ಬೆಂಗಳೂರು: ಕೋವಿಡ್-19 ಸ್ಥಿತಿಯನ್ನ ನಿಭಾಯಿಸಲು ಭಾರತ ಸರ್ಕಾರದ ಸ್ಮಾರ್ಟ್ ಸಿಟಿ ಅಭಿಯಾನ ಕರ್ನಾಟಕಕ್ಕೆ ಬೆಂಬಲ ನೀಡಲಿದೆ. ಆರೋಗ್ಯ ಕ್ಷೇತ್ರದ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ಒತ್ತು ನೀಡಲಾಗಿದ್ದು, ಈಗಾಗಲೇ ಹಲವು ಆಸ್ಪತ್ರೆಗಳಲ್ಲಿ ಹಾಸಿಗೆಗಳ ಹೆಚ್ಚಳ, ಹೊಸ ವಿಭಾಗ ಆರಂಭ, ಕಟ್ಟಡ ನಿರ್ಮಾಣಕ್ಕೆ ಚಾಲನೆ ಮೊದಲಾದ ಕಾರ್ಯಕ್ರಮಗಳನ್ನು ಜಾರಿ ಮಾಡಲಾಗಿದೆ.
ಸ್ಮಾರ್ಟ್ ಮಿಷನ್ ಅಡಿಯಲ್ಲಿ ಈಗಾಗಲೇ ಕೆಲ ಆರೋಗ್ಯ ಯೋಜನೆಗಳನ್ನು ಕೈಗೊಳ್ಳಲಾಗಿದೆ. ಬೆಳಗಾವಿಯ ಒಂಟಮುರಿಯಲ್ಲಿರುವ 30 ಹಾಸಿಗೆಗಳ ಆಸ್ಪತ್ರೆಯನ್ನು ಸೇರಿದೆ. ಜತೆಗೆ ಬೆಳಗಾವಿಯ ಅಪಘಾತ ಕೇಂದ್ರದಲ್ಲಿ ಎರಡು ವಿಭಾಗಗಳನ್ನು ಕೂಡ ನಿರ್ಮಿಸಲಾಗಿದೆ. ಈಗ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ 37 ಹಾಸಿಗೆಗಳ ತೀವ್ರ ನಿಗಾ ಘಟಕವನ್ನು ಸ್ಮಾರ್ಟ್ ಮಿಷನ್ ಅನುದಾನದಲ್ಲಿ ನಿರ್ಮಿಸಲಾಗುತ್ತಿದೆ.
ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಎರಡು ಹಂತಗಳ ಯೋಜನೆಗಳನ್ನು ರೂಪಿಸಲಾಗಿದೆ. ತುಮಕೂರಿನ ಡಿಜಿಟಲ್ ನರ್ವ್ ಸೆಂಟರ್ ಮತ್ತು ಹುಬ್ಬಳ್ಳಿ,- ಧಾರವಾಡದಲ್ಲಿ ಸ್ಮಾರ್ಟ್ ಹೆಲ್ತ್‌ಕೇರ್ ಸೆಂಟರ್ ಆರಂಭಿಸಲಾಗಿದೆ.
ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯಲ್ಲಿ ಹೆಚ್ಚುವರಿ ಅಂತಸ್ತಿನ ನಿರ್ಮಾಣಕ್ಕೆ ಟೆಂಡರ್ ನೀಡಲಾಗಿದೆ. ತುಮಕೂರಿನಲ್ಲಿ ಅಪಘಾತ ಕೇಂದ್ರ ಮತ್ತು ಬೆಳಗಾವಿಯ ವಡಗಾಂವ್ನಲ್ಲಿ 10 ಆಸ್ಪತ್ರೆಗಳ ನಿರ್ಮಾಣ ನಡೆಯುತ್ತಿದೆ. ಜಿಲ್ಲಾ ಆಸ್ಪತ್ರೆಗಳಲ್ಲಿ ಮೂಲಸೌಕರ್ಯ ಮತ್ತು ಉಪಕರಣಗಳನ್ನು ಮೇಲ್ದರ್ಜೆಗೇರಿಸುವ ಹಾಗೂ ಆ್ಯಂಬುಲೆನ್ಸ್ ಮತ್ತು ಉಪಕರಣಗಳನ್ನು ಪಡೆದುಕೊಳ್ಳುವ ಕಾರ್ಯ ಕೈಗೊಳ್ಳುತ್ತಿದೆ.