್ಟಲು ಸಬ್ಸಿಡಿ ‌ಹಣ ನೀಡಲಾಗುತ್ತದೆ. ಸದ್ಯ ಈ ಹಣವನ್ನು ನೆರೆ ಸಂತ್ರಸ್ತರಿಗೆ ನೀಡುವಂತೆ ಮನವಿ ಮಾಡಲಾಗಿದೆ.

ನಿರ್ಮಲಾ ಸೀತಾರಾಮನ್​​ಗೆ ಸಿಎಂ ಮನವಿ:

ಕಳೆದ‌ ತಿಂಗಳು 30ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಆವಾಜ್ ಯೋಜನೆ ಮೂಲಕ ನೆರೆ ಸಂತ್ರಸ್ತರಿಗೆ ಮನೆ ಕಟ್ಟಿಕೊಡುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಸಚಿವೆ ನಿರ್ಮಲಾ ಸೀತಾರಾಮನ್ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಈ ಸಂಬಂಧ ಪ್ರಸ್ತಾಪ ಸಲ್ಲಿಸಲು ರಾಜ್ಯ ಸರ್ಕಾರ ಇದೀಗ ಮುಂದಾಗಿದೆ.

Intro:Body:KN_BNG_02_PMAWAZYOJANAFUND_FLOODHITHOMES_SCRIPT_7201951

ಪ್ರಧಾನ‌ಮಂತ್ರಿ ಆವಾಜ್ ಯೋಜನೆಯಡಿ ನೆರೆ ಸಂತ್ರಸ್ತರಿಗೆ ‌ಮನೆ ಕಟ್ಟಿ ಕೊಡಲು ಕೇಂದ್ರಕ್ಕೆ ಮನವಿ!

ಬೆಂಗಳೂರು: ನೆರೆ ಪರಿಹಾರಕ್ಕೆ‌ ಸಂಪನ್ಮೂಲ ಕ್ರೋಢೀಕರಣಕ್ಕಾಗಿ ರಾಜ್ಯ ಸರ್ಕಾರ ನಾನಾ ಕಸರತ್ತು ನಡೆಸುತ್ತಿದೆ. ಇದೀಗ ರಾಜ್ಯ ಸರ್ಕಾರ ನೆರೆ ಪರಿಹಾರ ಕಾರ್ಯಕ್ಕಾಗಿ ಪ್ರಧಾನ‌ ಮಂತ್ರಿ ಆವಾಜ್ ಯೋಜನೆ ಹಣದತ್ತ ಮುಖ ಮಾಡಿದೆ.

ನೆರೆ ಪರಿಹಾರ ಕಾರ್ಯ ಕೈಗೊಳ್ಳಲು ರಾಜ್ಯ ಸರ್ಕಾರ ಹರ ಸಾಹಸ ಪಡುತ್ತಿದೆ. ಸೀಮಿತ ಸಂಪನ್ಮೂಲ ಹಾಗು ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗಿರುವ ಅಲ್ಪ ಪರಿಹಾರ ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಇದಕ್ಕಾಗಿ ಸರ್ಕಾರ ಹೊಸ ಯೋಜನೆಗಳಿಗೆ ಕತ್ತರಿ ಹಾಕಿ, ಪರಿಹಾರ ಕಾರ್ಯಕ್ಕೆ ಹಣ ಹೊಂದಿಸುತ್ತಿದೆ. ನಾನಾ ಮೂಲಗಳಿಂದ ಪರಿಹಾರ ಕಾರ್ಯಕ್ಕಾಗಿ ‌ಹಣ ಕ್ರೋಢೀಕರಿಸುತ್ತಿದೆ. ಇದೀಗ ರಾಜ್ಯ ಸರ್ಕಾರ ನೆರೆಯಿಂದ ಮನೆ ಹಾನಿಯಾದವರಿಗೆ ಮನೆ ಕಟ್ಟಿಸಿಕೊಡಲು ಪ್ರಧಾನ ಮಂತ್ರಿ ಆವಾಜ್ ಯೋಜನೆಯ ಹಣ ನೀಡಲು ಮಾಡಲು ಕೇಂದ್ರ ಸರ್ಕಾರದ ಬಳಿ ಮನವಿ ಮಾಡಿದೆ.

ಪ್ರಧಾನ‌ಮಂತ್ರಿ ಆವಾಜ್ ಯೋಜನೆ ಹಣಕ್ಕೆ ಬೇಡಿಕೆ:

ಈಗಾಗಲೇ‌ ನೆರೆಗೆ ಸಾವಿರಾರು ಮನೆಗಳು ಭಾಗಶ: ನೆಲ‌ ಕಚ್ಚಿ ಹೋಗಿವೆ‌. ಸುಮಾರು 40,000ಕ್ಕೂ ಅಧಿಕ ಮನೆಗಳು ನೆರೆಗೆ ಹಾನಿಯಾಗಿವೆ.

