ETV Bharat / state

ಕನ್ನಡ ಕಣ್ಮಣಿ ಡಾ. ರಾಜ್​ಕುಮಾರ್​ ಪುಣ್ಯತಿಥಿ ಈ ಸಾರಿ ಸರಳಾತಿಸರಳ..

ಈ ವರ್ಷ ಕೊರೊನಾ ತಡೆಯುವ ಸಲುವಾಗಿ ದೇಶ ಪಾಲಿಸುತ್ತಿರುವ ಲಾಕ್​ಡೌನ್​ನಿಂದಾಗಿ ಯಾವುದೇ ಆಚರಣೆಗಳಿಗೆ ಅವಕಾಶವಿಲ್ಲ. ಈ ಬಾರಿ ಏಪ್ರಿಲ್ 12ರಂದು ಮನೆಯ ಮಟ್ಟಿಗೆ ಪುಣ್ಯತಿಥಿ ನಡೆಯಲಿದೆ. ಆದರೆ, ಕಂಠೀರವ ಸ್ಟುಡಿಯೋದಲ್ಲಿ ಯಾವುದೇ ಆಚರಣೆ ಇರುವುದಿಲ್ಲ.

author img

By

Published : Apr 3, 2020, 9:59 AM IST

Updated : Apr 3, 2020, 11:08 AM IST

Simple celebration of Dr RajKumar ritual program
ಕನ್ನಡ ಕಣ್ಮಣಿ ಡಾ. ರಾಜ್​ಕುಮಾರ್​ ಪುಣ್ಯ ತಿಥಿ ಸರಳ ಆಚರಣೆ

ಡಾ. ರಾಜಕುಮಾರ್ ಅವರು ಏಪ್ರಿಲ್‌ 12, 2006ರಂದು ಕಾಲವಾದ ಮೇಲೆ ಆ ದಿವಸವನ್ನು ಸ್ಮರಣೆ ಮಾಡಿಕೊಳ್ಳುತ್ತ ಅವರ ಸ್ಮಾರಕದ ಬಳಿ ಮತ್ತು ಮನೆಯಲ್ಲಿ ಪುಣ್ಯ ತಿಥಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಅದೇ ರೀತಿ ಏಪ್ರಿಲ್ 24 ಬಂತೆಂದರೆ ಡಾ. ರಾಜಕುಮಾರ್ ಅವರ ಹುಟ್ಟುಹಬ್ಬವನ್ನು ಕರ್ನಾಟಕದಾದ್ಯಂತ ಆಚರಿಸಲಾಗುತ್ತದೆ.

Simple celebration of Dr RajKumar ritual program
ಕಂಠೀರವ ಸ್ಟುಡಿಯೋದಲ್ಲಿನ ಡಾ. ರಾಜ್​ಕುಮಾರ್​ ಸ್ಮಾರಕ

ಆದರೆ, ಈ ವರ್ಷ ಕೊರೊನಾ ತಡೆಯುವ ಸಲುವಾಗಿ ದೇಶ ಪಾಲಿಸುತ್ತಿರುವ ಲಾಕ್​ಡೌನ್​ನಿಂದಾಗಿ ಯಾವುದೇ ಆಚರಣೆಗಳಿಗೆ ಅವಕಾಶವಿಲ್ಲ. ಈ ಬಾರಿ ಏಪ್ರಿಲ್ 12ರಂದು ಮನೆಯ ಮಟ್ಟಿಗೆ ಪುಣ್ಯತಿಥಿ ನಡೆಯಲಿದೆ. ಆದರೆ, ಕಂಠೀರವ ಸ್ಟುಡಿಯೋದಲ್ಲಿ ಯಾವುದೇ ಆಚರಣೆ ಇರುವುದಿಲ್ಲ.

ಒಂದು ವೇಳೆ ಏಪ್ರಿಲ್ 14 ರಂದು ‘ಲಾಕ್ ಡೌನ್’ ಲಿಫ್ಟ್ ಆದರೆ ಏಪ್ರಿಲ್ 24 ರಂದು ಡಾ. ರಾಜ್‌ಕುಮಾರ್ ಸ್ಮಾರಕದಲ್ಲಿ ಆಚರಣೆಗೆ ಸಾಧ್ಯತೆಯಿದೆ. ಅಷ್ಟೇ ಅಲ್ಲ, ರಾಜ್ಯ ಸರ್ಕಾರ ಕನ್ನಡ ಚಲನಚಿತ್ರ ಪ್ರಶಸ್ತಿ ಕಾರ್ಯಕ್ರಮವನ್ನು ಡಾ. ರಾಜಕುಮಾರ್ ಜನ್ಮ ದಿನವಾದ ಏಪ್ರಿಲ್ 24ಕ್ಕೆ ಆಯೋಜಿಸಬೇಕು ಎಂದು ಅಂದುಕೊಂಡಿದೆ.

Last Updated : Apr 3, 2020, 11:08 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.