ಈ‌‌ ಮನೆಗಳನ್ನು ಕಟ್ಟಲು ರಾಜ್ಯ ಸರ್ಕಾರ ಸಂತ್ರಸ್ತರಿಗೆ ಐದು ಲಕ್ಷ ರೂ. ಪರಿಹಾರ ‌ನೀಡುತ್ತಿದೆ. ಕೇಂದ್ರ‌ ಸರ್ಕಾರ ನೀಡಿರುವ 1,200 ಕೋಟಿ ರು. ನೆರೆ ಪರಿಹಾರ ‌ಹಣವನ್ನು ರಾಜ್ಯ ಸರ್ಕಾರ ಬೆಳೆ ನಷ್ಟದ ಪರಿಹಾರವಾಗಿ ನೀಡಲು ನಿರ್ಧರಿಸಿದೆ.

ಮನೆ ಕಟ್ಟಲು ಅಪಾರ ಪ್ರಮಾಣದ‌ ಹಣ ಬೇಕಾಗಿರುವುದರಿಂದ ಅದಕ್ಕಾಗಿ ಸಂಪನ್ಮೂಲ ಕ್ರೋಢೀಕರಣಕ್ಕಾಗಿ ರಾಜ್ಯ ಸರ್ಕಾರ ಇದೀಗ ಪ್ರಧಾನ ಮಂತ್ರಿ ಆವಾಜ್ ಯೋಜನೆಯ ಅನುದಾನದತ್ತ ಮುಖ ಮಾಡಿದೆ.

ಮೊದಲ ಬಾರಿಗೆ ಮನೆ ನಿರ್ಮಿಸುವ ಬಡ ಹಾಗು ಮಧ್ಯಮ‌ ವರ್ಗದ‌ ಫಲಾನುಭವಿಗಳಿಗೆ ಪ್ರಧಾನ ಮಂತ್ರಿ ಆವಾಜ್ ಯೋಜನೆಯಡಿ ಸಹಾಯಧನ ರೂಪದಲ್ಲಿ ಹಣ‌ ನೀಡಲಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಮನೆ ಕಟ್ಟುವವರಿಗೆ 75,000-1,00,000 ರು. ಸಬ್ಸಿಡಿ ನೀಡಲಾಗುತ್ತದೆ. ಇನ್ನು ನಗರ ಪ್ರದೇಶಗಳಲ್ಲಿ‌ ಮನೆ ಕಟ್ಟುವವರಿಗೆ 1.50-2 ಲಕ್ಷ ರು. ವರೆಗೆ ಸಬ್ಸಿಡಿ ‌ಹಣ ನೀಡಲಾಗುತ್ತದೆ. ಈ ಹಣವನ್ನು ನೆರೆ ಹಾನಿಗೊಳಗಾದ ಮನೆ ಕಟ್ಟುವವರಿಗೆ ಕೊಡಲು ಮನವಿ ಮಾಡಲಾಗಿದೆ.

ನಿರ್ಮಲಾ ಸೀತಾರಾಮನ್ ಗೆ ಸಿಎಂ ಮನವಿ:

ಕಳೆದ‌ ತಿಂಗಳು 30ಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಜ್ಯಕ್ಕೆ ಭೇಟಿ ನೀಡಿದ ವೇಳೆ ಸಿಎಂ ಯಡಿಯೂರಪ್ಪ ಈ ಬಗ್ಗೆ ಮನವಿ ಮಾಡಿದ್ದಾರೆ.

ಪ್ರಧಾನ ಮಂತ್ರಿ ಆವಾಜ್ ಯೋಜನೆ ಮೂಲಕ ನೆರೆ ಸಂತ್ರಸ್ತರಿಗೆ ಮನೆ ಕಟ್ಟಿಕೊಡುವಂತೆ ಸಿಎಂ ಮನವಿ ಮಾಡಿದ್ದಾರೆ. ಇದಕ್ಕೆ ಸಚಿವೆ ನಿರ್ಮಲಾ ಸೀತಾರಾಮನ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ಸಂಬಂಧ ಪ್ರಸ್ತಾಪ ಸಲ್ಲಿಸಲು ರಾಜ್ಯ ಸರ್ಕಾರ ಇದೀಗ ಮುಂದಾಗಿದೆ.Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.